ETV Bharat / state

ದೇವರಾದ ಅಧಿಕಾರಿ! ದುಡ್ಡು ಬೇಡ ಅಧಿಕಾರಿ ಪುತ್ಥಳಿ ಬೇಕೆಂದ ಜನರು

author img

By

Published : Aug 7, 2022, 2:15 PM IST

ಕಾಡುಗಳ್ಳ ವೀರಪ್ಪನ್ ಮೋಸಕ್ಕೆ ಬಲಿಯಾದ ಅರಣ್ಯಾಧಿಕಾರಿ ಪಿ.ಶ್ರೀನಿವಾಸ ಅವರ ಪುತ್ಥಳಿಯನ್ನು ಚಾಮರಾಜನಗರ ಜಿಲ್ಲೆಯ ಹಾನೂರು ತಾಲೂಕಿನ ಗೋಪಿನಾಥಂ ಗ್ರಾಮದ ಜನರು ಮಾಡಿಸಿ ಅಭಿಮಾನ ಮೆರೆದಿದ್ದಾರೆ.

dfo-p-shrinivas-statue-at-gopinatham
ದೇವರಾದ ಆಫೀಸರ್... ದುಡ್ಡು ಬೇಡ ಆದರೆ ಅಧಿಕಾರಿ ಪುತ್ಥಳಿ ಬೇಕೆಂದ ಜನರು..!!

ಚಾಮರಾಜನಗರ: ಕಾಡುಗಳ್ಳ‌, ನರಹಂತಕ‌ನ ಊರಾದ ಹನೂರು ತಾಲೂಕಿನ ಗೋಪಿನಾಥಂ ಗ್ರಾಮದ ಜನರು ವೀರಪ್ಪನ್ ವಂಚನೆಗೆ ಬಲಿಯಾದ ಅರಣ್ಯಾಧಿಕಾರಿ ಪಿ.ಶ್ರೀನಿವಾಸ್ ಅವರ ಪುತ್ಥಳಿ ನಿರ್ಮಿಸಿ ಅಭಿಮಾನ ಮೆರೆದಿದ್ದಾರೆ. ಈ ಹಿಂದೆ ಚಾಮರಾಜನಗರ ಸಿಸಿಎಫ್ ಆಗಿದ್ದ ಮನೋಜ್ ಕುಮಾರ್ ಗೋಪಿನಾಥಂಗೆ ಭೇಟಿ ನೀಡಿದ ಸಂದರ್ಭ ಗ್ರಾಮದ ಅಭಿವೃದ್ಧಿ ಮತ್ತು ದೇವಾಲಯ ಅಭಿವೃದ್ಧಿಗೆಂದು 2 ಲಕ್ಷ ರೂ. ನೀಡಲು ಬಂದಿದ್ದಾರೆ.‌ ಆಗ ಗ್ರಾಮಸ್ಥರು ನಮಗೆ ಹಣ ಬೇಡ, ಡಿಎಫ್ಒ ಪಿ.ಶ್ರೀನಿವಾಸ್ ಅವರ ಪುತ್ಥಳಿ ಮಾಡಿಸಿಕೊಡಿ ಎಂದು ಮನವಿ ಮಾಡಿದ್ದಾರೆ.

ಗ್ರಾಮಸ್ಥರ ಒತ್ತಾಸೆಯಂತೆ ಗೋಪಿನಾಥಂನ ಮಾರಿಯಮ್ಮ ದೇವಾಲಯ ಮುಂಭಾಗದಲ್ಲಿ ಪ್ರತಿಷ್ಠಾಪಿಸಲು ಪಿ.ಶ್ರೀನಿವಾಸ್ ಅವರ ಎರಡು ಅಡಿಯ ಕಂಚಿನ ಪುತ್ಥಳಿ ಗ್ರಾಮಕ್ಕೆ ಬಂದಿದೆ. ಇದನ್ನು ಪ್ರತಿಷ್ಠಾಪಿಸಲು ದೇಗುಲ‌ ಮುಂಭಾಗದಲ್ಲಿ ಮಂಟಪದ ಕಾರ್ಯ ನಡೆಯುತ್ತಿದೆ. ಮುಂಬರುವ ಅರಣ್ಯ ಹುತಾತ್ಮರ ದಿನ ಪುತ್ಥಳಿಯನ್ನು ಅನಾವರಣಗೊಳಿಸಲಾಗುವುದು ಎಂದು ಕಾವೇರಿ ವನ್ಯಜೀವಿಧಾಮದ ಎಸಿಎಫ್ ಅಂಕರಾಜು ತಿಳಿಸಿದರು.

ವೀರಪ್ಪನ್ ಊರಿನಲ್ಲಿ ಅರಣ್ಯಾಧಿಕಾರಿ ಶ್ರೀನಿವಾಸ್ ಅವರನ್ನು ದೇವರಂತೆ ಪೂಜಿಸುತ್ತಿದ್ದು, ಪ್ರತಿ ಮನೆಯಲ್ಲೂ ಅವರ ಫೋಟೋ ಇರಿಸಲಾಗಿದೆ. ಅವರು ಕಟ್ಟಿಸಿದ ಮಾರಿಯಮ್ಮ ದೇವಾಲಯದಲ್ಲಿ ಅವರಿಗೇ ಮೊದಲ ಪೂಜೆ ಸಲ್ಲಿಕೆಯಾಗಲಿದೆ.‌ ವ್ಯಕ್ತಿ ಅಳಿದು 2 ದಶಕಗಳಾದರೂ ಇಂದಿನ ಯುವ ಪೀಳಿಗೆಗೂ ಶ್ರೀನಿವಾಸ್ ಮಾದರಿಯಾಗಿದ್ದು, ಅವರ ನೆನಪಿನಲ್ಲಿ ಗ್ರೀನ್ ವಾರಿಯರ್ ಎಂಬ ಅಭಿಮಾನಿ ಯುವಕರ ತಂಡ ರೂಪುಗೊಂಡಿದೆ. ಶ್ರೀನಿವಾಸ್ ಅವರ ಸಹೋದರಿಯೂ ಕೂಡ ಇತ್ತೀಚೆಗೆ ಗೋಪಿನಾಥಂಗೆ ಭೇಟಿಕೊಟ್ಟು ಅಣ್ಣನ ಬಗ್ಗೆ ಹೆಮ್ಮೆಪಟ್ಟಿದ್ದಾರೆ.

ಇದನ್ನೂ ಓದಿ: ಬಳ್ಳಾರಿ: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಭರ್ಜರಿ ತಿರಂಗ ತಯಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.