ETV Bharat / state

ಚೂರಿ ಇರಿದು ಕೋರ್ಟ್​ಗೆ ಶರಣಾದ ಆರೋಪಿ... ಮಂಗಳೂರು ಆಸ್ಪತ್ರೆಯಲ್ಲಿ ಯುವತಿ ನರಳಾಟ

author img

By

Published : Sep 19, 2019, 10:26 PM IST

ಎರಡು ದಿನಗಳ ಹಿಂದೆ ಚಿಕ್ಕಮಗಳೂರಲ್ಲಿ ಯುವತಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಾನಾಗಿಯೇ ನೇರವಾಗಿ ನ್ಯಾಯಾಲಯಕ್ಕೆ ಬಂದು ಶರಣಾಗಿದ್ದಾನೆ. ಮತ್ತೊಂದೆಡೆ ಯುವತಿ ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾಳೆ.

ಚೂರಿ ಇರಿತ ಪ್ರಕರಣ

ಚಿಕ್ಕಮಗಳೂರು: ಯುವತಿಗೆ ಚೂರಿ ಇರಿದಿದ್ದ ಆರೋಪಿ ಎರಡು ದಿನಗಳ ಬಳಿಕ ನೇರವಾಗಿ ನ್ಯಾಯಾಲಯದ ಮುಂದೆ ಬಂದು ಶರಣಾಗಿದ್ದಾನೆ.

ಚೂರಿ ಇರಿತಕ್ಕೊಳಗಾಗಿದ್ದ ಯುವತಿ

ಜಿಲ್ಲೆಯ ಬಾಳೆಹೊನ್ನೂರು-ಕಳಸ ಮಧ್ಯೆ ಬರುವ ಮಾಲಗೋಡು ಗ್ರಾಮದ ಬಳಿ ಗಡಿಗೇಶ್ವರದ ಮಿಥುನ್ ಎಂಬ ಯುವಕ ಬಾಳೆಹೊನ್ನೂರು ಬಳಿಯ ಬಾಸಾಪುರದ ಯುವತಿಗೆ ಎರಡು ದಿನಗಳ ಹಿಂದೆ 8 ರಿಂದ 10 ಬಾರಿ ಚೂರಿಯಿಂದ ಇರಿದು ಪರಾರಿಯಾಗಿದ್ದ.

Chikkamagaluru knife stabbing case
ಆರೋಪಿ ಮಿಥುನ್

ಗಂಭೀರವಾಗಿ ಗಾಯಗೊಂಡ ಯುವತಿ ರಸ್ತೆಯಲ್ಲಿ ಬಿದ್ದು ನರಳಾಡುವುದನ್ನು ನೋಡಿದ್ದ ಸ್ಥಳೀಯರು, ಆಕೆಯನ್ನು ಕಳಸ ಆಸ್ಪತ್ರೆಗೆ ದಾಖಲಿಸಿದ್ದರು. ಯುವತಿಯ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆ ಆಕೆಯನ್ನು ಹಾಸನಕ್ಕೆ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ. ಯುವತಿ ಸದ್ಯ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ.

ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಮಿಥುನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯ ಶೋಧ ಕಾರ್ಯ ನಡೆಸುತ್ತಿದ್ದರು. ಘಟನೆ ನಡೆದ ಎರಡು ದಿನಗಳ ಬಳಿಕ ಆರೋಪಿ ಮಿಥುನ್ ತಾನಾಗಿಯೇ ಇಂದು ನೇರವಾಗಿ ಎನ್ ಆರ್ ಪುರ ತಾಲೂಕಿನ ನ್ಯಾಯಾಧೀಶರ ಮುಂದೆ ಬಂದು ಶರಣಾಗಿದ್ದಾನೆ. ನ್ಯಾಯಾಧೀಶರು ಮಿಥುನ್​ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಬಾಳೆಹೊನ್ನೂರು ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.

