ETV Bharat / state

ಭಕ್ತಾದಿಗಳೇ ಗಮನಿಸಿ.. ಮಲೆ ಮಹದೇಶ್ವರ ಬೆಟ್ಟಕ್ಕೆ ಮೂರು ದಿನ ನಿರ್ಬಂಧ

author img

By

Published : Sep 4, 2021, 9:39 AM IST

ಮಲೆ ಮಹದೇಶ್ವರ ಬೆಟ್ಟಕ್ಕೆ ಸೆ. 5ರಿಂದ ಮೂರು ದಿನಗಳ ಕಾಲ ಭಕ್ತಾದಿಗಳ ಪ್ರವೇಶ ನಿರ್ಬಂಧಿಸಲಾಗಿದೆ.

no-entry-to-male-mahadeshwara-hill-temple-for-three-days
ಮಲೆ ಮಹದೇಶ್ವರ ಬೆಟ್ಟಕ್ಕೆ ಮೂರು ದಿನ ನಿರ್ಬಂಧ

ಚಾಮರಾಜನಗರ: ಕೊರೊನಾ ಕಟ್ಟೆಚ್ಚರವಾಗಿ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಮೂರು ದಿನಗಳ ಕಾಲ ಭಕ್ತಾದಿಗಳ ಪ್ರವೇಶ ನಿರ್ಬಂಧಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಶ್ರಾವಣ ಮಾಸದ ಕೊನೆಯ ದಿನಗಳಾಗಿರುವ ಸೆ. 5ರಿಂದ 7 ಅಂದರೆ ನಾಳೆ ಭಾನುವಾರದಿಂದ ಮಂಗಳವಾರದ ತನಕ ಎಣ್ಣೆಮಜ್ಜನ, ಅಮವಾಸ್ಯೆ ಪೂಜೆ ಹಾಗೂ 108 ಕುಂಭಾಭಿಷೇಕ ನಡೆಯಲಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಭಕ್ತರು ಬರುವ ಹಿನ್ನೆಲೆಯಲ್ಲಿ ಮೂರು ದಿ‌ನ ಪ್ರವೇಶ ನಿಷೇಧಿಸಿ, ವಿಶೇಷ ಪೂಜೆಯನ್ನು ಸ್ಥಳೀಯವಾಗಿ, ಸರಳವಾಗಿ ಆಚರಿಸಲು ಪ್ರಾಧಿಕಾರ ನಿರ್ಧರಿಸಿದೆ.

no-entry-to-male-mahadeshwara-hill-temple-for-three-days
ಮಲೆ ಮಹದೇಶ್ವರ ಬೆಟ್ಟ

ಈಗಾಗಲೇ ಕಳೆದ ನಾಲ್ಕು ವಾರಗಳಿಂದ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಶ್ರಾವಣ ಶನಿವಾರಗಳಲ್ಲಿ ಜನರ ಪ್ರವೇಶಕ್ಕೆ ನಿರ್ಬಂಧವಿದೆ.

ಇದನ್ನೂ ಓದಿ: ಮಕ್ಕಳನ್ನು ಆಕರ್ಷಿಸಲು ಹೊಸ ಪ್ರಯತ್ನ.. ರೈಲು ಬೋಗಿಯಾಗಿ ಬದಲಾಯ್ತು ಕಾಳನಕೊಪ್ಪಲು ಶಾಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.