ETV Bharat / state

ಹೆಬ್ಬೆಟ್ಟು ರಾಜಕೀಯ ಮಾಡುವುದು ದೇವೇಗೌಡರ ಕುಟುಂಬ: ಸಚಿವ ಆರ್ ಅಶೋಕ್

author img

By

Published : Nov 27, 2022, 2:16 PM IST

ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳುವ ಪಕ್ಷ ನಮ್ಮದಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ಅವರು ಕನ್ನಡ ಜನತೆ ಮುಂದೆ ಒಂದು ಹೇಳಿದ್ರೆ, ಹೈಕಮಾಂಡ್ ಮುಂದೆ ಮತ್ತೊಂದು ರೀತಿ ಮಾತನಾಡುತ್ತಾರೆ. ಹೆಬ್ಬೆಟ್ಟು ರಾಜಕೀಯ ಮಾಡುವುದು ದೇವೇಗೌಡರ ಕುಟುಂಬ ಎಂದು ಕಂದಾಯ ಸಚಿವ ಆರ್ ಅಶೋಕ್ ವಾಗ್ದಾಳಿ ನಡೆಸಿದರು.

minister r ashok
ಸಚಿವ ಆರ್ ಅಶೋಕ್

ಚಿಕ್ಕಬಳ್ಳಾಪುರ: ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸಿಎಂ‌ ಬೊಮ್ಮಾಯಿ ಅವರದ್ದು ಹೆಬ್ಬೆಟ್ಟಿನ ರಾಜಕೀಯ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಂದಾಯ ಸಚಿವ ಆರ್ ಅಶೋಕ್, ಹೆಬ್ಬೆಟ್ಟು ರಾಜಕೀಯ ಮಾಡುವುದು ದೇವೇಗೌಡರ ಕುಟುಂಬ. ನಮ್ಮದು ರಾಷ್ಟ್ರೀಯ ಪಕ್ಷ, ತಂದೆ ಹಾಕಿರುವ ಮರಕ್ಕೆ ನೇಣು ಹಾಕಿಕೊಳ್ಳುವುದು ಜೆಡಿಎಸ್ ಪಾರ್ಟಿ ಎಂದು ತಿರುಗೇಟು ನೀಡಿದರು.

ಗ್ರಾಮ ವಾಸ್ತವ್ಯ ಕಾರ್ಯಕ್ರಮದ ನಿಮಿತ್ತ ಮಂಚೇನಹಳ್ಳಿ ತಾಲೂಕಿನ ಜರಬಂಡಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಅವರು ಕನ್ನಡ ಜನತೆ ಮುಂದೆ ಒಂದು ಹೇಳಿದ್ರೆ, ಹೈಕಮಾಂಡ್ ಮುಂದೆ ಮತ್ತೊಂದು ರೀತಿ ಮಾತನಾಡುತ್ತಾರೆ. ಅವರದ್ದು ಹೆಬ್ಬೆಟ್ಟಿನ ರಾಜಕೀಯ ಎಂದು ಟೀಕಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಆರ್ ಅಶೋಕ್

ನಮ್ಮಲ್ಲಿ ವಾಜಪೇಯಿ, ಅಡ್ವಾಣಿ, ನರೇಂದ್ರ ಮೋದಿ ಇದ್ದಾರೆ. ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳುವ ಪಕ್ಷ ನಮ್ಮದಲ್ಲ. ಬಸವರಾಜ ಬೊಮ್ಮಾಯಿ ನಿನ್ನೆ ಮೊನ್ನೆ ಬಂದವರಲ್ಲ, ಇಂಜಿನಿಯರಿಂಗ್​ ಓದಿದ್ದಾರೆ. ಜೆ.ಹೆಚ್ ಪಟೇಲ್, ರಾಮಕೃಷ್ಣ ಹೆಗಡೆ ಬಳಿ ತರಬೇತಿ ಪಡೆದಿದ್ದಾರೆ. ನಮ್ಮ ಮುಖ್ಯಮಂತ್ರಿಗಳು ಸರಳ ಸ್ವಭಾವದವರಾಗಿದ್ದು, ಬಡವರ ಕೈಗೆ ಸಿಗುವ ವ್ಯಕ್ತಿ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: ಮುಖ್ಯಮಂತ್ರಿ ಗದ್ದುಗೆ ಮೇಲೆ ಕುಮಾರಸ್ವಾಮಿ ಕಣ್ಣು: ಜೆಡಿಎಸ್ ಅಧಿಕಾರಕ್ಕೆ ತರಲು ಜಾಣ ನಡೆ?

ವೋಟರ್​ ಐಡಿ ಹಗರಣದಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ. ಸುಮ್ಮನೇ ಸರ್ಕಾರದ ಮೇಲೆ ಆರೋಪ ಮಾಡುವುದು ಸರಿಯಲ್ಲ. 2012 ರಿಂದಲೂ ಚಿಲುಮೆ ಸಂಸ್ಥೆ ಇದರ ಉಸ್ತುವಾರಿ ಹೊತ್ತಿದೆ. ಆಗಿನಿಂದ ಕಾಂಗ್ರೆಸ್ ಬಾಯಿ ಮುಚ್ಚಿಕೊಂಡಿತ್ತು, ಈಗ ಬಾಯಿ ಬಿಡುತ್ತಿದೆ. ಈ ಕುರಿತು ಚುನಾವಣಾ ಆಯೋಗ ತನಿಖೆ ನಡೆಸುತ್ತಿದೆ ಎಂದರು.

ಇದನ್ನೂ ಓದಿ: ಸರ್ಕಾರವು ಜನರ ಹಣ ದೋಚಿ ರಾಜಕೀಯ ಮಾಡುತ್ತಿದೆ: ಕುಮಾರಸ್ವಾಮಿ ಆರೋಪ

ಎಸ್​ಸಿ, ಎಸ್​ಟಿಗೆ ಮೀಸಲಾತಿ ನೀಡಿದ ಮೇಲೆ ಕಾಂಗ್ರೆಸ್​ಗೆ ಹೊಟ್ಟೆ ಉರಿ ಬಂದಿದೆ. 75 ವರ್ಷಗಳಿಂದ ಕಾಂಗ್ರೆಸ್ ಕೆಂಪೇಗೌಡರಿಗೆ ಗೌರವ ನೀಡಿರಲಿಲ್ಲ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ ಅಂತ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ದೇಶ ಹಾಗೂ ರಾಜ್ಯದಲ್ಲಿ 50 ವರ್ಷ ಆಡಳಿತದಲ್ಲಿತ್ತು. ಆದರೆ, ರಾಜ್ಯ ಹಾಗೂ ದೇಶಕ್ಕೆ ಕಾಂಗ್ರೆಸ್​ನ ಕೊಡುಗೆ ಏನೂ ಇಲ್ಲ. ಮುಂದೆ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವುದೇ ನಮ್ಮ ಗುರಿ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.