ETV Bharat / state

ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದ ಮಹಿಳೆಗೆ ದೌರ್ಜನ್ಯ ಪ್ರಕರಣ: ಇಬ್ಬರ ಬಂಧನ

author img

By

Published : Jun 23, 2023, 11:00 PM IST

Updated : Jun 24, 2023, 8:46 PM IST

ಕನ್ನಡಕ ವ್ಯಾಪಾರ ಮಾಡುತ್ತಿದ್ದ ಮಹಿಳೆಯ ಮೇಲೆ ದೌರ್ಜನ್ಯ ಎಸಗಿ, ಕನ್ನಡಕಗಳನ್ನು ಒಡೆದು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Etv Bharatcrime-arrest-two-young-mans-for-harassment-on-a-street-vendor-woman-in-chikkamagaluru
ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದ ಮಹಿಳೆ ಮೇಲೆ ದೌರ್ಜನ್ಯ ಪ್ರಕರಣ: ಇಬ್ಬರ ಬಂಧನ

ಚಿಕ್ಕಮಗಳೂರು: ಕೋಟೆ ಕೆರೆ ರಸ್ತೆ ಬದಿ ಕನ್ನಡಕ ವ್ಯಾಪಾರ ಮಾಡುತ್ತಿದ್ದ ಮಹಿಳೆಯ ಮೇಲೆ ದೌರ್ಜನ್ಯ ಎಸಗಿ, ಕನ್ನಡಕಗಳನ್ನು ಒಡೆದು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಮೂಲದ ಜೀವನ್, ಚಿಕ್ಕಮಗಳೂರು ನಗರದ ರಾಮನಹಳ್ಳಿ ನಿವಾಸಿ ವಿನೋದ್ ಬಂಧಿತ ಆರೋಪಿಗಳು.

ಮಹಿಳೆ ಕೋಟೆ ಕೆರೆ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದರು. ಈ ವೇಳೆ ಮತ್ತಿನಲ್ಲಿದ್ದ ಯುವಕರು ಕನ್ನಡಕ ಬೇಕೆಂದು ಹೇಳಿ ತೆಗೆದುಕೊಂಡಿದ್ದಾರೆ. ಇದಾದ ಬಳಿಕ ಕನ್ನಡಕದ ಹಣ ಕೇಳಿದ್ದಕ್ಕೆ ಕನ್ನಡಕಗಳನ್ನು ಪುಡಿ ಮಾಡಿ ಪುಂಡಾಟಿಕೆ ಮೆರೆದಿದ್ದಾರೆ. ಅಷ್ಟೇ ಅಲ್ಲದೆ ಮಹಿಳೆಯ ಮೇಲೂ ದೌರ್ಜನ್ಯ ಮಾಡಿದ್ದಾರೆ. ಬಳಿಕ ಅಲ್ಲಿಂದ ಬೈಕ್​ನಲ್ಲಿ ಪರಾರಿಯಾಗಿದ್ದಾರೆ. ಯುವಕರ ಈ ಕೃತ್ಯವನ್ನ ಸ್ಥಳೀಯರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲು ಆಗಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳಾ ವ್ಯಾಪಾರಿ ಮೇಲೆ ದೌರ್ಜನ್ಯ ಸಂಬಂಧ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ.

ನಿಧಿಗಾಗಿ 15 ಅಡಿ ಅಗಲ, 25 ಅಡಿ ಆಳ ಗುಂಡಿ ತೋಡಿದ ದುಷ್ಕರ್ಮಿಗಳು: ಮತ್ತೊಂದೆಡೆ, ನಿಧಿಗಾಗಿ ದುಷ್ಕರ್ಮಿಗಳು ನಿರ್ಜನ ಪ್ರದೇಶದಲ್ಲಿ 15 ಅಡಿ ಅಗಲ ಹಾಗೂ 25 ಅಡಿಯಷ್ಟು ಆಳದ ಬೃಹತ್ ಗುಂಡಿ ತೋಡಿ ನಿಧಿಗಾಗಿ ಶೋಧ ನಡೆಸಿರುವ ಘಟನೆ ತಾಲೂಕಿನ ಆಣೂರು ಸಮೀಪದ ಕೆಸರಿಕೆ ಗ್ರಾಮದಲ್ಲಿ ನಡೆದಿದೆ. ಉಡುಪಿ ನೋಂದಣಿ ಹೊಂದಿರುವ ಎರಡು ಕಾರುಗಳಲ್ಲಿ ಬಂದಿದ್ದ 15ಕ್ಕೂ ಹೆಚ್ಚು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಿಧಿಗಾಗಿ ಶೋಧ ನಡೆಸಿದ ಜಾಗದಲ್ಲಿ ಅರಿಶಿನ-ಕುಂಕುಮ, ಬಾಳೆಹಣ್ಣು, ತೆಂಗಿನಕಾಯಿ, ಕುಂಬಳಕಾಯಿ, ಊದು ಬತ್ತಿ, ಕರ್ಪೂರ, ಮೂರು ತರದ ದಾರ, ಕೋಳಿ ಸೇರಿದಂತೆ ವಿವಿಧ ವಸ್ತುಗಳು ಪತ್ತೆಯಾಗಿವೆ.

