ETV Bharat / state

ಲವ್ ವಿಚಾರಕ್ಕೆ ಲೈಟ್ ಬಾಯ್ ಹತ್ಯೆ ಕೇಸ್: ಗುಂಡ್ಲುಪೇಟೆ ಪೊಲೀಸರಿಂದ ಇಬ್ಬರು ಅರೆಸ್ಟ್

author img

By

Published : Apr 5, 2022, 8:48 PM IST

ಹೊಸೂರು ಬಡಾವಣೆಯ ಚಿಕ್ಕರಾಜು (30) ಎಂಬಾತ ಬೆಂಗಳೂರಿನಲ್ಲಿ ಲೈಟ್ ಬಾಯ್ ಆಗಿದ್ದು, ಯುಗಾದಿ ಹಬ್ಬಕ್ಕೆಂದು ಮನೆಗೆ ಬಂದಿದ್ದಾಗ ಕೊಲೆಯಾಗಿದ್ದ. ಮೃತನ ತಮ್ಮ ಸೋನಾಕ್ಷಿ ಎಂಬಾಕೆಯನ್ನು ಪ್ರೀತಿಸುತ್ತಿದ್ದರಿಂದಲೇ ಯುವತಿ ಸಂಬಂಧಿಕರು ಚಾಕು ಇರಿದಿದ್ದಾರೆ ಎನ್ನಲಾಗ್ತಿದೆ.

ಚಿಕ್ಕರಾಜು (30)
ಚಿಕ್ಕರಾಜು (30)

ಚಾಮರಾಜನಗರ: ಪ್ರೀತಿ ವಿಚಾರದಲ್ಲಿ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಕೇಸಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಹೊಸೂರು ಬಡಾವಣೆಯ ಅಭಿಷೇಕ್(20), ವಿನೋದ್(23) ಬಂಧಿತ ಆರೋಪಿಗಳಾಗಿದ್ದು, ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಹೊಸೂರು ಬಡಾವಣೆಯ ಚಿಕ್ಕರಾಜು (30) ಎಂಬಾತ ಬೆಂಗಳೂರಿನಲ್ಲಿ ಲೈಟ್ ಬಾಯ್ ಆಗಿದ್ದು, ಯುಗಾದಿ ಹಬ್ಬಕ್ಕೆಂದು ಮನೆಗೆ ಬಂದಿದ್ದಾಗ ಕೊಲೆಯಾಗಿದ್ದ. ಮೃತನ ತಮ್ಮ ಸೋನಾಕ್ಷಿ ಎಂಬಾಕೆಯನ್ನು ಪ್ರೀತಿಸುತ್ತಿದ್ದರಿಂದಲೇ ಯುವತಿ ಸಂಬಂಧಿಕರು ಚಿಕ್ಕರಾಜುಗೆ ಚಾಕು ಇರಿದಿದ್ದಾರೆ ಎನ್ನಲಾಗ್ತಿದೆ.

ಸಿಗದ ಮಡಹಳ್ಳಿ ಗುಡ್ಡ ಕುಸಿತದ ಆರೋಪಿ: ಮತ್ತೊಂದೆಡೆ ಕ್ವಾರಿ ಗುಡ್ಡ ಕುಸಿದು ಮೂವರು ಮೃತಪಟ್ಟ ಘಟನೆ ನಡೆದು ಒಂದು ತಿಂಗಳಾದರೂ ಪತ್ತೆಯಾಗದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಘಟನೆ ಬಗ್ಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.

ಓದಿ: ಬೆಂಗಳೂರು ಸಿಟಿ ಮಾರ್ಕೆಟ್ ಮೇಲ್ಸೇತುವೆಯಲ್ಲಿ ಅಪಘಾತ : ಸಂಚಾರ ದಟ್ಟಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.