ETV Bharat / state

ಮಗಳ ಆರೋಗ್ಯ ವಿಚಾರಿಸಿ ಹಿಂತಿರುಗುವಾಗ ಅಪಘಾತ: ಸ್ಥಳದಲ್ಲೇ ತಂದೆ ಸಾವು

author img

By

Published : Mar 15, 2021, 7:43 PM IST

ಬೈಕ್​ನಿಂದ ಆಯತಪ್ಪಿ ಬಿದ್ದು ಬೈಕ್​ ಸವಾರ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಚಂಗವಾಡಿ- ಮಣಗಳ್ಳಿ ರಸ್ತೆಯಲ್ಲಿ ನಡೆದಿದೆ.

Person killed in accident
ಅಪಘಾತದಲ್ಲಿ ವ್ಯಕ್ತಿ ಸಾವು

ಚಾಮರಾಜನಗರ: ಮಗಳ‌ ಆರೋಗ್ಯ ವಿಚಾರಿಸಿ ಹಿಂತಿರುಗುವಾಗ ಬೈಕ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಚಂಗವಾಡಿ- ಮಣಗಳ್ಳಿ ರಸ್ತೆಯಲ್ಲಿ ನಡೆದಿದೆ.

ಹನೂರು ತಾಲೂಕಿನ ಲೊಕ್ಕನಹಳ್ಳಿ ಹೋಬಳಿಯ ಹಿರಿಯಂಬಲ ಗ್ರಾಮದ ಜಡೇಸ್ವಾಮಿ (36) ಮೃತ ದುರ್ದೈವಿ.‌ ಜಡೇಸ್ವಾಮಿಯು ಹನೂರಿನ ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ತನ್ನ ಪುತ್ರಿಯನ್ನು ನೋಡಿಕೊಂಡು ವಾಪಸ್​ ಬರುವಾಗ ಘಟನೆ ನಡೆದಿದೆ.

ಸದ್ಯ ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಹನೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದು, ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.