ETV Bharat / state

ಸ್ವಚ್ಛತೆ ಕಾಣದ ಗ್ರಾಮ... ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಗ್ರಾಮಸ್ಥರು

author img

By

Published : Oct 27, 2019, 10:50 AM IST

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕುಂದಲಗೂರ್ಕಿ ಗ್ರಾಮ ಸ್ವಚ್ಛತೆ ಇಲ್ಲದೇ ದುರ್ನಾತ ಬೀರುತ್ತಿದ್ದು, ಸಾಂಕ್ರಾಮಿಕ ರೋಗಗಳಿಗೆ ಜನ ತುತ್ತಾಗುತ್ತಿದ್ದಾರೆ.

ಸ್ವಚ್ಛತೆ ಕಾಣದ ಗ್ರಾಮ

ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕುಂದಲಗೂರ್ಕಿ ಗ್ರಾಮದ ಗೋಕುಂಟೆ ಕೆಲವು ವಷ೯ಗಳಿಂದ ಸ್ವಚ್ಛತೆ ಇಲ್ಲದೇ ದುರ್ನಾತ ಬೀರುತ್ತಿದೆ.

ಕುಂಟೆ ಸಮೀಪವೇ ವಾಸಿಸುವ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ. ಕುಂಟೆಯ ಸಮೀಪ ಕೆಟ್ಟ ವಾಸನೆ ಹರಡಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಆತಂಕ ಎದುರಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕುಂಟೆಯ ನೈರ್ಮಲ್ಯ ಹದಗೆಟ್ಟಿದ್ದು, ಸುಕ್ತವಾದ ನಿರ್ವಹಣೆ ಇಲ್ಲದೆ ಈ ಕುಂಟೆ ರೋಗಗಳ ತಾಣವಾಗಿದೆ. ಅಷ್ಟೇ ಅಲ್ಲದೆ ಗ್ರಾಮದ ಕೆಲವು ಮನೆಗಳಿಂದ ಕೊಳಚೆ ನೀರನ್ನು ಕುಂಟೆಗೆ ಸೇರುವಂತೆ ಮಾಡಲಾಗಿದೆ. ಅಲ್ಲದೆ ಮಧ್ಯೆ ಪ್ಲಾಸ್ಟಿಕ್ ಬಾಟಲ್​​ಗಳು, ಪ್ಲಾಸ್ಟಿಕ್ ಗ್ಲಾಸ್​​ಗಳನ್ನು ಕುಂಟೆಯಲ್ಲಿ ಬಿಸಾಡಲಾಗಿದೆ. ಇದರಿಂದ ಕಸ ಕೊಳೆತು ನಾರುತ್ತಿದ್ದು, ಗಿಡಗಂಟಿಗಳು ಬೆಳೆದು ಸೊಳ್ಳೆಗಳೊಂದಿಗೆ ಹಾವು, ಹುಳ, ಇನ್ನಿತರ ಅಪಾಯಕಾರಿ ಜೀವಿಗಳ ಆಶ್ರಯ ತಾಣವಾಗಿ ಪರಿವರ್ತನೆಗೊಂಡಿದೆ.

ಸ್ವಚ್ಛತೆ ಕಾಣದ ಗ್ರಾಮ

ಸ್ವಚ್ಛತೆ ಕಾಪಾಡಬೇಕೆಂದು ಜಾರಿಗೊಳಿಸಿರುವ ಸ್ವಚ್ಛ ಭಾರತ ಅಭಿಯಾನದಿಂದ ಈ ಗ್ರಾಮಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಡೆಂಗ್ಯೂ, ಮಲೇರಿಯಾ ಸೇರಿದಂತೆ ವಿವಿಧ ರೋಗಗಳು ಹರಡುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸಬೇಕೆಂದು ಒತ್ತಾಯಿಸಿದ್ದಾರೆ.