ಗುಂಡಿ ತೋಡಿ ನಿಧಿಗಾಗಿ ವಾಮಾಚಾರ ಆರೋಪ

ಇದೇ ತಿಂಗಳು 18ರಂದು ಅಮಾವಾಸ್ಯೆ ಇದ್ದ ಹಿನ್ನೆಲೆಯಲ್ಲಿ ಅಂದು ನಿಧಿಗಾಗಿ ಶೋಧ ಕಾರ್ಯ ನಡೆದಿರುವ ಸಾಧ್ಯತೆಗಳು ಹೆಚ್ಚಾಗಿವೆ. ಕರಾವಳಿಯಿಂದ ಆಗಮಿಸಿದ ಕೆಲ ದುಷ್ಕರ್ಮಿಗಳು ನಿಧಿಗಾಗಿ ಶೋಧ ಕಾರ್ಯ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಳೆದೊಂದು ವಾರದಿಂದ ರಸ್ತೆ ಬದಿ ಎರಡು ಮೂರು ಗಾಡಿಗಳು ನಿಲ್ಲುತ್ತಿದ್ದವು. ಸ್ಥಳೀಯರಿಗೆ ಅನುಮಾನ ಕೂಡ ಮೂಡಿತ್ತು.

crime-arrest-two-young-mans-for-harassment-on-a-street-vendor-woman-in-chikkamagaluru
ನಿಧಿಗಾಗಿ 15 ಅಡಿ ಅಗಲ, 25 ಅಡಿ ಆಳ ಗುಂಡಿ ತೋಡಿದ ದುಷ್ಕರ್ಮಿಗಳು

ಕಳೆದ ರಾತ್ರಿ ತೋಟಕ್ಕೆ ನೀರಾಯಿಸಲು ಸ್ಥಳೀಯರು ಹೋಗುವಾಗಲೂ ರಸ್ತೆ ಬದಿ ಎರಡು ಕಾರುಗಳು ನಿಂತಿದ್ದವು. ತೋಟಕ್ಕೆ ನೀರಿನ ಮೋಟಾರ್ ಆನ್ ಮಾಡಿ ಬರುವಾಗ ತೋಟದ ಮಧ್ಯೆ ಗಲಾಟೆ ಹಾಗೂ ಬೆಳಕು ಕಾಣುತ್ತಿತ್ತು. ಇದನ್ನ ಗಮನಿಸಿದ ಸ್ಥಳೀಯರು ಊರಿಗೆ ಬಂದು ನಾಲ್ಕೈದು ಜನ ಸ್ಥಳಕ್ಕೆ ಹೋಗಿ ಟಾರ್ಚ್ ಆನ್ ಮಾಡಿ ಯಾರೆಂದು ಕೇಳಿದಾಗ ಎಲ್ಲರೂ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಸ್ಥಳದಲ್ಲಿದ್ದ ಗುಂಡಿಯನ್ನು ಕಂಡು ಸ್ಥಳೀಯರು ಆತಂಕಗೊಂಡಿದ್ದಾರೆ. ಸ್ಥಳದಲ್ಲಿದ್ದ ವಾಮಾಚಾರದ ವಸ್ತುಗಳನ್ನು ಕಂಡು ವಾಮಾಚಾರ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಬಳಿಕ ಸ್ಥಳೀಯರು ಆಲ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೆಸರಿಕೆ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ರಾಮನಗರ: ಕರ್ತವ್ಯ ವೇಳೆಯಲ್ಲೇ 'ಗುಂಡು' ಹಾಕಿದ ಎಎಸ್ಐ; ಮೂವರು ಸಸ್ಪೆಂಡ್‌!

Last Updated : Jun 24, 2023, 8:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.