ETV Bharat / state

ಚಾಮರಾಜನಗರ: ಜಮೀನು ಕಾಯುವಾಗ ಆನೆ ದಾಳಿ; ತಂದೆ ಸಾವು, ಮಗ ಗಂಭೀರ

author img

By

Published : Jun 16, 2022, 2:31 PM IST

ಕಾಡು ಹಂದಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ಜಮೀನು ಕಾವಲು ಕಾಯುತ್ತಿದ್ದ ವೇಳೆ, ಆನೆಯೊಂದು ದಾಳಿ ನಡೆಸಿ, ತಂದೆ ಸಾವನ್ನಪ್ಪಿದ್ದು, ಮಗ ಗಂಭೀರವಾಗಿ ಗಾಯಗೊಂಡಿದ್ದಾರೆ.

Elephant attacked on farmer
ಚಾಮರಾಜನಗರ: ಜಮೀನು ಕಾಯುವಾಗ ಆನೆ ದಾಳಿ; ತಂದೆ ಸಾವು, ಮಗ ಗಂಭೀರ

ಚಾಮರಾಜನಗರ : ಬೆಳೆ ರಕ್ಷಣೆಗಾಗಿ ಜಮೀನು ಕಾಯುತ್ತಿದ್ದ ವೇಳೆ ಆನೆಯೊಂದು ದಾಳಿ ನಡೆಸಿದ್ದು, ಓರ್ವ ಮೃತಪಟ್ಟು ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದ ಕಾಡಂಚಿನ ಜಮೀನಿನಲ್ಲಿ ನಡೆದಿದೆ. ಶಿವಪುರ ಗ್ರಾಮದ ಬೆಳ್ಳಶೆಟ್ಟಿ(55) ಮೃತ ದುರ್ದೈವಿಯಾಗಿದ್ದು, ಇವರ ಮಗ ಮಹೇಶ್​ಗೆ ಭುಜ, ಕಾಲಿಗೆ ತೀವ್ರತರ ಪೆಟ್ಟಾಗಿದೆ.

ಇಂದು ಮುಂಜಾನೆ ಬೆಳೆ ರಕ್ಷಣೆ ಮಾಡುವ ಸಲುವಾಗಿ ಜಮೀನಿನಲ್ಲಿ ಕಾವಲು ಕಾಯುವಾಗ ದಿಢೀರ್​​​​​​​​​ ಆನೆಯೊಂದು ಲಗ್ಗೆ ಇಟ್ಟು ಬೆಳ್ಳಶೆಟ್ಟಿ ಅವರನ್ನು ಎಸೆದು, ತಲೆ ಮೇಲೆ ಕಾಲಿಟ್ಟಿದೆ ಎಂದು ತಿಳಿದು ಬಂದಿದೆ.

ಚಾಮರಾಜನಗರ: ಜಮೀನು ಕಾಯುವಾಗ ಆನೆ ದಾಳಿ; ತಂದೆ ಸಾವು, ಮಗ ಗಂಭೀರ

ಆನೆ ದಾಳಿ ಮಾಹಿತಿ ಅರಿತ 112 ಸಿಬ್ಬಂದಿ ಭೇಟಿ ಕೊಟ್ಟು ಮಹೇಶ್​ನನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಗುಂಡ್ಲುಪೇಟೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ರೈತ ಬೆಳ್ಳಶೆಟ್ಟಿ ಅವರು ನೆಲಗಡಲೆ ಬಿತ್ತನೆ ಮಾಡಿದ್ದು, ಕಾಡು ಹಂದಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ತಂದೆ - ಮಗ ಕಾವಲು ಕಾಯುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ : ಹಿಂಡಿನಿಂದ ಬೇರ್ಪಟ್ಟ ಹೆಣ್ಣಾನೆ.. ಅರಣ್ಯ ಸಿಬ್ಬಂದಿ ಮೇಲೆ ರೋಷಾವೇಷ ತೋರಿಸಿದ ಗಜರಾಣಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.