ETV Bharat / state

ಬಿಳಿಗಿರಿ ರಂಗನ ಬೆಟ್ಟದಲ್ಲಿರುವುದು ತುಳಸಿ ಮರವಲ್ಲ: ಈಟಿವಿ ಭಾರತ ರಿಯಾಲಿಟಿ ಚೆಕ್​​​

author img

By

Published : Jul 6, 2019, 5:05 PM IST

ಬಿಳಿಗಿರಿರಂಗನ ಬೆಟ್ಟದಲ್ಲಿ ಅಪರೂಪವಾದ ತುಳಸಿ ಮರ ಇದೆ ಎಂಬ ಮಾಹಿತಿ ಸತ್ಯಕ್ಕೆ ದೂರವಾಗಿದೆ ಎಂಬುದು ಈಟಿವಿ ಭಾರತ ನಡೆಸಿದ ರಿಯಾಲಿಟಿ ಚೆಕ್​ನಲ್ಲಿ ತಿಳಿದು ಬಂದಿದೆ.

ಬಿಳಿಗಿರಿ ರಂಗನ ಬೆಟ್ಟದಲ್ಲಿರುವುದು ತುಳಸಿ ಮರವಲ್ಲ

ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಅಪರೂಪವಾದ ತುಳಸಿ ಮರ ಇದೆ ಎಂಬ ಮಾಹಿತಿಯುಳ್ಳ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್ ಆಗಿತ್ತು.

ವೈರಲ್ ಮೆಸೇಜ್​ನ ಜಾಡು ಹಿಡಿದು ಈಟಿವಿ ಭಾರತ ರಿಯಾಲಿಟಿ ಚೆಕ್ ನಡೆಸಿದಾಗ, ವೈರಲ್ ಆಗಿರುವ ಫೋಟೋದಲ್ಲಿರುವುದು ತುಳಿಸಿ ಮರವಲ್ಲ ಎಂಬ ಸತ್ಯ ಬೆಳಕಿಗೆ ಬಂದಿದೆ. ಅದೊಂದು ಕಾಡು ಜಾತಿಯ ಮರವಾಗಿದ್ದು, ಮೃದು ಕಾಂಡ ಒಳಗೊಂಡಿದೆ. ಇದನ್ನು ಪ್ರಾಣಿಗಳು ಕೂಡ ತಿನ್ನಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಬಿಳಿಗಿರಿ ರಂಗನ ಬೆಟ್ಟದಲ್ಲಿರುವುದು ತುಳಸಿ ಮರವಲ್ಲ

ಈ ಕುರಿತು ಅರಣ್ಯ ಇಲಾಖೆಯಲ್ಲಿ 30 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಮಹದೇವಯ್ಯ ಎಂಬವರು ಈಟಿವಿ ಭಾರತದೊಂದಿಗೆ ಮಾತನಾಡಿ, ನಾನು ಇದುವರೆಗೂ ಇಲ್ಲಿ ತುಳಸಿ ಮರ ನೋಡಿಲ್ಲ. ವೈರಲ್ ಆಗಿರುವ ಮರದ ಚಿತ್ರವು ತುಳಸಿ ಮರದ್ದಲ್ಲ. ಅದನ್ನು ಸ್ಥಳೀಯರು ನೇಲಾಡಿ, ಉಲುಬೆ ಮರ ಎಂದು ಕರೆಯುತ್ತಾರೆ‌‌. ತುಳಸಿ ಗಿಡದ ರೀತಿ ಇದರ ಗೊಂಡೆಯೂ ಇರುವುದರಿಂದ ಕೆಲವರು ತಪ್ಪಾಗಿ ಅರ್ಥೈಸಿದ್ದಾರೆ ಎಂದರು.

ಬಿಳಿಗಿರಿರಂಗನ ಬೆಟ್ಟದ ಚೆಕ್ ಪೋಸ್ಟ್​​ನಿಂದ ಒಂದು ಕಿ.ಮೀ. ದೂರದ ರಸ್ತೆ ಬದಿಯಲ್ಲಿನ ಮರವನ್ನು ಸೆರೆ ಹಿಡಿದು ತುಳಸಿಮರ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಈ ರೀತಿಯ ಮರಗಳು ಬಿಆರ್​ಟಿ ಅರಣ್ಯ ಪ್ರದೇಶದ ರಸ್ತೆಯ ಇಕ್ಕೆಲಗಳಲ್ಲಿ ನೂರಾರಿವೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಹರಡಿರುವ ತುಳಿಸಿ ಮರ ಇದೆ ಎಂಬ ಮಾಹಿತಿ ಸತ್ಯಕ್ಕೆ ದೂರವಾಗಿದೆ ಎಂಬುದು ಸ್ಥಳೀಯರ ಮಾತು.

