ETV Bharat / state

ರಾತ್ರಿ ಬೈಕ್​​ ನಿಲ್ಲಿಸುವುದಾಗಿ ಪತ್ನಿಗೆ ಹೇಳಿ ಹೋಗಿದ್ದ ಶಿಕ್ಷಕ ಬೆಳಗ್ಗೆ ನಗ್ನ ಶವವಾಗಿ ಪತ್ತೆ! ಅಲ್ಲಿ ನಡೆದಿದ್ದೇನು?

author img

By

Published : Jul 5, 2021, 7:57 PM IST

Updated : Jul 5, 2021, 8:35 PM IST

ಕಳೆದ ರಾತ್ರಿ ದ್ವಿಚಕ್ರವಾಹನವನ್ನು ಹೊರಗೆ ನಿಲ್ಲಿಸುವುದಾಗಿ ಹೆಂಡತಿಗೆ ಹೇಳಿ ಹೋಗಿದ್ದ ವಿಶ್ವನಾಥ್ ಎಂಬಾತ ತದ ನಂತರ ಮನೆಗೆ ಹಿಂತಿರುಗಲಿಲ್ಲವಂತೆ. ರಾತ್ರಿಯೆಲ್ಲಾ ಸಾಕಷ್ಟು ಹುಡುಕಾಡಿ ಇಂದು ಮುಂಜಾನೆ ಗೌರಿಬಿದನೂರು ಪುರ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ.

ಕಾಣೆಯಾದ ಶಿಕ್ಷಕ ನಿರ್ಜನ ಪ್ರದೇಶದಲ್ಲಿ ಅರೆನಗ್ನಾನಾಗಿ ಶವವಾಗಿ ಪತ್ತೆ
ಕಾಣೆಯಾದ ಶಿಕ್ಷಕ ನಿರ್ಜನ ಪ್ರದೇಶದಲ್ಲಿ ಅರೆನಗ್ನಾನಾಗಿ ಶವವಾಗಿ ಪತ್ತೆ

ಚಿಕ್ಕಬಳ್ಳಾಪುರ: ಕಾಣೆಯಾಗಿದ್ದ ಸರ್ಕಾರಿ ಶಾಲೆಯ ಶಿಕ್ಷಕನೋರ್ವ ನಿರ್ಜನ ಪ್ರದೇಶದಲ್ಲಿ ಶವವಾಗಿ ಪತ್ತೆಯಾದ ಘಟನೆ ಜಿಲ್ಲೆಯ ಗೌರಿಬಿದನೂರು ನಗರದ ಹೊರವಲಯದಲ್ಲಿ ನಡೆದಿದೆ. ಮೃತ ವಿಶ್ವನಾಥ (42) ತಾಲೂಕಿನ ಭೂಮನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ಎಂದು ಗುರುತಿಸಲಾಗಿದೆ.

ಕಳೆದ ರಾತ್ರಿ ದ್ವಿಚಕ್ರವಾಹನವನ್ನು ಹೊರಗೆ ನಿಲ್ಲಿಸುವುದಾಗಿ ಹೆಂಡತಿಗೆ ಹೇಳಿ ಹೋಗಿದ್ದ ವಿಶ್ವನಾಥ್ ತದ ನಂತರ ಮನೆಗೆ ಹಿಂತಿರುಗಲಿಲ್ಲವಂತೆ. ಅವರಿಗಾಗಿ ರಾತ್ರಿಯೆಲ್ಲಾ ಶೋಧ ನಡೆಸಿ ಇಂದು ಮುಂಜಾನೆ ಗೌರಿಬಿದನೂರು ಪುರ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಈ ಕುರಿತಾಗಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಣೆಯಾದ ವ್ಯಕ್ತಿಯ ಹುಡಕಾಟದಲ್ಲಿ ನಿರತರಾಗಿದ್ದರು. ಆದರೆ ಇಂದು ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ಸಾರ್ವಜನಿಕರೊಬ್ಬರು ಪಿಎಸ್ಐ ಪ್ರಸನ್ನ ಕುಮಾರ್‌ಗೆ ಫೋನ್ ಮಾಡಿ ಬೈಪಾಸ್ ರಸ್ತೆಯ ನರ್ಸಿಂಗ್ ಕಾಲೇಜು ಮುಂಭಾಗದ ನಿರ್ಜನ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯೊಬ್ಬ ಕೊಲೆಯಾಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪಕ್ಷಿಯ ಕಳೇಬರದ ಅಂತ್ಯಕ್ರಿಯೆ ನಡೆಸುತ್ತಿದೆ ಶ್ವಾನ! ಈ ವಿಡಿಯೋ ನೋಡಿ

ತಕ್ಷಣ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದಾಗ ಕಾಣೆಯಾದ ಶಿಕ್ಷಕ ವಿಶ್ವನಾಥ್ ಎಂದು ದೃಢಪಟ್ಟಿದೆ. ಮೃತ ವ್ಯಕ್ತಿಯ ದೇಹವು ಅರೆನಗ್ನಾವಸ್ಥೆಯಲ್ಲಿ ಪತ್ತೆಯಾಗಿದ್ದು ಎರಡೂ ಕಾಲುಗಳನ್ನು ಜೀನ್ಸ್ ಪ್ಯಾಂಟ್ ಮೂಲಕ ಕಟ್ಟಿಹಾಕಿ ಕೊಲೆ ಮಾಡಲಾಗಿದೆ. ಮೃತದೇಹದ ಸಮೀಪವೇ ಆತನ ದ್ವಿಚಕ್ರವಾಹನ ಪತ್ತೆಯಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲಿಸಿ ತನಿಖೆ ಚುರುಕುಗೊಳಿಸಿದ್ದಾರೆ.

Last Updated : Jul 5, 2021, 8:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.