ETV Bharat / state

ಪೊಕ್ಸೊ ಪ್ರಕರಣದ ಆರೋಪಿ, ಸಂತ್ರಸ್ತೆಗೆ ಕೊರೊನಾ; ಬೇಗೂರು ಠಾಣೆ ಪೊಲೀಸರಿಗೆ ನಡುಕ

author img

By

Published : May 27, 2021, 11:13 AM IST

Updated : May 27, 2021, 12:28 PM IST

ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ (POCSO) ಪ್ರಕರಣದ ಆರೋಪಿ ಮತ್ತು ಸಂತ್ರಸ್ತೆಯನ್ನು ಮೈಸೂರಿನಿಂದ ಕರೆತಂದು ಬೇಗೂರು ಪೊಲೀಸ್ ಠಾಣೆಯಲ್ಲಿರಿಸಿದ್ದರು‌‌. ಕೋವಿಡ್​ ಪರೀಕ್ಷೆಯಲ್ಲಿ ಇಬ್ಬರಿಗೂ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಪೊಲೀಸರು ಮತ್ತು ಠಾಣಾ ಸಿಬ್ಬಂದಿಗೆ ಕೊರೊನಾ ಭೀತಿ ಎದುರಾಗಿದೆ.

corona
ಕೊರೊನಾ

ಚಾಮರಾಜನಗರ: ಪೊಕ್ಸೊ ಪ್ರಕರಣದಡಿ ಕರೆತಂದಿದ್ದ ಸಂತ್ರಸ್ತೆ ಮತ್ತು ಆರೋಪಿ ಇಬ್ಬರಿಗೂ ಕೊರೊನಾ ವೈರಸ್‌ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದ ಪೊಲೀಸರಿಗೆ ಕೋವಿಡ್ ಭೀತಿ ಶುರುವಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಗುಂಡ್ಲುಪೇಟೆ ತಾಲೂಕಿನ ರಾಘವಾಪುರ ಗ್ರಾಮದ 16 ವರ್ಷದ ಬಾಲಕಿಯ ಅಪಹರಣ ಸಂಬಂಧ ಬಾಲಕಿ ಹಾಗೂ 35 ವರ್ಷದ ಯುವಕನನ್ನು ಮಂಗಳವಾರ ರಾತ್ರಿ ಮೈಸೂರಿನಿಂದ ಪೊಲೀಸರು ಕರೆದು ತಂದು ಬೇಗೂರು ಪೊಲೀಸ್ ಠಾಣೆಯಲ್ಲಿರಿಸಿದ್ದರು‌‌. ಬಂಧಿಸಲಾದ ಯುವಕ ಹಾಗೂ ಸಂತ್ರಸ್ತೆಯ ಹೇಳಿಕೆಯನ್ನು ಇಲ್ಲಿನ ಪೊಲೀಸ್ ಅಧಿಕಾರಿಗಳು ಬುಧವಾರ ಬೆಳಗ್ಗೆ ಪಡೆದಿದ್ದಾರೆ. ಇದಾದ ಬಳಿಕ ಕೋವಿಡ್​​ ಪರೀಕ್ಷೆ ಮಾಡಿಸಿದಾಗ ಇಬ್ಬರಿಗೂ ಪಾಸಿಟಿವ್ ಬಂದಿದ್ದು, ಸದ್ಯ ಪೊಲೀಸರು ಆತಂಕಕ್ಕೊಳಗಾಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಇಂದು 5,977 ಕೋವಿಡ್​​ ಕೇಸ್​​​ ಪತ್ತೆ

ಪೊಲೀಸರು ಕೋವಿಡ್​ ಪರೀಕ್ಷೆಗೆ ಗಂಟಲು ದ್ರವ ನೀಡಲು ಮುಂದಾಗಿದ್ದಾರೆ.

Last Updated : May 27, 2021, 12:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.