ETV Bharat / state

ಪರಿಶುದ್ಧ ಗಾಳಿ ಇರುವ ದೇಶದ ಟಾಪ್ 10 ಸಿಟಿ ಪಟ್ಟಿ ಬಿಡುಗಡೆ.. ಚಿಕ್ಕಮಗಳೂರು ಸೇರಿ ರಾಜ್ಯದ 8 ನಗರಗಳಿಗೆ ಸ್ಥಾನ

author img

By ETV Bharat Karnataka Team

Published : Oct 7, 2023, 10:37 PM IST

ಉತ್ತಮ ವಾಯುಗುಣ ಇರುವ ಟಾಪ್ 10 ನಗರಗಳ ಹೆಸರಿನ ಪಟ್ಟಿಯ ವರದಿಯನ್ನು ರೆಸ್ಪೈರ್ ಲಿವಿಂಗ್ ಸೈನ್ಸಸ್ ಮತ್ತು ಕ್ಲೈಮೇಟ್ ಟ್ರೆಂಡ್ಸ್​​ ಬಿಡುಗಡೆಗೊಳಿಸಿದೆ.

Chikmagalur Climate
ಚಿಕ್ಕಮಗಳೂರ ವಾಯುಗುಣ

ಚಿಕ್ಕಮಗಳೂರು: ಉತ್ತಮ ವಾಯುಗುಣ ಹೊಂದಿರುವ ಟಾಪ್ 10 ನಗರಗಳ ಪಟ್ಟಿಯನ್ನು ರೆಸ್ಪೈರ್ ಲಿವಿಂಗ್ ಸೈನ್ಸಸ್ ಮತ್ತು ಕ್ಲೈಮೇಟ್ ಟ್ರೆಂಡ್ಸ್​​(Spire Living Sciences and Climate Trends) ಬಿಡುಗಡೆಗೊಳಿಸಿದೆ. ಅದರಲ್ಲಿ ಉತ್ತಮ ವಾಯುಗುಣ ಹೊಂದಿರುವ ಭಾರತದ ಅಗ್ರ 10 ಸ್ಥಾನಗಳಲ್ಲಿ ಕರ್ನಾಟಕದ ಎಂಟು ನಗರಗಳು ಸ್ಥಾನ ಪಡೆದುಕೊಂಡಿವೆ.

ಅದರಲ್ಲಿ ರಾಜ್ಯದಿಂದ ಚಿಕ್ಕಮಗಳೂರು ಜಿಲ್ಲೆಯ ಹೆಸರು ಮುಂಚೂಣಿಯಲ್ಲಿರುವುದು ಜನತೆಗೆ ಸಂಭ್ರಮ ಖುಷಿ ತಂದಿದೆ. ಭಾರತದಲ್ಲಿ ಅತ್ಯುತ್ತಮ ಶುದ್ಧಗಾಳಿ ಇರುವ ಟಾಪ್​ 10 ಸ್ಥಳಗಳ ಪೈಕಿ ಕರ್ನಾಟಕ ಮೇಲುಗೈ ಸಾಧಿಸಿದೆ. ಟಾಪ್ 10 ರ ಪೈಕಿ ರಾಜ್ಯದ 8 ನಗರಗಳಿಗೆ ಈ ಸ್ಥಾನ ದೊರಕುವ ಮೂಲಕ ಇಡೀ ದೇಶದಲ್ಲೇ ಕರ್ನಾಟಕ ಅತ್ಯಂತ ಶುದ್ಧ ಗಾಳಿ ಇರುವ ರಾಜ್ಯವೆಂಬ ಗರಿ ಕರುನಾಡಿಗೆ ಸಿಕ್ಕಿದೆ.

