ETV Bharat / state

ಮತಗಟ್ಟೆಯತ್ತ ಸಿಬ್ಬಂದಿ: ಕಾಡಂಚಿನ ಗ್ರಾಮಗಳಿಗೆ ಜೀಪ್ ವ್ಯವಸ್ಥೆ- ಭೂರಿ ಭೋಜನ

author img

By

Published : May 9, 2023, 3:46 PM IST

ಚಾಮರಾಜನಗರ ಜಿಲ್ಲೆಯಲ್ಲಿ ಮತದಾನ ಹೊಂದಿರುವ ಸಿಬ್ಬಂದಿಗೆ ಮಸ್ಟರಿಂಗ್ ಕೇಂದ್ರ ಆವರಣದಲ್ಲೇ ಅಂಚೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು.

ಮತಗಟ್ಟೆ
ಮತಗಟ್ಟೆ

ಚುನಾವಣಾಧಿಕಾರಿ ಯೋಗಾನಂದ ಅವರು ಮಾತನಾಡಿದರು

ಚಾಮರಾಜನಗರ: ಪ್ರಜಾಪ್ರಭುತ್ವದ ಹಬ್ಬ ಚುನಾವಣೆಗೆ ಕೆಲವೇ ಗಂಟೆಗಳು ಬಾಕಿ ಇದ್ದು, ಜಿಲ್ಲೆಯಲ್ಲಿ ಮಸ್ಟರಿಂಗ್ ಕೇಂದ್ರಗಳಿಂದ ಚುನಾವಣಾ ಸಿಬ್ಬಂದಿ ಮತಗಟ್ಟೆಗಳತ್ತ ತೆರಳಿದ್ದಾರೆ.

ಚಾಮರಾಜನಗರದ ಪದವಿ ಕಾಲೇಜು ಹಾಗೂ ಕೊಳ್ಳೆಗಾಲದ ಎಂ.ಜಿ.ಎಸ್.ವಿ ಪದವಿಪೂರ್ವ ಕಾಲೇಜಿನ ಮಸ್ಟರಿಂಗ್ ಕೇಂದ್ರಗಳಿಂದ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಾದ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಹನೂರಿನ ವಿವಿಧ ಮತಗಟ್ಟೆಗಳಿಗೆ ಇವಿಎಂ ಹಿಡಿದು ಸಿಬ್ಬಂದಿ ತೆರಳಿದ್ದಾರೆ.

ಅಂಚೆ ಮತದಾನ ಮಾಡಿದ ಸಿಬ್ಬಂದಿ: ಚಾಮರಾಜನಗರ ಜಿಲ್ಲೆಯಲ್ಲಿ ಮತದಾನ ಹೊಂದಿರುವ ಸಿಬ್ಬಂದಿಗೆ ಮಸ್ಟರಿಂಗ್ ಕೇಂದ್ರ ಕೇಂದ್ರದ ಆವರಣದಲ್ಲೇ ಅಂಚೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಅಂಚೆ ಮತದಾನ ಮಾಡಿದ ಬಳಿಕ ಚುನಾವಣೆಗೆ ಸಿಬ್ಬಂದಿ ತೆರಳಿದರು. ಶಿಕ್ಷಕರು, ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಅಂಚೆ ಮತ ಪತ್ರಗಳನ್ನು ಬ್ಯಾಲೆಟ್ ಬಾಕ್ಸ್​ಗಳಲ್ಲಿ ಹಾಕಿ ತಮ್ಮ ಹಕ್ಕು ಚಲಾಯಿಸಿದರು.

ಈ ಬಗ್ಗೆ ಚಾಮರಾಜನಗರ ಚುನಾವಣಾಧಿಕಾರಿ ಯೋಗಾನಂದ ಅವರು ಮಾತನಾಡಿದ್ದು, ನಾಳೆ 10-5-2023ರಂದು ನಮ್ಮ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ನಿಮಿತ್ತ ಇಂದು ನಾವು ಮತದಾನಕ್ಕೆ ಸಿಬ್ಬಂದಿ ನಿಯೋಜಿಸಲು ಮಸ್ಟರಿಂಗ್​ ಅನ್ನು ಮಾಡುತ್ತಿದ್ದೇವೆ. ನಮ್ಮ ಕ್ಷೇತ್ರದಲ್ಲಿ ಒಟ್ಟು 239 ಮತಗಟ್ಟೆಗಳು ಇವೆ. ಪ್ರತಿ ಮತಗಟ್ಟೆಗೂ ನಾಲ್ಕು ಜನ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಜೊತೆಗೆ ಮತದಾನಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಕೊಡುತ್ತಿದ್ದೇವೆ. ಪ್ರತಿ ಮತಗಟ್ಟೆಗೆ ನಾವು ರೂಟ್​ ಮೂಲಕ ಬಸ್​ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದೇವೆ ಎಂದರು.

