ETV Bharat / state

ಲಸಿಕಾ ಉತ್ಸವಕ್ಕೆ ಚಾಲನೆ.. ಈವರೆಗೆ ಒಂದು ಲಕ್ಷಕ್ಕೂ ಅಧಿಕ ಮಂದಿಗೆ ವ್ಯಾಕ್ಸಿನ್

author img

By

Published : Apr 11, 2021, 8:52 PM IST

177 ಮಂದಿ ಹೋಂ ಐಸೋಲೇಷನ್​​ನಲ್ಲಿದ್ದಾರೆ. 663 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇರಿಸಿದೆ. ಇಂದು 12 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ..

Drive to the Lasika Fest in chamrajnagar
ಲಸಿಕಾ ಉತ್ಸವಕ್ಕೆ ಚಾಲನೆ

ಚಾಮರಾಜನಗರ : ಇಂದಿನಿಂದ 4 ದಿನಗಳ ಕಾಲ ಹಮ್ಮಿಕೊಂಡಿರುವ ಲಸಿಕಾ ಉತ್ಸವಕ್ಕೆ ಜಿಲ್ಲೆಯಲ್ಲಿ ಚಾಲನೆ ಸಿಕ್ಕಿದೆ. ಲಸಿಕಾ ಉತ್ಸವದ ಪ್ರಯುಕ್ತ ನಗರಸಭೆ ವತಿಯಿಂದ ಲಸಿಕೆ ಪಡೆಯಲು ಜಾಗೃತಿ ಮೂಡಿಸುವ ವಿಶೇಷ ಪ್ರಚಾರ ಕಾರ್ಯಕ್ರಮಕ್ಕೆ ನಗರಸಭೆ ಅಧ್ಯಕ್ಷೆ ಆಶಾ ನಟರಾಜು ಚಾಲನೆ ಕೊಟ್ಟಿದ್ದಾರೆ.

ಲಸಿಕಾ ಉತ್ಸವಕ್ಕೆ ಚಾಲನೆ

ಜಿಲ್ಲಾದ್ಯಂತ ಈವರೆಗೂ 1 ಲಕ್ಷಕ್ಕೂ ಅಧಿಕ ಮಂದಿಗೆ ಕೋವಿಡ್ ಲಸಿಕೆ ವಿತರಿಸುವ ಮೂಲಕ ಜಿಲ್ಲೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಮೈಲಿಗಲ್ಲನ್ನು ಸ್ಥಾಪಿಸಿದೆ. ಜ.16ರಂದು ಜಿಲ್ಲೆಯಲ್ಲಿ ಕೊರೊನಾ ವಾರಿಯರ್‌​​ಗಳಾದ ವೈದ್ಯರು ಸೇರಿ ಆರೋಗ್ಯ ಸೇವೆಯಲ್ಲಿರುವ ಎಲ್ಲರಿಗೆ ಕೋವಿಡ್ ಲಸಿಕೆ ನೀಡುವ ಅಭಿಯಾನ ಆರಂಭವಾಯಿತು. ಬಳಿಕ ಕಂದಾಯ, ಪೊಲೀಸ್, ನಗರಾಭಿವೃದ್ಧಿ ಸೇರಿ ಇತರೆ ಇಲಾಖೆಗಳ ಅಧಿಕಾರಿ, ಸಿಬ್ಬಂದಿಯನ್ನೊಳಗೊಂಡ ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ನೀಡಲಾಗಿತ್ತು‌.

1 ಲಕ್ಷಕ್ಕೂ ಅಧಿಕ ಮಂದಿಗೆ ವ್ಯಾಕ್ಸಿನ್​ : ಮಾರ್ಚ್ 1 ರಿಂದ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಏ.1ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ನೀಡುವ ಮಹತ್ತರ ಅಭಿಯಾನ ಆರಂಭವಾಗಿದ್ದರಿಂದ ಈವರೆಗೆ ಚಾಮರಾಜನಗರ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆ‌. 10,601 ಆರೋಗ್ಯ ಕಾರ್ಯಕರ್ತರು, 4,301 ಮುಂಚೂಣಿ ಕಾರ್ಯಕರ್ತರು, 45 ರಿಂದ 59ರ ವಯೋಮಾನದವರು 27,707 ಜನ ಹಾಗೂ 60 ವರ್ಷ ಮೇಲ್ಪಟ್ಟ 58,977 ಮಂದಿ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ‌.

ಲಸಿಕಾ ಉತ್ಸವಕ್ಕೆ ಚಾಲನೆ : ಇಂದು ಲಸಿಕಾ ಉತ್ಸವಕ್ಕೆ ಚಾಲನೆ ಸಿಕ್ಕಿದೆ. ಲಸಿಕೆ ಪಡೆಯುವವರನ್ನು ಸ್ವಾಗತಿಸಲು ವಿಶೇಷವಾಗಿ ಕಮಾನು, ತಳಿರು-ತೋರಣಗಳಿಂದ ಲಸಿಕಾ ಕೇಂದ್ರಗಳನ್ನು ಸಿಂಗರಿಸಲಾಗಿತ್ತು.

ಹೊಸ ಕೋವಿಡ್​ ಪ್ರಕರಣ : ಜಿಲ್ಲೆಯಲ್ಲಿಂದು 51 ಹೊಸ ಕೋವಿಡ್​ ಪ್ರಕರಣ ಪತ್ತೆಯಾಗಿವೆ. ಓರ್ವರು ಮೃತಪಟ್ಟಿದ್ದಾರೆ. 255 ಸಕ್ರಿಯ ಪ್ರಕರಣಗಳಿವೆ. ಐಸಿಯುನಲ್ಲಿ 8 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 177 ಮಂದಿ ಹೋಂ ಐಸೋಲೇಷನ್​​ನಲ್ಲಿದ್ದಾರೆ. 663 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇರಿಸಿದೆ. ಇಂದು 12 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.