ETV Bharat / state

ಜಮೀನಿಗೆ ತೆರಳುವಾಗ ಟ್ರ್ಯಾಕ್ಟರ್ ಪಲ್ಟಿಯಾಗಿ ಗ್ರಾ.ಪಂ ಸದಸ್ಯ ಸಾವು, ಓರ್ವನಿಗೆ ಗಾಯ

author img

By

Published : May 25, 2021, 7:42 AM IST

ಚಾಮರಾಜನಗರದಲ್ಲಿ ಟ್ರ್ಯಾಕ್ಟರ್ ಮಗುಚಿ ಬಿದ್ದ ಪರಿಣಾಮ ಓರ್ವ ಮೃತಪಟ್ಟಿದ್ದು, ಮತ್ತೋರ್ವ ಗಾಯಗೊಂಡಿದ್ದಾನೆ. ಉಳುಮೆಗೆ ತೆರಳುವಾಗ ಹಳ್ಳವೊಂದರ ಬಳಿ ಘಟನೆ ಸಂಭವಿಸಿದೆ.

Tractor pulti in Chamarajanagar
ಜಮೀನಿಗೆ ತೆರಳುವಾಗ ಟ್ರ್ಯಾಕ್ಟರ್ ಪಲ್ಟಿ

ಚಾಮರಾಜನಗರ: ಜಮೀನಿಗೆ ತೆರಳುತ್ತಿದ್ದಾಗ ಹಳ್ಳಕ್ಕೆ ಟ್ರ್ಯಾಕ್ಟರ್ ಮಗುಚಿ ಬಿದ್ದಿದ್ದು ಓರ್ವ ಮೃತಪಟ್ಟಿದ್ದು, ಮತ್ತೋರ್ವ ಗಾಯಗೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ‌ ಬೇರಂಬಾಡಿ ಗ್ರಾಮದಲ್ಲಿ ನಡೆದಿದೆ.

ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ಗ್ರಾ.ಪಂ‌ ಸದಸ್ಯ ಶನಿದೇವರ ಮೂರ್ತಿ(43) ಮೃತಪಟ್ಟವರು. ಟ್ರ್ಯಾಕ್ಟರ್​ನಲ್ಲಿ ಕುಳಿತಿದ್ದ ‌ಅದೇ ಗ್ರಾಮದ ರಾಮು ಎಂಬ ಯುವಕ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಉಳುಮೆಗೆ ತೆರಳುವಾಗ ಹಳ್ಳವೊಂದರ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಅಕ್ಕಪಕ್ಕದ ಜಮೀನಿನವರು ದೌಡಾಯಿಸಿ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ಈ ಕುರಿತು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.