ETV Bharat / state

ಕನ್ನಡ ಉರ್ದು, ಮರಾಠಿ, ತಮಿಳು ಯಾವುದೇ ಶಾಲೆಗಳಿದ್ದರೂ ಮುಚ್ಚೋದಿಲ್ಲ, ವಿಲೀನ ಮಾಡ್ತೇವೆ.. ಬಿ ಸಿ ನಾಗೇಶ್‌

author img

By

Published : Apr 22, 2022, 1:57 PM IST

ಚಿಕ್ಕಮಗಳೂರು ನಗರದ ಜೂನಿಯರ್ ಕಾಲೇಜಿನಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಸಚಿವ ಬಿ.ಸಿ.ನಾಗೇಶ್ ಪರೀಕ್ಷಾ ಕೊಠಡಿಗಳ ಪರಿಶೀಲನೆ ನಡೆಸಿದರು..

ಪಿಯು ಪರೀಕ್ಷಾ ಕೇಂದ್ರಕ್ಕೆ ಸಚಿವ ನಾಗೇಶ್ ಭೇಟಿ
ಪಿಯು ಪರೀಕ್ಷಾ ಕೇಂದ್ರಕ್ಕೆ ಸಚಿವ ನಾಗೇಶ್ ಭೇಟಿ

ಚಿಕ್ಕಮಗಳೂರು : ಇಂದಿನಿಂದ ಪಿಯುಸಿ ಪರೀಕ್ಷೆ ಆರಂಭವಾದ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಲ್ಲಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪರಿಶೀಲಿಸಿದ್ದಾರೆ. ನಗರದ ಜೂನಿಯರ್ ಕಾಲೇಜಿನಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷಾ ಕೊಠಡಿಗಳ ಪರಿಶೀಲನೆಯನ್ನು ಸಚಿವರು ನಡೆಸಿದರು.

ಜಿಲ್ಲೆಯಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ 9671 ಇದ್ದು, ಹದಿನೆಂಟು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. 4,597 ಬಾಲಕರು, 5074 ಬಾಲಕಿಯರು ಪರೀಕ್ಷೆ ಎದುರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಣ ಸಚಿವ ನಾಗೇಶ್, ಮಕ್ಕಳು ತುಂಬಾ ವಿಶ್ವಾಸದಲ್ಲಿದ್ದಾರೆ. ರಾಜ್ಯದಲ್ಲಿ ಬಾಲಕರು, ಬಾಲಕಿಯರು ಸಮಪಾಲು ಬರೆಯುತ್ತಿದ್ದಾರೆ. ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಗೈರಾಗುವುದು ಸಾಮಾನ್ಯ. ಆದರೆ, ಎಸ್​ಎಸ್​ಎಲ್​ಸಿ ರೀತಿ ಪಿಯುಸಿಯಲ್ಲಿ ಗೈರು ಹಾಜರಾಗುವುದಿಲ್ಲ. ಪರೀಕ್ಷೆ ಸುಗಮವಾಗಿ ನಡೆಯುವ ವಿಶ್ವಾಸ ಇದೆ ಎಂದರು.

ಪಿಯು ಪರೀಕ್ಷಾ ಕೇಂದ್ರಕ್ಕೆ ಸಚಿವ ನಾಗೇಶ್ ಭೇಟಿ ನೀಡಿ ಪರಿಶೀಲಿಸಿರುವುದು..

ಮುಚ್ಚುವುದಿಲ್ಲ, ವಿಲೀನ ಮಾಡುತ್ತೇವೆ : ಉರ್ದು ಶಾಲೆ ಮುಚ್ಚುವ ಚಿಂತನೆ ಇಲ್ಲ. ಆದರೆ, ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಒಂಟಿ ಶಾಲೆಗಳನ್ನು ವಿಲೀನ ಮಾಡಲಾಗುವುದು ಎಂದು ಇದೇ ಸಂಭರ್ದದಲ್ಲಿ ಸಚಿವರು ಸ್ಪಪ್ಟಪಡಿಸಿದರು. ಕಲಿಕೆ ಹಾಗೂ ಮಕ್ಕಳ ನಡುವೆ ಪ್ರತಿಸ್ಪರ್ಧೆ, ಉತ್ತಮ ಶಿಕ್ಷಣ ನೀಡಲು ಒಗ್ಗೂಡಿಸಲಾಗುವುದು. ಯಾವುದೇ ಶಾಲೆಗಳನ್ನು ಮುಚ್ಚುವುದಿಲ್ಲ, ವಿಲೀನ ಮಾಡುತ್ತೇವೆ. ಕನ್ನಡ ಶಾಲೆಯಲ್ಲಿದರೂ, ಉರ್ದು, ಮರಾಠಿ, ತಮಿಳು ಶಾಲೆ ಇದ್ದರೂ ವಿಲೀನ ಮಾಡಲಾಗುತ್ತದೆ ಎಂದರು.

ಇದನ್ನೂ ಓದಿ: ಉಡುಪಿ: ಹಿಜಾಬ್​ ಧರಿಸಿ ಬಂದ ಇಬ್ಬರಿಗೆ ಪರೀಕ್ಷಾ ಕೇಂದ್ರಕ್ಕೆ ನೋ ಎಂಟ್ರಿ..ಎಕ್ಸಾಂ ಬರೆಯದೇ ಹೊರನಡೆದ ವಿದ್ಯಾರ್ಥಿನಿಯರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.