ETV Bharat / state

ಬಾಯಿ ಚಪಲಕ್ಕೆ ಮಾತಾಡೋದಲ್ಲ: ಡಿಕೆಶಿ ಗಟ್ಸ್​ಗೆ ಚಾಲೆಂಜ್ ಹಾಕಿದ ಸುಧಾಕರ್​

author img

By

Published : May 23, 2020, 5:15 PM IST

ಅನುಕಂಪ ಗಿಟ್ಟಿಸಿಕೊಳ್ಳುವ ಹಾಗೂ ಬಾಯಿ ಚಪಲಕ್ಕೆ ಏನೋ ಒಂದು ಹೇಳಿಕೆ ಕೊಡೋದಲ್ಲ, ಅಷ್ಟು ಹೃದಯವಂತಿಕೆ ಇದ್ರೆ ಒಂದು ತಿಂಗಳ ದವಸ ಧಾನ್ಯವನ್ನು ರಾಜ್ಯಕ್ಕೆ ಕೊಡಲಿ‌ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ಗೆ ಸಚಿವ ಸುಧಾಕರ್ ಸವಾಲು ಹಾಕಿದ್ದಾರೆ.

Minister Sudhakar reaction about congress leaders statement
ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್

ಚಿಕ್ಕಬಳ್ಳಾಪುರ: ಬಾಯಿ ಚಪಲಕ್ಕೆ ಏನೋ ಒಂದು ಮಾತಾಡೋದಲ್ಲ, ಒಂದು ತಿಂಗಳ ದವಸ ಧಾನ್ಯಗಳನ್ನು ರಾಜ್ಯಕ್ಕೆ ಕೊಡಲಿ‌ ಎಂದು‌ ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ಗೆ ಟಾಂಗ್ ನೀಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಾತಾನಾಡಿದ ಸಚಿವರು, ಅವರೊಬ್ಬರಿಗೆ ಹೃದಯ ಇದೆಯಾ? ಯಡಿಯೂರಪ್ಪನವರಿಗೆ ಇಲ್ಲವಾ? ಹೃದಯ ಇಲ್ದೆ ಇದ್ದಿದ್ರೆ ಹೋಗ್ತಿರೋ ಎಲ್ರಿಗೂ ಫ್ರೀಯಾಗಿ ಕಳಿಸ್ತಿದ್ರಾ? ಉಚಿತ ಊಟ, ಅಡುಗೆ ಸಾಮಗ್ರಿ, ವಸತಿ, 3 ತಿಂಗಳ ಸಂಬಳ, 5 ಸಾವಿರ ರೂ. ನೀಡಿದ್ದು ಯಾರು? ಶ್ರೀಮತಿ ಸೋನಿಯಾ ಗಾಂಧಿ ಕೊಟ್ರಾ? ಪ್ರತಿಪಕ್ಷದ ಅಧ್ಯಕ್ಷರಾಗಿ ಏನೋ ಒಂದು ಹೇಳ್ಬೇಕು ಹೇಳ್ತಾನೇ ಇರ್ತಾರೆ. ಹೇಳಿಕೆಗಳಿಗೂ ಒಂದು ಮಿತಿ ಬೇಡ್ವಾ ಎಂದು ಕಾಂಗ್ರೆಸ್​ ನಾಯಕರ ಹೇಳಿಕೆಗೆ ಗರಂ ಆದರು.

ಅಷ್ಟು ಹೃದಯವಂತಿಕೆ ಇದ್ರೆ ಕಾಂಗ್ರೆಸ್​ನಿಂದ ರಾಜ್ಯದ ಜನರಿಗೆ ಒಂದು ತಿಂಗಳುಗಳ ಕಾಲ ಸಾಮಗ್ರಿಗಳನ್ನು ಕೊಡಲಿ, ಅದನ್ನು ನಾನು ಸ್ವಾಗತ ಮಾಡುವೆ ಎಂದು ಡಿ.ಕೆ‌. ಶಿವಕುಮಾರ್​ಗೆ ಸಚಿವರು ಚಾಲೆಂಜ್ ಹಾಕಿದರು.

ಕೊರೊನಾ ಕುರಿತು ಪ್ರತಿಕ್ರಿಯಿಸಿದ ಸಚಿವ ಕೆ. ಸುಧಾಕರ್, ರಾಜ್ಯದಲ್ಲಿ ನಾಲ್ಕು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಪ್ರಕರಣ ದಾಖಲಾಗಿವೆ. ಇದರಲ್ಲಿ ಮಂಡ್ಯ, ರಾಯಚೂರು, ಯಾದಗಿರಿ, ಗದಗ ಸೇರಿದಂತೆ ಎಲ್ಲಾ ಪ್ರಕರಣಗಳು ಮಹಾರಾಷ್ಟ್ರದಿಂದ ಬಂದವರು.

ಒಟ್ಟು 598 ಗುಣಮುಖರಾಗಿದ್ದು, 42 ಜನ ನಿಧನ ಹೊಂದಿದ್ದಾರೆ. ಕೆಲವು ರಾಜ್ಯಗಳಲ್ಲಿ ಹೃದಯಾಘಾತದಿಂದ ಮೃತಪಟ್ಟರೆ ಕೊರೊನಾ ಲಿಸ್ಟ್​ನಲ್ಲಿ ತೋರಿಸುತ್ತಿಲ್ಲ. ನಾವು ಎಲ್ಲವನ್ನೂ ಸರಿಯಾದ ಅಂಕಿ - ಅಂಶಗಳನ್ನು ನೀಡುವುದರಿಂದ ಸಾವಿನ ಸಂಖ್ಯೆ ಹೆಚ್ಚು ಕಾಣಿಸುತ್ತದೆ. ಇಂದು ‌32 ವರ್ಷದ ವ್ಯಕ್ತಿಗೆ ಟಿ.ಬಿ, ಏಡ್ಸ್ ಇತ್ತು, ಅದರಿಂದಾಗಿ ಮೃತಪಟ್ಟರು.

ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್

ಲಾಕ್​ಡೌನ್​ ಫ್ರೀ ಮಾಡಿದೀವಿ ಅಂದ್ರೆ ಯದ್ವಾ ತದ್ವಾ ಒಡಾಡಿ ಅಂತಲ್ಲ. ಕೆಲವು ಅಭ್ಯಾಸ ರೂಢಿಸಿಕೊಳ್ಳಿ, ಕಾನೂನು ಸಂಸ್ಕಾರ, ಸಂಸ್ಕೃತಿ ಆಗಬೇಕು. ಎಲ್ಲದಕ್ಕೂ ಕಾನೂನು ರೂಪಿಸಿ ಹತೋಟಿಗೆ ತರಲು ಸಾಧ್ಯವಿಲ್ಲ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.