ETV Bharat / state

ಬೈಕ್​ಗೆ ಲಾರಿ ಡಿಕ್ಕಿ: ಬಂಡೀಪುರ ಅರಣ್ಯ ಇಲಾಖೆ ವಾಟರ್​ ಮನ್ ಸ್ಥಳದಲ್ಲೇ ಸಾವು

author img

By

Published : Jun 12, 2020, 10:21 PM IST

ತಮಿಳುನಾಡಿನಿಂದ ಬರುತ್ತಿದ್ದ ಸಿಮೆಂಟ್ ತುಂಬಿದ ಲಾರಿ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಬಂಡೀಪುರ ಅರಣ್ಯ ಇಲಾಖೆಯಲ್ಲಿ ಚಾಲಕ ಕಮ್​ ವಾಟರ್ ಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರೆಹಮತ್ ಉಲ್ಲಾ ಎಂಬುವರು ಸಾವಿಗೀಡಾಗಿದ್ದಾರೆ.

accident between a lorry and a bike
ಬೈಕ್​ಗೆ ಲಾರಿ ಡಿಕ್ಕಿ:

ಚಾಮರಾಜನಗರ: ಬಂಡೀಪುರ ಅರಣ್ಯ ಇಲಾಖೆ ವಾಟರ್​ ಮನ್​ಗೆ ಲಾರಿಯೊಂದು ಗುದ್ದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ನಡೆದಿದೆ.

ಬಂಡೀಪುರ ಅರಣ್ಯ ಇಲಾಖೆಯಲ್ಲಿ ಚಾಲಕ ಕಮ್​ ವಾಟರ್ ಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರೆಹಮತ್ ಉಲ್ಲಾ (35) ಮೃತಪಟ್ಟವರು. ತಮಿಳುನಾಡಿನಿಂದ ಬರುತ್ತಿದ್ದ ಸಿಮೆಂಟ್ ತುಂಬಿದ ಲಾರಿ ಎದುರಿನಿಂದ ಬೈಕ್​ನಲ್ಲಿ ಬರುತ್ತಿದ್ದ ರೆಹಮತ್​ಗೆ ಗುದ್ದಿ 200 ಮೀ.ನಷ್ಟು ದೂರ ಎಳೆದೊಯ್ದಿದೆ ಎನ್ನಲಾಗಿದೆ.

ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಿಎಫ್​ಒ ಬಾಲಚಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತನ ಕುಟುಂಬಕ್ಕೆ ಪರಿಹಾರ, ನೌಕರಿ ನೀಡುವ ಕುರಿತು ಇನ್ನೂ ನಿರ್ಧರಿಸಿಲ್ಲ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.