ETV Bharat / state

ಅಮ್ಮಾ ಇದು ನ್ಯಾಯವೇ?.. ಖಾಸಗಿ ಆಸ್ಪತ್ರೆ ನೀರಿನ ತೊಟ್ಟಿಯಲ್ಲಿ ಶಿಶು ಶವ ಪತ್ತೆ

author img

By

Published : Jun 12, 2021, 3:57 AM IST

ಕೊಳ್ಳೇಗಾಲ ತಾಲೂಕಿನ‌ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಯ ಖಾಲಿ‌ ನೀರಿನ ತೊಟ್ಟಿಯಲ್ಲಿ ನವಜಾತ ಶಿಶುವಿನ‌ ಶವ ಪತ್ತೆಯಾಗಿದೆ.

new-born-baby-found-dead-in-hospital-water-tank
ಖಾಸಗಿ ಆಸ್ಪತ್ರೆಯ ನೀರಿನ ತೊಟ್ಟಿಯಲ್ಲಿ ಶಿಶು ಶವ ಪತ್ತೆ

ಚಾಮರಾಜನಗರ: ತಂದೆ-ತಾಯಿ ಎಂಬ ಪದಕ್ಕೆ ಅಪಮಾನ‌ ಎಂಬಂತೆ ಖಾಲಿ‌ ನೀರಿನ ತೊಟ್ಟಿಯಲ್ಲಿ ನವಜಾತ ಶಿಶುವಿನ‌ ಶವ ಪತ್ತೆಯಾಗಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ‌ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ನಡೆದಿದೆ.

ಅಂದಾಜು 6 ದಿನದ ಗಂಡು ಶಿಶು ಇದಾಗಿದ್ದು ಕರುಳಬಳ್ಳಿ ಕತ್ತರಿಸದೇ ಹಾಗೆ ಬಿಟ್ಟಿದ್ದು ಅಂಗವೈಕಲ್ಯ ಹೊತ್ತು ಜನಿಸಿರುವ ಕಾರಣ ಹೆತ್ತವರು ಪ್ಲಾಸ್ಟಿಕ್ ಕವರ್​ನಲ್ಲಿ ಮಗುವನ್ನು ಹಾಕಿ ಬಿಸಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

new-born-baby-found-dead-in-hospital-water-tank
ಶಿಶು ಶವ

ಆಸ್ಪತ್ರೆ ಸಿಬ್ಬಂದಿ ಶವಾಗಾರದ ಬಳಿ ಹೋದಾಗ ದುರ್ನಾತ ಬರುತ್ತಿರುವುದನ್ನು ಗಮನಿಸಿ ಪರಿಶೀಲಿಸಿದಾಗ ಪ್ಲಾಸ್ಟಿಕ್ ಕವರಿನಲ್ಲಿ ಶಿಶು ಶವ ಪತ್ತೆಯಾಗಿದೆ. ಆಸ್ಪತ್ರೆಯಲ್ಲೇ ಹೆರಿಗೆಯಾಗಿದ್ದರೆ ಕರುಳ ಬಳ್ಳಿಯನ್ನು ಕತ್ತರಿಸುತ್ತಿದ್ದರಿಂದ ಆಸ್ಪತ್ರೆಯಲ್ಲಿ ಈ ಮಗು ಹುಟ್ಟಿಲ್ಲ. ಸಿಸಿಟಿವಿ ಪರಿಶೀಲಿಸಲಾಗುತ್ತಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪಿಐ ಸಂತೋಷ್ ಕಶ್ಯಪ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.