ETV Bharat / state

ಚಿಕಿತ್ಸೆ ಫಲಿಸದೇ ಗರ್ಭಿಣಿ ಸಾವು.. ಸಚಿವ ಸುಧಾಕರ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಇಬ್ಬರ ಬಂಧನ

ಕೋವಿಡ್ ಆಸ್ಪತ್ರೆ ಬಳಿ ಕರ್ತವ್ಯ ನಿರತರಾಗಿದ್ದ ಎಎಸ್‍ಐ ಮುರುಳಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಹಾಗೂ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸಚಿವ ಸುಧಾಕರ್ ಅವರ ವಿರುದ್ಧ ಏರು ಧ್ವನಿಯಲ್ಲಿ ನಿಂದಿಸಿದ ಹಿನ್ನೆಲೆ ಅವರ ವಿರುದ್ಧ ಸ್ವತಃ ಎಎಸ್​ಐ ಮುರುಳಿ, ಕಾನೂನು ಕ್ರಮಕೈಗೊಳ್ಳುವಂತೆ ದೂರು ನೀಡಿದ್ದರು..

two-people-arrested-for-using-abusive-words-to-sudhakar
ಸಚಿವ ಸುಧಾಕರ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಇಬ್ಬರು ಅಂದರ್
author img

By

Published : May 10, 2021, 3:39 PM IST

ಚಿಕ್ಕಬಳ್ಳಾಪುರ : ಆರೋಗ್ಯ ಸಚಿವ ಸುಧಾಕರ್​ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ನಗರದಲ್ಲಿ ನಡೆದಿದೆ.

ಜಿಲ್ಲೆಯ ಚಿಂತಾಮಣಿ ಮೂಲದ ಗಣೇಶ್ ಹಾಗೂ ಶಶಿಕುಮಾರ್ ಬಂಧಿತರು. ಕಳೆದ 4 ದಿನಗಳ ಹಿಂದೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಂತಾಮಣಿ ಮೂಲದ 8 ತಿಂಗಳ ಅನುಪಮಾ ಕೋವಿಡ್ ಸೋಂಕಿನಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.

ಇದರಿಂದ ಆಕ್ರೋಶಗೊಂಡಿದ್ದ ಆಕೆಯ ಸಂಬಂಧಿಕರು ಆಸ್ಪತ್ರೆಯ ಆವರಣದಲ್ಲೇ ಸಚಿವ ಸುಧಾಕರ್ ಹಾಗೂ ವೈದ್ಯರ ವಿರುದ್ಧ ಅವಾಚ್ಯ ಪದಗಳನ್ನ ಬಳಸಿ ಆಕ್ರೋಶ ವ್ಯಕ್ತಪಡಿಸಿದ್ರು.

ಸಚಿವ ಸುಧಾಕರ್‌ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು

ಸದ್ಯ ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಚಿವ ಸುಧಾಕರ್ ಗಮನಕ್ಕೂ ಬಂದಿತ್ತು. ಸಚಿವರು ಸಹ ಮುಜುಗರ ಅನುಭವಿಸಿದ್ದರು.

ಕೋವಿಡ್ ಆಸ್ಪತ್ರೆ ಬಳಿ ಕರ್ತವ್ಯ ನಿರತರಾಗಿದ್ದ ಎಎಸ್‍ಐ ಮುರುಳಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಹಾಗೂ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸಚಿವ ಸುಧಾಕರ್ ಅವರ ವಿರುದ್ಧ ಏರು ಧ್ವನಿಯಲ್ಲಿ ನಿಂದಿಸಿದ ಹಿನ್ನೆಲೆ ಅವರ ವಿರುದ್ಧ ಸ್ವತಃ ಎಎಸ್​ಐ ಮುರುಳಿ, ಕಾನೂನು ಕ್ರಮಕೈಗೊಳ್ಳುವಂತೆ ದೂರು ನೀಡಿದ್ದರು.

ದೂರಿನನ್ವಯ ಸದ್ಯ ಮೃತಳ ತಂದೆ ಗಣೇಶ್, ಹಾಗೂ ಸಹೋದರ ಶಶಿಕುಮಾರ್​ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆದರೆ, ಬಂಧಿತ ಶಶಿಕುಮಾರ್​ಗೆ ಕೋವಿಡ್ ಪಾಸಿಟಿವ್ ಕಂಡು ಬಂದಿದ್ದು, ಕೋವಿಡ್ ಕೇರ್ ಸೆಂಟರ್‌ಗೆ ಕಳುಹಿಸಲಾಗಿದೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಓದಿ: ಬೆಂಗಳೂರಲ್ಲಿ ಆ್ಯಂಬುಲೆನ್ಸ್​ ಸಿಗದೇ ಆಟೋದಲ್ಲೇ ತಾಯಿ ಮೃತದೇಹ ಸಾಗಿಸಿದ ಮಗ!

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.