ETV Bharat / state

ಜನಸಾಮಾನ್ಯರ ಕೆಲಸ ನಿರ್ಲಕ್ಷ್ಯ ಮಾಡಿದ್ರೆ ಲೋಕಾಯುಕ್ತಕ್ಕೆ ದೂರು ಕೊಡಿ: ಮೋಹನ್ ಕುಮಾರ್

author img

By

Published : Oct 25, 2019, 9:20 AM IST

ಅಧಿಕಾರಿಗಳು ಜನಸಾಮಾನ್ಯರ ಕೆಲಸ ಮಾಡಿಕೊಡಲು ನಿರ್ಲಕ್ಷ್ಯ ತೋರಿದ್ರೆ ಲೋಕಾಯುಕ್ತಕ್ಕೆ ದೂರು ಕೊಡಿ ಎಂದು ಲೋಕಾಯುಕ್ತ ಅಧೀಕ್ಷಕ ಮೋಹನ್​ ಕುಮಾರ್​ ತಿಳಿಸಿದ್ದಾರೆ.

ಲೋಕಾಯುಕ್ತ ಅಧೀಕ್ಷಕ ಮೋಹನ್​ ಕುಮಾರ್

ಚಿಕ್ಕಬಳ್ಳಾಪುರ: ಜನಸಾಮಾನ್ಯರ ಕೆಲಸ ಮಾಡಿಕೊಡಲು ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ರೆ ಲೋಕಾಯುಕ್ತಕ್ಕೆ ದೂರು ಕೊಡಿ ಎಂದು ಲೋಕಾಯುಕ್ತ ಅಧೀಕ್ಷಕ ಮೋಹನ್​ ಕುಮಾರ್​ ತಿಳಿಸಿದ್ದಾರೆ.

ಜಿಲ್ಲೆಯ ಗುಡಿಬಂಡೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಲೋಕಾಯುಕ್ತ ಅಧೀಕ್ಷಕರು ಸಾರ್ವಜನಿಕರಿಂದ ದೂರು ಹಾಗೂ ಕುಂದು ಕೊರತೆ ಆಲಿಸಿದರು. ಈ ವೇಳೆ ಮಾತನಾಡಿದ ಅವರು ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡಿಕೊಡಲು ಅಧಿಕಾರಿಗಳ ವಿಳಂಬ, ಸಾರ್ವಜನಿಕ ಸ್ಥಳಗಳ ಒತ್ತುವರಿ, ಕೆರೆ ಒತ್ತುವರಿ, ಕಂದಾಯ ಇಲಾಖೆಯಲ್ಲಿ ಜಮೀನಿಗೆ ಸಂಬಂಧಪಟ್ಟ ದಾಖಲೆಗಳನ್ನು ಮಾಡಿಕೊಡಲು ನಿಧಾನಗತಿ, ಭ್ರಷ್ಟಾಚಾರ ಹೀಗೆ ಹಲವು ವಿಚಾರಗಳಿಗೆ ಸಂಬಂಧಪಟ್ಟ ದೂರು ದಾಖಲಿಸಿದರು.

ಲೋಕಾಯುಕ್ತ ಅಧೀಕ್ಷಕ ಮೋಹನ್​ ಕುಮಾರ್

ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಸೇರಿದಂತೆ ಬಹುತೇಕ ಕಂದಾಯ ಇಲಾಖೆ ಅಧಿಕಾರಿಗಳು ಭೂ ಅಭಿವೃದ್ಧಿಗಾರರ (ಲ್ಯಾಂಡ್‌ ಡೆವಲಪರ್ಸ್​​) ಕೆಲಸಗಳನ್ನು ಮಾತ್ರ ತುರ್ತಾಗಿ ಮಾಡಿಕೊಟ್ಟು, ರೈತರು ಮತ್ತು ಜನಸಾಮಾನ್ಯರ ಕೆಲಸಗಳ ಬಗ್ಗೆ ನಿರ್ಲಕ್ಷ್ಯವಹಿಸುತ್ತಿರುವುದು ಕಂಡು ಬಂದಿದೆ. ಇದು ಹೀಗೆ ಮುಂದುವರೆದರೆ ಲೋಕಾಯುಕ್ತಕ್ಕೆ ದೂರು ಕೊಡಿ ಎಂದು ತಿಳಿಸಿದ್ರು.

Intro:ಜನಸಾಮಾನ್ಯರ ಕೆಲಸ ನಿರ್ಲಕ್ಷವೇ ಲೋಕಾಯುಕ್ತ ದೂರು ಕೊಡಿ: ಮೋಹನ್ ಕುಮಾರ್Body:ಮೋಹನ್ ಕುಮಾರ್: ಲೋಕಾಯುಕ್ತ ಅಧಿಕಾರಿ Conclusion:ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಲೋಕಾಯುಕ್ತ ಅಧೀಕ್ಷಕರು ಸಾರ್ವಜನಿಕರಿಂದ ದೂರು ಹಾಗೂ ಕುಂದು ಕೊರತೆ ಆಲಿಸಿದರು.

ಸಭೆಯಲ್ಲಿ ಸಾರ್ವಜನಿಕರು ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡಿಕೊಡಲು ಅಧಿಕಾರಿಗಳ ವಿಳಂಬ, ಸಾರ್ವಜನಿಕ ಸ್ಥಳಗಳ ಒತ್ತುವರಿ, ಕೆರೆ ಒತ್ತುವರಿ, ಕಂದಾಯ ಇಲಾಖೆಯಲ್ಲಿ ಜಮೀನಿಗೆ ಸಂಬಂಧಪಟ್ಟ ದಾಖಲೆಗಳನ್ನು ಮಾಡಿಕೊಡಲು ನಿಧಾನಗತಿ, ಭ್ರಷ್ಟಾಚಾರ ಹೀಗೆ ಹಲವು ವಿಚಾರಗಳಿಗೆ ಸಂಬಂಧಪಟ್ಟ ದೂರು ದಾಖಲಿಸಿದರು.

ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಸೇರಿದಂತೆ ಬಹುತೇಕ ಕಂದಾಯ ಇಲಾಖೆ ಅಧಿಕಾರಿಗಳು ಭೂ ಅಭಿವೃದ್ಧಿಗಾರರ (ಲ್ಯಾಂಡ್‌ ಡೆವೆಲಪರ್‌) ಕೆಲಸಗಳನ್ನು ಮಾತ್ರ ತುರ್ತಾಗಿ ಮಾಡಿಕೊಟ್ಟು, ರೈತರು ಮತ್ತು ಜನಸಾಮಾನ್ಯರ ಕೆಲಸಗಳ ಬಗ್ಗೆ ನಿರ್ಲಕ್ಷವಹಿಸುತ್ತಿರುವುದು ಕಂಡು ಬಂದಿದೆ. ಇದು ಹೀಗೆ ಮುಂದುವರೆದರೆ ಲೋಕಾಯುಕ್ತಕ್ಕೆ ದೂರು ಕೊಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.