ETV Bharat / state

ಪೊಲೀಸರಿಂದ ಕುವೆಂಪು ವಿರಚಿತ ಹಳೆಗನ್ನಡದ 'ಶ್ಮಶಾನ ಕುರುಕ್ಷೇತ್ರ' ನಾಟಕ ಪ್ರದರ್ಶನ

author img

By ETV Bharat Karnataka Team

Published : Jan 17, 2024, 1:33 PM IST

Updated : Jan 17, 2024, 1:40 PM IST

ಗೌರಿಬಿದನೂರಿನ ಪೊಲೀಸ್​ ಸಿಬ್ಬಂದಿ, ಅವರ ಮಕ್ಕಳು ಹಾಗೂ ಶಿಕ್ಷಕರು ಕುವೆಂಪು ಅವರು ಬರೆದಿರುವ 'ಶ್ಮಶಾನ ರ್ಕುರುಕ್ಷೇತ್ರ' ನಾಟಕ ಪ್ರದರ್ಶಿಸಿದರು.

smashana-kurukshetra-drama
'ಶ್ಮಶಾನ ಕುರುಕ್ಷೇತ್ರ' ನಾಟಕ ಪ್ರದರ್ಶನ

'ಶ್ಮಶಾನ ಕುರುಕ್ಷೇತ್ರ' ನಾಟಕ ಪ್ರದರ್ಶನ

ಚಿಕ್ಕಬಳ್ಳಾಪುರ: ನಾಟಕ ಜೀವನದ ಪ್ರತಿಯೊಂದು ಘಟನೆಯೂ ರೋಚಕ. ನಟಿಸಲು ಅನುಭವ ಬೇಕಿಲ್ಲ. ಶ್ರದ್ಧೆ ಮತ್ತು ಏಕಾಗ್ರತೆ ಇದ್ದರೆ ಸಾಕು, ಎಂತಹದ್ದೇ ಪಾತ್ರವಾದರೂ ನಿಭಾಯಿಸುವ ಶಕ್ತಿ ಕಲಾವಿದನಿಗೆ ಇರುತ್ತದೆ. ಆದರೆ ಇಲ್ಲೊಂದೆಡೆ ಕಲಾವಿದರು ಯಾರೂ ಇರಲಿಲ್ಲ. ಆದರೆ ರಂಗಭೂಮಿ ಕಲಾವಿದರಿಗಿಂತಲೂ ಅದ್ಭುತ ಅಭಿನಯ ತೋರಿದವರು ಪೊಲೀಸರು.

ಚಿಕ್ಕಬಳ್ಳಾಪುರದಲ್ಲಿ ಸೋಮವಾರ ಸಂಜೆ ಪೊಲೀಸರೇ ನಾಟಕ ಪ್ರದರ್ಶಿಸಿದರು. ನಗರದ ವಿ.ವಿ.ಪುರಂ ಬಡಾವಣೆಯಲ್ಲಿರುವ ಡಾಕ್ಟರ್​​ ಎಚ್​​.ಎನ್.ಕಲಾಭವದಲ್ಲಿ ಪೊಲೀಸರ ನಾಟಕ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸುವುದರ ಜೊತೆಗೆ ಇಲಾಖೆಯ ಮೇಲೆ ಗೌರವ ಹೆಚ್ಚಿಸಿತು. ಕುವೆಂಪು ಬರೆದ ಹಳಗನ್ನಡದ 'ಶ್ಮಶಾನ ಕುರುಕ್ಷೇತ್ರ' ನಾಟಕವನ್ನು ಗೌರಿಬಿದನೂರು ವೃತ್ತ ಪೊಲೀಸರು ಆಕರ್ಷಕವಾಗಿ ಅಭಿನಯಿಸಿ ತೋರಿಸಿದರು.