Intro:ಒಂದು ಕಡೆ ಹಸಿರಾಗಿ ಕಾಣುತ್ತಿರುವ ನೀರು,ಮತ್ತೊಂದು ಕಡೆ ರೋಗಗಳ ಭೀತಿಯಲ್ಲಿ ಗ್ರಾಮಸ್ಥರು.ಇದೆಲ್ಲಾ ಕಂಡುಬಂದಿರುವುದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗೂರ್ಕಿ ಗ್ರಾಮದ ಹೃದಯಭಾಗದಲ್ಲಿ.Body:
ಹೌದು ಗ್ರಾಮದಲ್ಲಿರುವ ಗೋ ಕುಂಟೆ ಸುಮಾರು ವಷ೯ಗಳಿಂದ ಸ್ವಚ್ಚತೆ ಇಲ್ಲದೇ ದುರ್ನಾತ ಬೀರುತ್ತಿದ್ದು, ಕೊಳತು ಗಬ್ಬು ನಾರಲು ಆರಂಭಿಸಿದೆ. ಕುಂಟೆ ಸಮೀಪವೇ ವಾಸಿಸುವ ಜನರ ಪಾಡಂತ್ತು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿಯಂತಾಗಿದೆ. ಕುಂಟೆಯ ಸಮೀಪವೆಲ್ಲಾ ಕೆಟ್ಟ ವಾಸನೆ ಹರಡಿದ್ದು,ಸೊಳ್ಳೆಗಳ ಕಾಟವು ಎಚ್ಚಾಗಿ ಆರೋಗ್ಯದ ಮೇಲೆ ದುಷ್ಟಪರಿಣಾಮ ಬೀರುವ ಆತಂಕ ಮನೆ ಮಾಡಿದೆ.

ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕುಂಟೆಯ ನೈರ್ಮಲ್ಯ ಹದಗೆಟ್ಟಿದ್ದು ಸುಕ್ತವಾದ ನಿರ್ವಹಣೆ ಇಲ್ಲದೆ ಕುಂಟೆ ರೋಗಗಳ ತಂಗುದಾಣವಾಗಿದೆ.ಅಷ್ಟೇ ಅಲ್ಲದೆ ಗ್ರಾಮದ ಕೆಲವು ಮನೆಗಳಿಂದ ಕೊಳಚೆ ನೀರು ಕುಂಟೆಯಲ್ಲಿ ಹರಿದು ಬಿಡಲಾಗುತ್ತಿದೆ. ಅಲ್ಲದೆ ಮಧ್ಯಪಾನದ ಪ್ಲಾಸ್ಟಿಕ್ ಬಾಟಲ್ಗಳು, ಪ್ಲಾಸ್ಟಿಕ್ ಗ್ಲಾಸ್ ಗಳು ಸೇರಿದಂತೆ ಹಕವು ಪ್ಲಾಸ್ಟಿಕ್ ಅವಶೇಷಗಳು ಕುಂಟೆಯಲ್ಲಿ ಬಿಸಾಡಲಾಗಿದೆ. ಇದರಿಂದ ಕಸ ಕೊಳೆತು ನಾರುತ್ತಿದ್ದು ಗಿಡಗಂಟಿಗಳು ಬೆಳೆದು ಸೊಳ್ಳೆಗಳೊಂದಿಗೆ ಹಾವು, ಹುಳ, ಇನ್ನಿತರ ಭಯಾನಕ ಜೀವಿಗಳ ಆಶ್ರಯತಣವಾಗಿ ಪರಿವರ್ತನೆಗೊಂಡಿದೆ.

ಗ್ರಾಮೀಣ ಭಾಗದಲ್ಲಿ ಸ್ವಚ್ಚತೆ ಕಾಪಾಡಬೇಕೆಂದು ಜಾರಿಗೊಳಿಸಿರುವ ಸ್ವಚ್ಛಭಾರತ ಅಭಿಯಾನ ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದೆ ಎಂಬ ಅನುಮಾನ ಈ ಕುಂಟೆಯನ್ನು ನೋಡಿದರೆ ಗೋತ್ತಾಗಲಿದೆ.ಸದ್ಯ ಡೆಂಗಿ ಮಲೇರಿಯಾ, ವಿವಿಧ ರೋಗಗಳು ಹರಡುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇತ್ತಗಮನಹರಿಸಿ ಕೆಟ್ಟವಾಸನೆಯಿಂದ ದುನಾ೯ತ ಬೀರುತ್ತಿರುವ ಕುಂಟೆಗೆ ಮೋಕ್ಷ ನೀಡಿ ಎಂಬುವು ಇಲ್ಲಿನ ಗ್ರಾಮಸ್ಥರ ಆಗ್ರಹವಾಗಿದೆ.

ದತ್ತಾತ್ರೇಯ ಈಟಿವಿ ಭಾರತ ಚಿಕ್ಕಬಳ್ಳಾಪುರConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.