ETV Bharat / state

ಬ್ಲ್ಯಾಕ್​​ ಫಂಗಸ್‌ಗೆ ಜಿಲ್ಲೆಯಲ್ಲೇ ಚಿಕಿತ್ಸೆ, 25 ವಾರ್ಡ್ ಮೀಸಲು: ಟಾಸ್ಕ್ ಪೋರ್ಸ್ ಸಭೆಯಲ್ಲಿ ತೀರ್ಮಾನ

author img

By

Published : May 29, 2021, 2:22 AM IST

ಇತ್ತೀಚೆಗೆ ಕಂಡು ಬರುತ್ತಿರುವ ಬ್ಲ್ಯಾಕ್​​ ಫಂಗಸ್ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಯನ್ನು ಅವಲಂಬಿಸುವುದನ್ನು ತಪ್ಪಿಸಿ ಜಿಲ್ಲೆಯಲ್ಲೇ ಅಗತ್ಯ ಶಸ್ತ್ರಚಿಕಿತ್ಸೆ ಪ್ರಯೋಗಾಲಯ, ಇನ್ನಿತರ ವೈದ್ಯಕೀಯ ಸಲಕರಣೆಗಳನ್ನು ತ್ವರಿತವಾಗಿ ಖರೀದಿಸಲು ತೀರ್ಮಾನ ಮಾಡಲಾಗಿದೆ.

task force meet
task force meet

ಚಾಮರಾಜನಗರ: ಬ್ಲ್ಯಾಕ್​​ ಫಂಗಸ್‌ನಿಂದ ಬಳಲುವ ರೋಗಿಗಳಿಗೆ ಜಿಲ್ಲಾಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡುವುದರ ಜೊತೆಗೆ 25 ವಾರ್ಡ್​​ ಮೀಸಲಿಡಲು ಟಾಸ್ಕ್ ಫೋರ್ಸ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಟಾಸ್ಕ್ ಪೋರ್ಸ್ ಸಭೆಯಲ್ಲಿ ಪರಿಣತರು, ಸಮಿತಿ ಸದಸ್ಯರು ಚರ್ಚಿಸಿ ಜಿಲ್ಲೆಯಲ್ಲಿ ಇತ್ತೀಚೆಗೆ ಕಂಡು ಬರುತ್ತಿರುವ ಬ್ಲ್ಯಾಕ್​​ ಫಂಗಸ್ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಯನ್ನು ಅವಲಂಬಿಸುವುದನ್ನು ತಪ್ಪಿಸಿ ಜಿಲ್ಲೆಯಲ್ಲೇ ಅಗತ್ಯ ಶಸ್ತ್ರಚಿಕಿತ್ಸೆ ಪ್ರಯೋಗಾಲಯ, ಇನ್ನಿತರ ವೈದ್ಯಕೀಯ ಸಲಕರಣೆಗಳನ್ನು ತ್ವರಿತವಾಗಿ ಖರೀದಿಸಿ‌ ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲು ತೀರ್ಮಾನ ಮಾಡಲಾಗಿದೆ. ಇದಕ್ಕಾಗಿ 25 ವಾರ್ಡ್​​ ಮೀಸಲಿಡುವ ನಿರ್ಧಾರ ಕೈಗೊಳ್ಳಲಾಗಿದೆ.

ಕೋವಿಡ್ ಮೂರನೇ ಅಲೆಯ ಆಯಾಮಗಳನ್ನು ಪರಿಶೀಲಿಸಿ ಇದನ್ನು ಸಮರ್ಥವಾಗಿ ಎದುರಿಸುವ ಸಂಬಂಧ ಪೂರ್ಣ ಪ್ರಮಾಣದಲ್ಲಿ ಅಧ್ಯಯನ ಮಾಡಿ ಅವಶ್ಯಕ ಸಿದ್ಧತೆ ಕ್ರಮಗಳ ಕುರಿತ ಸಮಗ್ರ ವರದಿಯನ್ನು ಮುಂದಿನ ಸಭೆಯ ವೇಳೆಗೆ ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.

ಇದನ್ನೂ ಓದಿ: Hassan murder Case: ಆರೋಪಿಗಳ ಬಂಧನ ಮಾಡಿದ ಪೊಲೀಸರು

ಒಟ್ಟಾರೆ ಜಿಲ್ಲೆಯಲ್ಲಿ ಪಾಸಿಟಿವಿಟಿ, ಮರಣದ ಪ್ರಮಾಣ ತಗ್ಗಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಸೋಂಕು ತಡೆಗಾಗಿ ಕಾರ್ಯಯೋಜನೆಯನ್ನು ಇನ್ನಷ್ಟು ಬಲವರ್ಧನೆಗೊಳಿಸಬೇಕು. ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಕಾರ್ಯಪಡೆಗಳಲ್ಲಿ ಈ ಬಗ್ಗೆ ವಿವರವಾಗಿ ಚರ್ಚೆಯಾಗಬೇಕು. ಪ್ರತಿ ನಾಗರಿಕರ ಆರೋಗ್ಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕೊರೊನಾ ನಿಯಂತ್ರಣಕ್ಕೆ ನಾವು ಹಾಕಿಕೊಂಡಿರುವ ಗುರಿ ಶೇ. 100ರಷ್ಟು ಯಶಸ್ವಿಯಾಗುವ ದಿಸೆಯಲ್ಲಿ ಮುಂದುವರೆಬೇಕೆಂದು ಸಚಿವರು ಸಭೆಯಲ್ಲಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.