ETV Bharat / state

ಸಿ.ಪಿ.ಯೋಗೇಶ್ವರ್ ಭಾವ ನಾಪತ್ತೆ ಕೇಸ್: ಹನೂರಿನ ರಾಮಪುರದಲ್ಲಿ ಕಾರು ಪತ್ತೆ

author img

By ETV Bharat Karnataka Team

Published : Dec 4, 2023, 8:14 AM IST

Updated : Dec 4, 2023, 10:27 AM IST

BJP leader C.P.Yogeshwar relative missing case update: ನಾಪತ್ತೆಯಾಗಿರುವ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರ ಸಂಬಂಧಿಯ ಕಾರು ಹನೂರು ತಾಲೂಕಿನ ರಾಮಪುರದಲ್ಲಿ ಪತ್ತೆಯಾಗಿದೆ.

ಸಿ.ಪಿ.ಯೋಗೇಶ್ವರ್ ಭಾವ ನಾಪತ್ತೆ ಕೇಸ್
ಸಿ.ಪಿ.ಯೋಗೇಶ್ವರ್ ಭಾವ ನಾಪತ್ತೆ ಕೇಸ್

ಹನೂರಿನ ರಾಮಪುರದಲ್ಲಿ ಕಾರು ಪತ್ತೆ

ಚಾಮರಾಜನಗರ: ಚನ್ನಪಟ್ಟಣ ತಾಲೂಕಿನ ಚಕ್ಕರೆ ಗ್ರಾಮದ ತೋಟದ ಮನೆಯಿಂದ ಕೆಲ ದಿನಗಳ ಹಿಂದೆ ಕಾಣೆಯಾಗಿದ್ದ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಪಿ.ಯೋಗೇಶ್ವರ್ ಅವರ ಸಂಬಂಧಿಯ ಕಾರು ಹನೂರು ತಾಲೂಕಿನ ರಾಮಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ದೊರೆತಿದೆ.

ಯೋಗೇಶ್ವರ್ ಅವರ ಭಾವ ಚಕ್ಕರೆ ಗ್ರಾಮದ ಮಹದೇವಯ್ಯ ಮೂರು ದಿನಗಳ ಹಿಂದೆ ಬಿಳಿ ಬಣ್ಣದ ಬ್ರಿಜಾ ಕಾರುಸಮೇತ (KA-42 N0012) ಕಾಣೆಯಾಗಿದ್ದರು. ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶನಿವಾರ ಬೆಳಿಗ್ಗೆ ಮೊಬೈಲ್ ಟವರ್ ಲೊಕೇಶನ್​​ನಲ್ಲಿ ಪರಿಶೀಲನೆ ನಡೆಸಿದಾಗ ಮಲೆಮಹದೇಶ್ವರ ಬೆಟ್ಟದ ಸುತ್ತಮುತ್ತ ಇರುವುದಾಗಿ ತಿಳಿದು ಬಂದಿತ್ತು. ಇದೀಗ ರಾಮಪುರ ಪೊಲೀಸ್ ಠಾಣೆ ಸಮೀಪದ ರಾಮಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಕಾರು ಪತ್ತೆಯಾಗಿದೆ.

ಈಗಾಗಲೇ ರಾಮಪುರ ಪೊಲೀಸರು ಪರಿಶೀಲನೆ ನಡೆಸಿದ್ದು, ಕಾರು ಮಾತ್ರ ಆಸ್ಪತ್ರೆಯ ಮುಂಭಾಗ ನಿಂತಿದೆ. ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮಹದೇವಯ್ಯ ಬಗ್ಗೆ ಮಾಹಿತಿ ಸಿಕ್ಕಿಲ್ಲ. ತನಿಖೆ ಮುಂದುವರೆದಿದೆ.

ರಾಮನಗರ ಎಸ್​ಪಿ ಪ್ರತಿಕ್ರಿಯೆ: ಮಹದೇವಯ್ಯ ನಾಪತ್ತೆಯಾಗಿರುವ ಬಗ್ಗೆ ಅವರ ಮಗ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಾಲ್ಕು ತಂಡಗಳನ್ನು ರಚಿಸಿ ಹುಡುಕಾಟ ನಡೆಸಿದ್ದೇವೆ. ಸದ್ಯ ಅವರು ಬಳಸುತ್ತಿದ್ದ ಬ್ರೀಜಾ ಕಾರು ಚಾಮರಾಜನಗರದಲ್ಲಿ ಪತ್ತೆಯಾಗಿದೆ. ತನಿಖೆ ಮುಂದುವರಿದಿದೆ ಎಂದು ರಾಮನಗರ ಎಸ್​ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಾಜಿ ಸಚಿವ ಸಿ ಪಿ ಯೋಗೇಶ್ವರ್​ ಬಾಮೈದುನ ನಾಪತ್ತೆ

ಬಾವನ ಕಾರು ಪತ್ತೆಯಾದ ಸ್ಥಳಕ್ಕೆ ಸಿಪಿವೈ ಭೇಟಿ; ಗ್ಲಾಸ್ ಚೂರು, ರಕ್ತದ ಕಲೆಗಳು ಪತ್ತೆ: ಮಹದೇವಯ್ಯ ಕಾರು ಪತ್ತೆಯಾದ ಮಾಹಿತಿ ತಿಳಿಯುತ್ತಿದ್ದಂತೆ ಹನೂರು ತಾಲೂಕಿನ ರಾಮಪುರಕ್ಕೆ ಸಿ‌.ಪಿ.ಯೋಗೇಶ್ವರ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಚನ್ನಪಟ್ಟಣ ಪೊಲೀಸರು, ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಕಾರಿನ ಗಾಜು ಒಡೆದಿದ್ದು ರಕ್ತದ ಕಲೆಗಳು ಕೂಡ ಪತ್ತೆಯಾಗಿದೆ.

ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದ ತೋಟದ ಮನೆಯಿಂದ ಮಹದೇವಯ್ಯ 3 ದಿನಗಳ ಹಿಂದೆ ಕಾಣೆಯಾಗಿದ್ದರು. ನೈಟ್ ಬೀಟ್ ಪೊಲೀಸರು ಕಾರನ್ನು ಪತ್ತೆ ಮಾಡಿದ್ದಾರೆ. ಕಾರು ನಿನ್ನೆಯಿಂದ ಇದೇ ಜಾಗದಲ್ಲಿ ಇದೆ ಎಂದು ಇಲ್ಲಿನ ಸ್ಥಳೀಯರು ಮಾಹಿತಿ ನೀಡಿದ ಆಧಾರದಲ್ಲಿ ಪರಿಶೀಲನೆ ನಡೆಸಿದಾಗ ಮಹದೇವಯ್ಯ ಅವರಿಗೆ ಸೇರಿದ ಕಾರು ಎಂಬುದು ಗೊತ್ತಾಗಿದೆ.

Last Updated : Dec 4, 2023, 10:27 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.