ಮಾಜಿ ಕೃಷಿ ಸಚಿವ ಎನ್.ಎಚ್.ಶಿವಶಂಕರ್​ ರೆಡ್ಡಿ, ಸ್ಥಳೀಯ ಶಾಸಕರಾದ ಕೆ.ಎಚ್.ಪುಟ್ಟಸ್ವಾಮಿಗೌಡ ಕೇಂದ್ರ ವಲಯದ ಐಜಿಪಿ ರವಿಕಾಂತ್ ಗೌಡ, ಜಿಲ್ಲಾ ಎಸ್ಪಿ ಡಿ.ಎಲ್.ನಾಗೇಶ್ ನಾಟಕ ವೀಕ್ಷಿಸಿ ಸಂತೋಷಪಟ್ಟರು. ಕೌರವನ ಪಾತ್ರದಲ್ಲಿ ವೃತ್ತ ನಿರೀಕ್ಷಕ ಕೆ.ಪಿ.ಸತ್ಯನಾರಾಯಣ್ ನಟನೆ ರೋಮಾಂಚನಗೊಳಿಸಿತು. ಈ ನಾಟಕಕ್ಕೆ ಆಯ್ಕೆಯಾದ ಪೊಲೀಸ್ ಸಿಬ್ಬಂದಿ ಮತ್ತು ಅವರ ಮಕ್ಕಳು, ಶಿಕ್ಷಕರು ಎಲ್ಲರೂ ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿದರು.

ಇಡೀ ಕಲಾಭವನ ಮೌನವಾಗಿ ಕುಳಿತು ಕೌರವನ ಆಕ್ರೋಶ, ಆವೇಶ ನೋಡಿ ಸಂತೋಷಪಟ್ಟತು. ಅಸ್ಪೃಶ್ಯತೆ ತೊಡದು ಹಾಕಬೇಕು, ಸಮಾನತೆ, ಶಾಂತಿಯಿಂದ ಬದುಕುಬೇಕು. ಯುದ್ಧವಿಲ್ಲದ ಸಂಧಾನ, ಯುದ್ಧ ಮಾಡಿದರೆ ಆಗುವ ಸಾವು ನೋವಿನ ಕುರಿತು ಎಳೆಎಳೆಯಾಗಿ ನಾಟಕ ಸಾರಿತು.

ಇಲಾಖೆಯಲ್ಲಿರುವ ಒತ್ತಡದ ನಡುವೆಯೂ ಸೊಗಸಾಗಿ ಅಭಿನಯಿಸಿ ಅಭಿಮಾನಿಗಳ ಮನಸ್ಸನ್ನು ಪೊಲೀಸ್ ಇಲಾಖೆ ಸಿಬ್ಬಂದಿ ಗೆದ್ದರು. ಐಜಿಪಿ ರವಿಕಾಂತ್ ಗೌಡ ಮಾತನಾಡಿ, ಇಲಾಖೆಯಲ್ಲಿ ಇಂತಹ ಕಲಾವಿದರನ್ನು ಕಂಡು ಸಂತೋಷ ಮತ್ತು ಆಶ್ಚರ್ಯ ಉಂಟಾಯಿತು ಎಂದರು. ಒತ್ತಡದ ನಡುವೆ ಇಲಾಖೆಯ ಸಿಬ್ಬಂದಿಗಳನ್ನು ಒಗ್ಗೂಡಿಸಿಕೊಂಡು ಉತ್ತಮ ನಾಟಕ ಪ್ರದರ್ಶಿಸಿದ ಸತ್ಯನಾರಾಯಣ್ ಅವರಿಗೆ ಶಾಸಕರು ಹಾಗೂ ಮಾಜಿ ಶಾಸಕರು ಅಭಿನಂದನೆ ತಿಳಿಸಿದರು.

ಇದನ್ನೂ ಓದಿ: ಶ್ರೀರಾಮನ ವಿಗ್ರಹಕ್ಕೆ ಕಲ್ಲು ದೊರೆತ ಜಮೀನಿನಲ್ಲಿ ವಿಶೇಷ ಪೂಜೆ-ವಿಡಿಯೋ

Last Updated : Jan 17, 2024, 1:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.