Intro:Kn_Ckm_05_Serendor_Ckm_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿ ಯುವತಿಯ ಮೇಲೆ ಯುವಕ ದಾಳಿ ಮಾಡಿ ಚೂರಿಯಿಂದಾ ಇರಿದಿದ್ದ ಘಟನೆಗೆ ಸಂಭದಿಸಿದಂತೆ ಚೂರಿ ಇರಿದ ಯುವಕ ಇಂದೂ ನೇರವಾಗಿ ನ್ಯಾಯಲಯದ ಮುಂದೆ ಶರಣಾಗತಿಯಾಗಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಟು ಕಳಸ ಮಧ್ಯೆ ಬರುವ ಮಾಲಗೋಡು ಗ್ರಾಮದ ಬಳಿ ಬಾಳೆಹೊನ್ನೂರು ಸಮೀಪದ ಗಡಿಗೇಶ್ವರದ ಯುವಕ ಮಿಥುನ್ ಬಾಳೆಹೊನ್ನೂರು ಪಕ್ಕದಲ್ಲಿ ಬರುವ ಬಾಸಪುರ ದ ಯುವತಿ ಮೇಲೆ ಕಳೆದ ಎರಡೂ ದಿನಗಳ ಹಿಂದೇ ಚೂರಿಯಿಂದಾ ಇರಿದು ಸ್ಥಳದಿಂದಾ ಪರಾರಿಯಾಗಿದ್ದನು.ಯುವತಿಗೆ ಸುಮಾರು 8 ರಿಂದ 10 ಬಾರೀ ಚೂರಿಯಿಂದಾ ದಾಳಿ ಮಾಡಿದಾಗ ಯುವತಿ ಗಂಭೀರವಾಗಿ ಗಾಯಗೊಂಡಿದ್ದಳು. ಗಂಭೀರ ಗಾಯದಿಂದಾ ಈ ಯುವತಿ ರಸ್ತೆಯಲ್ಲಿ ಬಿದ್ದು ನರಳಾಡುವಾಗ ಸ್ಥಳೀಯರು ನೋಡಿ ಕಳಸ ಆಸ್ವತ್ರೆಗೆ ದಾಖಲು ಮಾಡಿದ್ದರು.ಯುವತಿಯ ಸ್ಥಿತಿ ಗಂಭೀರವಾಗಿರುವ ಹಿನ್ನಲೆ ಯುವತಿಯನ್ನು ಹಾಸನಕ್ಕೆ ರವಾನೆ ಚಿಕಿತ್ಸೆ ಕೊಡಿಸಲಾಯಿತು.ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನೆ ಮಾಡಲಾಗಿದ್ದು ಯುವತಿ ಸದ್ಯ ಮಂಗಳೂರಿನಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಾ ಹೆಚ್ಚಿನ ಚಿಕಿತ್ಸೆಯನ್ನು ಪಡೆಯುತ್ತಿದ್ದಾಳೆ.ಈ ಘಟನೆ ನಡೆದ ಬಳಿಕ ಕಳೆದ ಎರಡೂ ದಿನಗಳಿಂದಾ ಗಡಿಗೇಶ್ವರದ ಮಿಥುನ್ ಸ್ಥಳದಿಂದಾ ಪರಾರಿಯಾಗಿ ತಲೆ ಮರಿಸಿಕೊಂಡಿದ್ದನು.ಬಾಳೆಹೊನ್ನೂರು ಪೋಲಿಸ್ ಠಾಣೆಯಲ್ಲಿ ಮಿಥುನ್ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಯ ಶೋಧ ಕಾರ್ಯ ನಡೆಸುತ್ತಿರುವಾಗಲೇ ಇಂದೂ ನೇರವಾಗಿ ಎನ್ ಆರ್ ಪುರ ತಾಲೂಕಿನ ನ್ಯಾಯಧೀಶರ ಮುಂದೆ ಶರಣಾಗತಿಯಾಗಿದ್ದಾನೆ.ನ್ಯಾಯಧೀಶರು ಆರೋಪಿ ಮಿಥುನ್ ನನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದು ಬಾಳೆಹೊನ್ನೂರು ಪೋಲಿಸರು ಈ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ.
Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು.....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.