Intro:ಬಿಳಿಗಿರಿರಂಗನ ಬೆಟ್ಟದಲ್ಲಿ ತುಳಸಿಮರ ಇಲ್ಲಾ: ಇದು ಈಟಿವಿ ಭಾರತ ರಿಯಾಲಿಟಿ ಚೆಕ್

ಚಾಮರಾಜನಗರ: ತುಳಿಸಿ ಗಿಡವನ್ನು ನೋಡಿದ್ದೀರಿ ಆದರೆ ತುಳಸಿ ಮರ ನೋಡಿದ್ದೀರಾ, ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಅಪರೂಪವಾದ ತುಳಸಿಮರ ಇದೆ ಎಂದು ಹರಡಿರುವ ವೈರಲ್ ಮೆಸೆಜ್ ಸುಳ್ಳು ಮಾಹಿತಿಯಿಂದ ಕೂಡಿದೆ.

Body:ಹೌದು, ವೈರಲ್ ಮೆಸೆಜ್ ನ ಕಾಡು ಹಿಡಿದು ಈಟಿವಿ ಭಾರತ ರಿಯಾಲಿಟಿ ಚೆಕ್ ನಡೆಸಿದಾಗ ಸಾಮಾಜಿಕ ಜಾಲತಾಣದಲ್ಲಿ ತುಳಸಿ ಮರ ಎಂದು ವೈರಲ್ ಆಗಿರುವ ಫೋಟೋ ತುಳಿಸಿಮರವಲ್ಲ ಅದೊಂದು ಕಾಡು ಜಾತಿಯ ಮರವಾಗಿದ್ದು ಪ್ರಾಣಿಗಳು ಕೂಡ ತಿನ್ನಲ್ಲಾ, ಮೃದು ಕಾಂಡ ಒಳಗೊಂಡಿದೆ ಎಂದು ಸ್ಥಳೀಯ ಗಿರಿಜನರು ಮಾಹಿತಿ ನೀಡಿದ್ದಾರೆ.

ಬಿಳಿಗಿರಿರಂಗನ ಬೆಟ್ಟದ ಚೆಕ್ ಪೋಸ್ಟ್ ನಿಂದ ೧ ಕಿಮೀ ದೂರದ ರಸ್ತೆಬದಿಯಲ್ಲಿನ ಮರವನ್ನು ಸೆರೆಹಿಡಿದು ತುಳಸಿಮರ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಈ ರೀತಿಯ ಮರಗಳು ಬಿಆರ್ ಟಿ ಅರಣ್ಯ ಪ್ರದೇಶದ ರಸ್ತೆಯ ಇಕ್ಕೆಲಗಳಲ್ಲಿ ನೂರಾರಿದೆ. ಈ ಕುರಿತು ಅರಣ್ಯ ಇಲಾಖೆಯಲ್ಲಿ ೩೦ ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಮಹದೇವ ಈಟಿವಿ ಭಾರತದೊಂದಿಗೆ ಮಾತನಾಡಿ, ನಾನು ಇದುವರೆವಿಗೂ ತುಳಸಿ ಮರ ನೋಡಿಲ್ಲ, ವೈರಲ್ ಆಗಿರುವ ಮರದ ಚಿತ್ರವು ತುಳಸಿ ಮರದ್ದಲ್ಲ ಅದನ್ನು ಸ್ಥಳೀಯರು ನೇಲಾಡಿ, ಉಲುಬೆ ಮರ ಎಂದು ಕರೆಯುತ್ತಾರೆ‌‌. ತುಳಸಿ ಗಿಡದ ರೀತಿ ಇದರ ಗೊಂಡೆಯೂ ಇರುವುದರಿಂದ ಕೆಲವರು ತಪ್ಪಾಗಿ ಅರ್ಥೈಸಿದ್ದಾರೆ ಎಂದರು.

Conclusion:ಸಾಮಾಜಿಕ ಜಾಲತಾಣದಲ್ಲಿ ಹರಡಿರುವ ತುಳಿಸಿಮರ ಇದೆ ಎಂಬ ಮಾಹಿತಿ ಸತ್ಯಕ್ಕೆ ದೂರವಾಗಿದ್ದು, ಬಿಳಿಗಿರಿರಂಗನ ಬೆಟ್ಟದಲ್ಲಿ ಇದುವರೆವಿಗೂ ಯಾವುದೇ ತುಳಸಿಮರ ಕಂಡುಬಂದಿಲ್ಲ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.