ETV Bharat / state

ಗಣಿಗಾರಿಕೆ ಸ್ಥಳಗಳಿಗೆ ಚಾಮರಾಜನಗರ ಡಿಸಿ, ಭೂ ವಿಜ್ಞಾನಿಗಳು ಭೇಟಿ, ತಪಾಸಣೆ

author img

By

Published : Mar 6, 2022, 3:14 PM IST

ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ವ್ಯಾಪ್ತಿಯ 10ಕ್ಕೂ ಹೆಚ್ಚು ಗಣಿಗಾರಿಕೆ ಸ್ಥಳಗಳಿಗೆ ಚಾಮರಾಜನಗರ ಡಿಸಿ, ಭೂ ವಿಜ್ಞಾನಿಗಳು ಭೇಟಿ ನೀಡಿದ್ದಾರೆ. ಸಂಬಂಧಪಟ್ಟ ಗಣಿ ಮಾಲೀಕರಿಂದ ದಾಖಲಾತಿ ತರಿಸಿಕೊಂಡು ಪರಿಶೀಲಿಸುತ್ತಿದ್ದಾರೆ.

Chamrajnagar DC, land scientists visit mining sites
ಗಣಿಗಾರಿಕೆ ಸ್ಥಳಗಳಿಗೆ ಚಾಮರಾಜನಗರ ಡಿಸಿ, ಭೂ ವಿಜ್ಞಾನಿಗಳು ಭೇಟಿ

ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ನಿರ್ದೇಶನದ ಮೇರೆಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಅಧಿಕಾರಿಗಳ ತಂಡ ಗುಂಡ್ಲುಪೇಟೆ ತಾಲೂಕಿನಲ್ಲಿ ನಡೆಯುತ್ತಿರುವ ಗಣಿಗಾರಿಕೆ ಸ್ಥಳಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

ಗಣಿಗಾರಿಕೆ ಸ್ಥಳಗಳಿಗೆ ಚಾಮರಾಜನಗರ ಡಿಸಿ, ಭೂ ವಿಜ್ಞಾನಿಗಳು ಭೇಟಿ

ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ವ್ಯಾಪ್ತಿಯ 10ಕ್ಕೂ ಹೆಚ್ಚು ಗಣಿಗಾರಿಕೆ ಸ್ಥಳಗಳಾದ ಕೂತನೂರು, ಮಲ್ಲಯ್ಯನಪುರ, ಬೆಳಚಲವಾಡಿ, ಹಸಗೂಲಿ, ಹಿರೀಕಾಟಿ, ತೊಂಡವಾಡಿ, ಅರೇಪುರ, ರಂಗೂಪುರ, ಬೆಟ್ಟದಮಾದಹಳ್ಳಿ ಸೇರಿದಂತೆ ಬೇಗೂರು ಹೋಬಳಿಯ ಹಲವು ಗಣಿಗಾರಿಕೆ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ,‌ ಸಂಬಂಧಪಟ್ಟ ಗಣಿ ಮಾಲೀಕರಿಂದ ದಾಖಲಾತಿ ತರಿಸಿಕೊಂಡು ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ: ಯುದ್ಧ ಪೀಡಿತ ಉಕ್ರೇನ್​ನಿಂದ 236 ಕನ್ನಡಿಗರು ಬರೋದು ಬಾಕಿ: ಮನೋಜ್ ರಾಜನ್

ಕ್ವಾರಿಯ ವಿಸ್ತೀರ್ಣ, ಗಣಿಗಾರಿಕೆ ನಡೆದಿರುವ ಪರಿಮಿತಿ, ಒತ್ತುವರಿ, ಕೊರೆದಿರುವ ಆಳ ಸೇರಿದಂತೆ ಇನ್ನಿತರ ಮಾಹಿತಿ ಪಡೆದುಕೊಂಡಿದ್ದಾರೆ.

ತಂಡದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಡಿಡಿ ನಾಗಭೂಷಣ್, ಉಪ ವಿಭಾಗ ಅಧಿಕಾರಿ ಗಿರೀಶ್, ಡಿವೈಎಸ್​​ಪಿ ಪ್ರಿಯದರ್ಶಿಣಿ ಸಾಣೆಕೊಪ್ಪ, ತಹಶೀಲ್ದಾರ್ ರವಿಶಂಕರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದಾರೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.