ಅತ್ಯಂತ ಶುದ್ಧ ಗಾಳಿ ಇರುವ ಟಾಪ್ 10 ನಗರ ಆಯ್ಕೆ ಹೇಗೆ?.. ರೆಸ್ಪೈರರ್ ಲಿವಿಂಗ್ ಸೈನ್ಸಸ್ ನ ಉಪ ಕ್ರಮ ರೆಸ್ಪೈರ್ ರಿಪೋರ್ಟ್ಸ್ ವೂ ಎರಡು ರೀತಿಯಲ್ಲಿ ಗಾಳಿಯ ಗುಣ ಮಟ್ಟದ ಡೇಟಾವನ್ನು ವಿಶ್ಲೇಷಿಸುತ್ತದೆ. ಮೊದಲನೆಯದು ಸರ್ಕಾರದ ಡೇಟಾದಲ್ಲಿ ಎನ್.ಸಿ.ಆರ್ ಮತ್ತು ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದಲ್ಲಿ ಪಟ್ಟಿ ಮಾಡಿರುವ ಇತರ ನಗರಗಳಲ್ಲಿ ಹಿಂದಿನ ವರ್ಷಕ್ಕಿಂತ ವಾಯುಗುಣಮಟ್ಟದ ಸುಧಾರಣೆಯನ್ನು ಪತ್ತೆ ಹಚ್ಚಲು ವರ್ಷದ (1 ಅಕ್ಟೋಬರ್, 2022 ರಿಂದ 30 ಸೆಪ್ಟೆಂಬರ್, 2023) ಮಾಹಿತಿಯನ್ನು ಕಲೆಹಾಕಿ ವಿಶ್ಲೇಷಣೆ ಮಾಡಲಿದೆ.

ಮಿಜೋರಾಂನ ಐಜ್ವಾಲ್ ಮೊದಲ ಸ್ಥಾನ: ಇನ್ನೊಂದು ಕಡೆ ಚಳಿಗಾಲದಲ್ಲಿನ ಡೇಟಾ, ಅಕ್ಟೋಬರ್-ಮಾರ್ಚ್ ಮಾಲಿನ್ಯದ ಮಟ್ಟಗಳು ಹೆಚ್ಚಾದಾಗ ಅದರ ಮಾಹಿತಿ ಪಡೆದು ವಿಶ್ಲೇಷಣೆ ಮಾಡಿ ಅತ್ಯಂತ ಶುದ್ಧ ಗಾಳಿ ಇರುವ ನಗರ ಪತ್ತೆ ಮಾಡಲಾಗುತ್ತದೆ. ಅತ್ಯಂತ ಶುದ್ಧ ಗಾಳಿ ಇರುವ ನಗರಗಳ ಪಟ್ಟಿಗಳಲ್ಲಿ ಮಿಜೋರಾಂನ ಐಜ್ವಾಲ್ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಕರ್ನಾಟಕದ ಚಿಕ್ಕಮಗಳೂರು 3ನೇ ಸ್ಥಾನದಲ್ಲಿ ಹರಿಯಾಣದ ಮಂಡಿಖೇರಾ ನಗರವಿದೆ.

ರೆಸ್ಪೈರ್ ಲಿವಿಂಗ್ ಸೈನ್ಸಸ್ ಮತ್ತು ಕ್ಲೈಮೇಟ್ ಟ್ರೆಂಡ್ಸ್​​ ವರದಿ ಪ್ರಕಾರ ಉಳಿದಂತೆ ಎಂಟು ಸ್ಥಾನಗಳಲ್ಲಿ ಕ್ರಮವಾಗಿ ಚಾಮರಾಜನಗರ, ಮಡಿಕೇರಿ, ವಿಜಯಪುರ, ರಾಯಚೂರು, ಶಿವಮೊಗ್ಗ, ಗದಗ, ಮೈಸೂರು ಸ್ಥಾನ ಪಡೆದಿವೆ. ಚಿಕ್ಕಮಗಳೂರು ಜಿಲ್ಲೆಗೆ ಎರಡನೇ ಸ್ಥಾನ ಬಂದಿರುವುದು ಜಿಲ್ಲೆಯ ಹೆಸರು ಇನ್ನಷ್ಟು ಉತ್ತಂಗಕ್ಕೆ ಏರಿದಂತಾಗಿದೆ..

ಇದನ್ನೂ ಓದಿ : ಜಾಗತಿಕ ಮಟ್ಟದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿ: ದಾವಣಗೆರೆ ವಿವಿಯ 7 ಮಂದಿಗೆ ಸ್ಥಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.