ETV Bharat / state

ಸಚಿವರಿಗೆ ತನ್ನ ಬೆನ್ನ ಮೇಲಿನ ಬಾಸುಂಡೆ ತೋರಿಸಿ ಅಳಲು ತೋಡಿಕೊಂಡ ರೈತ!

author img

By

Published : Apr 22, 2020, 3:19 PM IST

ಗುಂಡ್ಲುಪೇಟೆ ಎಪಿಎಂಸಿಗೆ ಸಚಿವರು ಭೇಟಿ ನೀಡಿದ ವೇಳೆ ರೈತನೊಬ್ಬ ಶರ್ಟ್ ಕಳಚಿ ತನ್ನ ಬೆನ್ನ ಮೇಲಿನ ಬಾಸುಂಡೆ ತೋರಿಸಿ ಪೊಲೀಸರು ಸುಖಾಸುಮ್ಮನೆ ಹೊಡೆಯುತ್ತಾರೆ ಎಂದು ಅಳಲು ತೋಡಿಕೊಂಡಿದ್ದಾನೆ.

ST Somashekhar
ಎಸ್.ಟಿ.ಸೋಮಶೇಖರ್

ಚಾಮರಾಜನಗರ: ಎಪಿಎಂಸಿಗೆ ಭೇಟಿ ನೀಡಿದ್ದ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್​​ಗೆ ರೈತರೊಬ್ಬರು ತಮ್ಮ ಬೆನ್ನಿನ ಮೇಲಿನ ಬಾಸುಂಡೆ ತೋರಿಸಿ ಅಳಲು ತೋಡಿಕೊಂಡ ಘಟನೆ ಗುಂಡ್ಲುಪೇಟೆಯಲ್ಲಿ ನಡೆಯಿತು.

ಇಂದು ಬೆಳಗ್ಗೆ ಗುಂಡ್ಲುಪೇಟೆ ಎಪಿಎಂಸಿಗೆ ಸಚಿವರು ಭೇಟಿಯಿತ್ತ ವೇಳೆ ರೈತನೊಬ್ಬ ತನ್ನ ಶರ್ಟ್ ಕಳಚಿ ಬೆನ್ನ ಮೇಲಿನ ಬಾಸುಂಡೆ ತೋರಿಸಿ ಪೊಲೀಸರು ಸುಖಾಸುಮ್ಮನೆ ಹೊಡೆಯುತ್ತಾರೆ ಎಂದು ಅಳಲು ತೋಡಿಕೊಂಡಿದ್ದಾನೆ. ಇನ್ನು ಹಲ್ಲೆ ಮಾಡಿಲ್ಲವೆಂದು ಪಿಎಸ್ಐ ಲತೇಶ್ ಕುಮಾರ್​ ಸಮಜಾಯಿಷಿ ನೀಡಿದರು. ಮುಂದೆ ಈ ರೀತಿ ಘಟನೆ ಆಗದಂತೆ ನಡೆದುಕೊಳ್ಳಿ ಎಂದು ‌ಸಚಿವರು ಸೂಚಿಸಿದರು‌.

ಬಳಿಕ ಚಾಮರಾಜನಗರ ಎಪಿಎಂಸಿಗೆ ಸಚಿವರು ಭೇಟಿ ನೀಡಿದ ವೇಳೆ ಸೇರಿದ್ದ ಕಾರ್ಯಕರ್ತರು, ಎಪಿಎಂಸಿ ದಲ್ಲಾಳಿಗಳ ದಂಡನ್ನು ಕಂಡು ವಿಚಲಿತಗೊಂಡ ಅವರು, ಪೊಲೀಸರಿಗೆ ಎಲ್ಲರನ್ನೂ ದೂರ ಕಳುಹಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಸೂಚಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.