ಶಾಸಕ ಪುಟ್ಟರಂಗಶೆಟ್ಟಿ ಆದಾಯಕ್ಕೂ ಮೀರಿ ಅಕ್ರಮ ಆಸ್ತಿ: ಬಿಜೆಪಿ ಮುಖಂಡ ಆರೋಪ

author img

By

Published : Nov 25, 2022, 3:12 PM IST

ಕಾಡಾ ಅಧ್ಯಕ್ಷ ಜಿ ನಿಜಗುಣರಾಜು

ಶಾಸಕ ಪುಟ್ಟರಂಗಶೆಟ್ಟಿ ಸಂಪಾದನೆಗೂ ಮೀರಿ ಹೆಚ್ಚಿನ ಆಸ್ತಿಯನ್ನು ಕೇವಲ 15 ವರ್ಷಗಳ ಅವಧಿಯಲ್ಲಿ ಮಾಡಿದ್ದಾರೆ. ಕ್ಷೇತ್ರದ ಜನರು ತಮ್ಮ ಸೇವೆ ಮಾಡಲಿ ಎಂದು ಮತ ನೀಡಿದ್ದರೆ, ಅದನ್ನು ದುರ್ಬಳಕೆ ಮಾಡಿಕೊಂಡು ಸ್ವಾರ್ಥಕ್ಕಾಗಿ ಅಕ್ರಮವಾಗಿ ಹಣ ಮಾಡಿದ್ದಾರೆ ಎಂದು ಕಾಡಾ ಅಧ್ಯಕ್ಷ ಜಿ ನಿಜಗುಣರಾಜು ಅವರು ಆರೋಪಿಸಿದ್ದಾರೆ.

ಚಾಮರಾಜನಗರ: ಚಾಮರಾಜನಗರ ಕಾಂಗ್ರೆಸ್ ಶಾಸಕ ಸಿ ಪುಟ್ಟರಂಗಶೆಟ್ಟಿ ಕಳೆದ 15 ವರ್ಷದಿಂದ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿ ಕೋಟ್ಯಂತರ ರೂ. ಸಂಪಾದನೆ ಮಾಡಿದ್ದು, ಅವರ ವಿರುದ್ದ ಐಟಿ ಹಾಗೂ ಇಡಿಗೆ ದೂರು ನೀಡುತ್ತೇವೆ ಎಂದು ಕಾಡಾ ಅಧ್ಯಕ್ಷ ಜಿ ನಿಜಗುಣರಾಜು ಅವರು ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿ, ಶಾಸಕ ಪುಟ್ಟರಂಗಶೆಟ್ಟಿ ಸಂಪಾದನೆಗೂ ಮೀರಿ ಹೆಚ್ಚಿನ ಆಸ್ತಿಯನ್ನು ಕೇವಲ 15 ವರ್ಷಗಳ ಅವಧಿಯಲ್ಲಿ ಮಾಡಿದ್ದಾರೆ. ಕ್ಷೇತ್ರದ ಜನರು ತಮ್ಮ ಸೇವೆ ಮಾಡಲಿ ಎಂದು ಮತ ನೀಡಿದ್ದರೆ, ಅದನ್ನು ದುರ್ಬಳಕೆ ಮಾಡಿಕೊಂಡು ಸ್ವಾರ್ಥಕ್ಕಾಗಿ ಅಕ್ರಮವಾಗಿ ಹಣ ಮಾಡಿದ್ದಾರೆ ಎಂದು ಆರೋಪಿಸಿದರು.

ಕಾಡಾ ಅಧ್ಯಕ್ಷ ಜಿ ನಿಜಗುಣರಾಜು ಅವರು ಮಾತನಾಡಿದರು

ಶಾಸಕರು ತಾವೇ ಹೇಳಿಕೊಂಡಂತೆ 42 ವರ್ಷಗಳಿಂದ ಗಣಿಗಾರಿಕೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಇವರು ಸರಿಯಾಗಿ ಆದಾಯ ಮತ್ತು ತೆರಿಗೆ ಇಲಾಖೆಗಳಿಗೆ ಮಾಹಿತಿ ನೀಡದೇ ವಂಚಿಸಿರುವುದು ಸ್ಪಷ್ಟವಾಗಿದೆ. ಹೀಗಾಗಿ ಅವರು ಕ್ಷೇತ್ರದ ಜನರಿಗೆ ಶ್ವೇತ ಪತ್ರವನ್ನು ಹೊರಡಿಸಲಿ. ಅವರು ಮಾಡಿರುವ ಅಕ್ರಮ ಆಸ್ತಿಗಳ ಬಗ್ಗೆ ತನಿಖೆಯಾಗಲಿ. ಯರಂಗಬಳ್ಳಿ ಬಳಿ ಕ್ವಾರಿ, ಗುಂಬಳ್ಳಿ ಬಳಿ ಕ್ವಾರಿ, ಶಂಕರಪುರದಲ್ಲಿ 20 ಗುಂಟೆ ಜಮೀನು, ನ್ಯಾಯಾಲಯ ರಸ್ತೆಯಲ್ಲಿ ಮನೆ, ಉಪ್ಪಿನ ಮೋಳೆ ಬಳಿ ಪೆಟ್ರೋಲ್ ಬಂಕ್ ಸೇರಿದಂತೆ ಇನ್ನು ಅನೇಕ ಕಡೆ ಆಸ್ತಿ ಪಾಸ್ತಿಗಳು ಪತ್ನಿ, ಮಕ್ಕಳ ಹೆಸರಿನಲ್ಲಿ ಮಾಡಿದ್ದು, ಇವೆಲ್ಲವೂ ಸಹ ಸಮಗ್ರ ತನಿಖೆಯಾಗಬೇಕು ಎಂದು ನಿಜಗುಣರಾಜು ಒತ್ತಾಯಿಸಿದರು.

ಬಿಜೆಪಿಯಿಂದ ಶಾಸಕರ ವಿರುದ್ದ ಪತ್ರ ಚಳವಳಿ ಮಾಡಲಿದ್ದು, ಅಕ್ರಮ ಆಸ್ತಿ ಸಂಬಂಧ ಆದಾಯ ಮತ್ತು ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯಕ್ಕೆ ದೂರು ಕೊಡುವುದಾಗಿ ತಿಳಿಸಿದರು. ಕೆಲವು ದಿನಗಳ ಹಿಂದೆಯಷ್ಟೇ ಶಾಸಕರ ವಿರುದ್ಧ ಉದ್ಯಮಿ 9 ಕೋಟಿ ರೂ. ವಂಚನೆ ಆರೋಪ ಮಾಡಿದ್ದರು. ಈ ಆರೋಪವನ್ನು ಶಾಸಕರು ಅಲ್ಲಗಳೆದಿದ್ದರು. ಜೊತೆಗೆ, ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದರು.

ಓದಿ: 400 ರುಪಾಯಿ ಲಂಚ ಪಡೆದು ಕೆಲಸ ಕಳ್ಕೊಂಡ ಸರ್ಕಾರಿ ನೌಕರ: ಏನಿದು ಪ್ರಕರಣ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.