ಭರ್ಜರಿ ಬೋಜನ ವ್ಯವಸ್ಥೆ
ಭರ್ಜರಿ ಬೋಜನ ವ್ಯವಸ್ಥೆ

ನಮ್ಮಲ್ಲಿ ಸುಮಾರು 56 ರೂಟ್​ಗಳನ್ನು ಹೊಂದಿವೆ. 40 ಕೆಎಸ್​ಆರ್​ಟಿಸಿ ಬಸ್​ಗಳನ್ನು ಹೊಂದಿದ್ದೇವೆ. ಪ್ರತ್ಯೇಕದಲ್ಲಿರುವ, ದೂರದಲ್ಲಿರುವಂತಹ ಹಾಗೂ ಬೆಟ್ಟದಲ್ಲಿರುವಂತಹ ಪ್ರದೇಶಗಳಿಗೆ ಪ್ರತ್ಯೇಕವಾಗಿ ಜೀಪ್ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಇಲ್ಲಿಂದ ಇವತ್ತು ನಾವು 12:30ಕ್ಕೆ ನಮ್ಮ ಮಸ್ಟರಿಂಗ್ ಕೇಂದ್ರವನ್ನು ಬಿಟ್ಟು 2:30ರ ಒಳಗೆ ಮತಗಟ್ಟೆಯನ್ನು ತಲುಪುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದೆವು. ಮಳೆ ಬರುವ ಸಂಭವ ಇರುವುದರಿಂದ ನಾವು ಅವರನ್ನು ಬೇಗ ಕಳುಹಿಸಿದ್ದೇವೆ. ಅಲ್ಲಿ ಅವರಿಗೆ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ ಹಾಗೂ ಪೀಠೋಪಕರಣದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕಾಡಂಚಿನ ಗ್ರಾಮಗಳಿಗೆ ಜೀಪ್ ವ್ಯವಸ್ಥೆ: ವಿವಿಧ ಮತಗಟ್ಟೆಗಳಿಗೆ ತೆರಳಲು ಬಸ್ ಜೊತೆಗೆ 4×4 ಜೀಪ್ ವ್ಯವಸ್ಥೆಯನ್ನು ಚುನಾವಣಾಧಿಕಾರಿಗಳು ಈ ಬಾರಿ ಕಲ್ಪಿಸಿದ್ದರು.‌ ಹನೂರು, ಚಾಮರಾಜನಗರ ತಾಲೂಕಿನ ವಿವಿಧ ಕಾಡಂಚಿನ ಗ್ರಾಮಗಳಿಗೆ, ರಸ್ತೆ ಇಲ್ಲದ ಊರುಗಳಿಗೆ, ಪ್ರಾಣಿ ಭೀತಿ ಇರುವ ಗ್ರಾಮಗಳಿಗೆ ಚುನಾವಣಾ ಸಿಬ್ಬಂದಿ ಜೀಪ್ ಮೂಲಕ ತೆರಳಿದರು.

ಹನೂರಲ್ಲಿ ಭರ್ಜರಿ ಭೋಜನ: ಚಾಮರಾಜನಗರ ಜಿಲ್ಲೆಯ ಹನೂರು ಮಸ್ಟರಿಂಗ್ ಕೇಂದ್ರದಲ್ಲಿ ಮತಗಟ್ಟೆ ಸಿಬ್ಬಂದಿಗೆ ಭೂರಿ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು.‌ ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಹಬ್ಬವಾದ್ದರಿಂದ ಲಾಡು, ಕೀರು, ಮೈಸೂರು ಪಾಕ್, 4 ಪಲ್ಯ , ಚಪಾತಿ, ಮುದ್ದೆ ಸೇರಿದಂತೆ ಭರ್ಜರಿ ಭೋಜನವನ್ನು ಮತಗಟ್ಟೆ ಸಿಬ್ಬಂದಿಗೆ ಉಣಬಡಿಸಲಾಯಿತು.

ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯು ಹದ್ದಿನ ಕಣ್ಣಿಟ್ಟಿದ್ದು, 2000ಕ್ಕೂ ಅಧಿಕ ಪೊಲೀಸರು ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ, ಸಿಆರ್​ಪಿಎಫ್, ಬೇರೆ ರಾಜ್ಯದ ಪೊಲೀಸರು ಕೂಡ ಜಿಲ್ಲೆಯ ಚುನಾವಣಾ ಕರ್ತವ್ಯವನ್ನು ನಿರ್ವಹಿಸಲಿದ್ದಾರೆ.

ಇದನ್ನೂ ಓದಿ: ಚುನಾವಣಾ ಆಯೋಗದಿಂದ ಕಾಂಗ್ರೆಸ್ ಅಧ್ಯಕ್ಷ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಷೋಕಾಸ್ ನೋಟಿಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.