ETV Bharat / state

ತಂಪು ಪಾನೀಯ ಗೋದಾಮಿನಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ: ಆರೋಪಿ ಸೆರೆ

author img

By

Published : Oct 25, 2019, 11:57 AM IST

13 ವರ್ಷದ ಅಪ್ರಾಪ್ತ ಬಾಲಕಿ ಮೇಲೆ 25 ವರ್ಷದ ಯುವಕನೊಬ್ಬಅತ್ಯಾಚಾರಕ್ಕೆ ಯತ್ನಿಸಿರುವ ಹೇಯ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ನಡೆದಿದೆ.

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಯತ್ನ

ಚಿಕ್ಕಬಳ್ಳಾಪುರ: ಅಪ್ರಾಪ್ತ ಬಾಲಕಿ ಮೇಲೆ ಪಕ್ಕದ ಮನೆಯ ಯುವಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿರುವ ಹೇಯ ಕೃತ್ಯ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ನಡೆದಿದೆ.

rape
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಯತ್ನ

ಸಂತ್ರಸ್ತೆಯು 6ನೇ ತರಗತಿ ಓದುತ್ತಿದ್ದು, ಆರೋಪಿ ಯುವಕ ನಂದೀಶ್(25) ಆಕೆಯ ಮನೆಯ ಎದುರೇ ತಂಪು ಪಾನೀಯಗಳನ್ನು ಮಾರುತ್ತಿದ್ದ. ಅಪ್ರಾಪ್ತೆಯನ್ನು ಪುಸಲಾಯಿಸಿ ತಂಪುಪಾನೀಯಗಳನ್ನು ಸಂಗ್ರಹಿಸುವ ಗೋದಾಮಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆಂದು ಬಾಲಕಿಯ ಪೋಷಕರು ಆರೋಪಿಸಿ ಬಾಗೇಪಲ್ಲಿ ಠಾಣೆಗೆ ದೂರು ನೀಡಿದ್ದಾರೆ.

ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆರೋಪಿ ನಂದೀಶ್​​ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣ ಕುರಿತು ಬಾಗೇಪಲ್ಲಿ ಪೋಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಕೇಸ್​ ದಾಖಲಾಗಿದೆ.

Intro:ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ Body:ನಂದೀಶ್ Conclusion:ಚಿಕ್ಕಬಳ್ಳಾಪುರ: 13 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಮನೆಯ ಮುಂಬಾಗ ವಾಸವಿದ್ದ 25ವರ್ಷದ ಯುವಕನೋರ್ವನಿಂದ ಅತ್ಯಾಚಾರಕ್ಕೆ ಯತ್ನ .

ಇಂಥದ್ದೊಂದು ಹೇಯ ಕೃತ್ಯ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ನಡೆದಿದೆ ಬಾಲಕಿ ಸರ್ಕಾರಿ ಶಾಲೆಯೊಂದರಲ್ಲಿ 6ನೇ ತರಗತಿ ಓದುತ್ತಿದ್ದು ಆರೋಪಿ ಯುವಕ ನಂದೀಶ್ ಆಕೆಯ ಮನೆಯ ಎದುರೇ ತಂಪು ಪಾನೀಯಗಳನ್ನು ಮಾರುತ್ತಿದ್ದ. ಅಪ್ರಾಪ್ತೆಯನ್ನು ಪುಸಲಾಯಿಸಿ ತಂಪುಪಾನೀಯಗಳನ್ನು ಸಂಗ್ರಹಿಸುವ ಗೋದಾಮಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆಂದು

ಬಾಲಕಿಯ ಪಾಲಕರು ಬಾಗೇಪಲ್ಲಿ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆದಿದೆಯೋ ಇಲ್ಲವೊ ಎಂಬ ನಿರ್ಧಾರಕ್ಕೆ ಲ್ಯಾಬ್ ವರದಿಗಾಗಿ ಕಾಯಬೇಕಿದೆ ಎಂದು ವರದಿ ಬಂದಿದ್ದು ಕಾಮುಕ ಯುವಕ ನಂದೀಶ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣ ಕುರಿತು ಬಾಗೇಪಲ್ಲಿ ಪೋಲೀಸ್ ಠಾಣೆಯಲ್ಲಿ
FIR 351/19.
IPC 376, 4,12 FOCSO ಕಾಯಿದೆಯಡಿ ಕೇಸು ಧಾಖಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.