ETV Bharat / state

SSLC ಫಲಿತಾಂಶ: 625ಕ್ಕೆ 625 ಅಂಕ ಪಡೆದ ಚಿಕ್ಕಬಳ್ಳಾಪುರದ ವಿದ್ಯಾರ್ಥಿನಿಯರು

author img

By

Published : Aug 9, 2021, 9:56 PM IST

ಕೋವಿಡ್​ ಭೀತಿಯ ನಡುವೆಯೂ ನಡೆದ ಹತ್ತನೇ ತರಗತಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು 625 ಕ್ಕೆ 625 ಅಂಕ ಪಡೆಯುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.

two-chikkaballapur-students-scored-625-out-of-625
sslc ಫಲಿತಾಂಶ

ಚಿಕ್ಕಬಳ್ಳಾಪುರ: ಇಂದು ಬಿಡುಗಡೆಯಾದ ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ ರಾಜ್ಯದಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲೆ ಐದನೇ ಸ್ಥಾನ ಪಡೆದುಕೊಂಡಿದ್ದು, ಗೌರಿಬಿದನೂರು ನಗರದ ವಿದ್ಯಾರ್ಥಿನಿ 625 ಕ್ಕೆ 625 ಅಂಕಗಳನ್ನು ಪಡೆಯುವುದರ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.

ತಾಲೂಕಿನ ಮುದುಗೆರೆ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕರ ದಂಪತಿಗಳ‌ ಮಗಳಾದ ಅಮೂಲ್ಯ ಆರ್. ಕೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಕೀರ್ತಿ ತಂದಿದ್ದಾಳೆ. ಗೌರಿಬಿದನೂರು ನಗರದ ಬಿಜಿಎಸ್ ಪಬ್ಲಿಕ್ ಶಾಲೆಯಲ್ಲಿ ಬಾಲಕಿ ವಿದ್ಯಾಭ್ಯಾಸ ಮಾಡುತ್ತಿದ್ದಳು.

625ಕ್ಕೆ 625 ಅಂಕ ಪಡೆದ ಚಿಕ್ಕಬಳ್ಳಾಪುರದ ವಿದ್ಯಾರ್ಥಿನಿ

ಇನ್ನೂ ಕೊರೊನಾ ನಡುವೆ ಹಗಲು ರಾತ್ರಿ ನಿತ್ಯದ ವೇಳಾಪಟ್ಟಿಯಂತೆ ವಿದ್ಯಾಭ್ಯಾಸ ನಡೆಸಿದ್ದು ಮುಂದೆ ಎಂಬಿಬಿಎಸ್ ವ್ಯಾಸಂಗ ಮಾಡುವ ಆಸೆಯನ್ನು ಹೊಂದಿದ್ದಾಳೆ. ಪೋಷಕರು ಸಹ ಮಗಳ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವುದಾಗಿ ತಿಳಿಸಿದ್ದಾರೆ.

ಅನನ್ಯಾ ಸಹ ಫಸ್ಟ್​: ಜಿಲ್ಲೆಯ ಶಿಡ್ಲಘಟ್ಟ ನಗರದ ಬಿಜಿಎಸ್ ಶಾಲೆಯ ಮತ್ತೋರ್ವ ವಿದ್ಯಾರ್ಥಿನಿ ಅನನ್ಯ ಸಿ. ವಿ. 625 ಕ್ಕೆ 625 ಅಂಕಗಳನ್ನು ಪಡೆದು ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾಳೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.