ETV Bharat / state

ಚಾಮರಾಜನಗರ - ನನ್ನ ಪರವಾಗಿ ನಾನೇ ಮತ ಹಾಕಿದೆ: ಸಂತಸ ವ್ಯಕ್ತಪಡಿಸಿದ ಸಚಿವ ಸೋಮಣ್ಣ

author img

By

Published : May 10, 2023, 10:59 AM IST

Updated : May 10, 2023, 12:29 PM IST

ವರುಣಾ ಕ್ಷೇತ್ರ ಮತ್ತು ಚಾಮರಾಜನಗರ ಕ್ಷೇತ್ರ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಚಾಮರಾಜನಗರದ ಪೇಟೆ ಪ್ರೈಮರಿ ಶಾಲೆಯಲ್ಲಿ ಮತ ಚಲಾಯಿಸಿದರು.

somanna
ಸಚಿವ ಸೋಮಣ್ಣ ದಂಪತಿಯಿಂದ ಚಾಮರಾಜನಗರದಲ್ಲಿ ಮತದಾನ

ಮತದಾನ ಮಾಡಿ ಸಂತಸ ವ್ಯಕ್ತಪಡಿಸಿದ ವಿ.ಸೋಮಣ್ಣ

ಚಾಮರಾಜನಗರ: ಚಾಮರಾಜನಗರದ ಪೇಟೆ ಪ್ರೈಮರಿ ಶಾಲೆಯಲ್ಲಿ ಪತ್ನಿ ಶೈಲಜಾ ಜೊತೆ ಆಗಮಿಸಿ ಬಿಜೆಪಿ ಅಭ್ಯರ್ಥಿ ಸೋಮಣ್ಣ ಮತ ಚಲಾಯಿಸಿದರು. ಬಳಿಕ, ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಇಷ್ಟು ದಿನ ನಾನು ನಿಲ್ಲುತ್ತಿದ್ದು ಒಂದು ಕ್ಷೇತ್ರ, ವಿಳಾಸ ಬೇರೆ ಕ್ಷೇತ್ರವಾಗಿತ್ತು. ಆದರೆ, ಈ ಬಾರಿ ನನ್ನ ಪರವಾಗಿ ನಾನೇ ಮತ ಚಲಾಯಿಸಿಕೊಂಡಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.

ಚಾಮರಾಜನಗರ ಜನರ ಮುಗ್ಧತೆಯೇ ಇಲ್ಲಿನ ಅಭಿವೃದ್ಧಿಗೆ ಕಂಟಕವಾಗಿದೆ, ಮತದಾರ ಪ್ರಭುಗಳು ಇಂದು ಸಂಜೆಯೊಳಗೆ ಎಲ್ಲವನ್ನೂ ನಿರ್ಧಾರ ಮಾಡುತ್ತಾರೆ, ಚಾಮುಂಡೇಶ್ವರಿ, ಮಲೆ ಮಹದೇಶ್ವರ ಏನು ಮಾಡುತ್ತಾನೋ ಗೊತ್ತಿಲ್ಲ ಎಂದರು. ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆಯಾಗಿದ್ದು, ಎರಡು ಕ್ಷೇತ್ರಗಳಲ್ಲಿ ಗೆಲ್ಲುವ ನಂಬಿಕೆ ಇದೆ. ಚಾಮರಾಜನಗರದಲ್ಲಿ ಮಧ್ಯಾಹ್ನ ತನಕ ಇದ್ದು ಬಳಿಕ ವರುಣಾಗೆ ತೆರಳಿ ಮತದಾನ ವೀಕ್ಷಿಸುತ್ತೇನೆ ಎಂದು ಸೋಮಣ್ಣ ಹೇಳಿದರು.

ಶಾಸಕರ ಮತ ಚಲಾವಣೆ: ಹನೂರು ಕ್ಷೇತ್ರದ ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ತೆರಯಲಾದ ಮತಗಟ್ಟೆ 40 ರಲ್ಲಿ ಹನೂರು ಶಾಸಕ ಹಾಗೂ ಅಭ್ಯರ್ಥಿ ಆರ್.ನರೇಂದ್ರ ರಾಜೂಗೌಡ ಕುಟುಂಬ ಸಮೇತ ಆಗಮಿಸಿ ಮತಚಲಾಯಿಸಿದರು.
ಪತ್ನಿ ಆಶಾ, ಪುತ್ರಿಯರಾದ ಅಮಿತಾ, ನಿಖಿತಾ ಪುತ್ರ ನವನೀತ್ ಗೌಡ ನರೇಂದ್ರಗೆ ಸಾಥ್ ನೀಡಿದರು.

ಕೊಳ್ಳೆಗಾಲದ ಬಿಜೆಪಿ ಅಭ್ಯರ್ಥಿ ಶಾಸಕ ಎನ್. ಮಹೇಶ್ ಅವರು ಪುತ್ರ ಅರ್ಜುನ್ ಜೊತೆಗೂಡಿ ಕೊಳ್ಳೆಗಾಲ ಪಟ್ಟಣದ ಐಎಸ್ಸಿ ಶಾಲೆಯಮತಗಟ್ಟೆ 121 ರಲ್ಲಿ ಮತ ಚಲಾವಣೆ ಮಾಡಿದರು. ಮತದಾನಕ್ಕೂ ಮುನ್ನ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ವರುಣಾ ಕ್ಷೇತ್ರದಲ್ಲಿ ವಿ ಸೋಮಣ್ಣ, ಮಾಜಿ ಸಿಎಂ ಹಾಗೂ ಕಾಂಗ್ರೆಸ್ ವರಿಷ್ಠ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡಿದ್ದಾರೆ. ಮತದಾರರ ಮನ ಗೆಲ್ಲಲು ಸೋಮಣ್ಣ ಎಲ್ಲ ಕಸರತ್ತು ನಡೆಸಿದ್ದಾರೆ. ಅತಿರಥ- ಮಹಾರಥ ನಾಯಕರು ಸೋಮಣ್ಣ ಪರ ಪ್ರಚಾರ ನಡೆಸಿ ಹೋಗಿದ್ದಾರೆ. ಇಂದು ಮತದಾರ ಇಬ್ಬರ ಹಣಬರಹ ಬರೆಯುತ್ತಿದ್ದಾರೆ.

ಶನಿವಾರ ಅಂತಿಮ ಫಲಿತಾಂಶ ಹೊರ ಬೀಳಲಿದ್ದು, ಪರೀಕ್ಷೆ ಪಾಸ್​​​​ ಅಥವಾ ನಪಾಸೋ ಎಂಬುದು ಅಂದೇ ಗೊತ್ತಾಗಲಿದೆ.

ಇದನ್ನೂ ಓದಿ: ವೋಟ್‌ ಹಾಕಿದ ಕನ್ನಡದ ನಟ-ನಟಿಯರು ಯಾರು? ಏನಂದ್ರು?

Last Updated : May 10, 2023, 12:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.