ETV Bharat / state

ಚುಚ್ಚುಮದ್ದು ನೀಡಿದ ಬಳಿಕ ಶಿಶು ಸಾವು ಆರೋಪ: ರಸ್ತೆಯಲ್ಲಿ ಶವವಿಟ್ಟು ಕುಟುಂಬಸ್ಥರ ಪ್ರತಿಭಟನೆ

author img

By

Published : Nov 23, 2022, 6:10 PM IST

9 ತಿಂಗಳ ಶಿಶುವಿಗೆ ಜ್ವರ ಕೆಮ್ಮು ಕಾಣಿಸಕೊಂಡ ಹಿನ್ನೆಲೆ ಜಿಲ್ಲಾಸ್ಪತ್ರೆಗೆ ಕರೆತರಾಲಾಗಿದ್ದು, ಮಗುವಿಗೆ ದಾದಿಯರು ಚುಚ್ಚುಮದ್ದನ್ನು ನೀಡಿದ್ದಾರೆ. ಇದರಿಂದ ತೀವ್ರ ಅಸ್ವಸ್ಥಗೊಂಡು ಮಗು ಸಾವನ್ನಪ್ಪಿದೆ ಎಂದು ಆರೋಪಿಸಲಾಗಿದ್ದು, ಜಿಲ್ಲಾಸ್ಪತ್ರೆ ವಿರುದ್ಧ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.

Kn_cnr_
ರಸ್ತೆಯಲ್ಲಿ ಶವವಿಟ್ಟು ಕುಟುಂಬಸ್ಥರ ಪ್ರತಿಭಟನೆ

ಚಾಮರಾಜನಗರ: ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ದಾದಿಯರು ಕೊಟ್ಟ ಚುಚ್ಚುಮದ್ದಿನ ಬಳಿಕ 9 ತಿಂಗಳ ಶಿಶು ತೀವ್ರ ಅಸ್ವಸ್ಥವಾಗಿ ಮೃತಪಟ್ಟಿದೆ ಎಂದು ಆರೋಪಿಸಿ ಕುಟುಂಬಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.

ಚಾಮರಾಜನಗರ ತಾಲೂಕಿನ ಮುರುಟಿಪಾಳ್ಯ ಗ್ರಾಮದ ಶಿವರುದ್ರಮ್ಮ, ಅಶ್ವಥ್ ದಂಪತಿಯ 9 ತಿಂಗಳ ಶಿಶು ಮೃತಪಟ್ಟಿದೆ. ಜ್ವರ, ಕೆಮ್ಮು ಇದ್ದ ಕಾರಣ ಇಂದು ಬೆಳಗ್ಗೆ ಮಗುವನ್ನು ಆಸ್ಪತ್ರೆಗೆ ಕರೆತಂದ ವೇಳೆ ದಾದಿಯರು ವಾರ್ಡಿಗೆ ಕರೆದೊಯ್ದು ಎರಡು-ಮೂರು ಚುಚ್ಚುಮದ್ದು ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಬಳಿಕ, ಶಿಶು ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಮೈಸೂರಿಗೆ ಕರೆದೊಯ್ಯುವಂತೆ ಪೋಷಕರಿಗೆ ತಿಳಿಸಿದ್ದಾರೆ. ಬಳಿಕ ಆಂಬ್ಯುಲೆನ್ಸ್​ಗೆ ಸಾಗಿಸುವಾಗ ಮಗು ಮೃತಪಟ್ಟಿದೆಯಂತೆ.

ಮಗುವಿಗೆ ಜೀವ ಇದೆ ಒಳಗಡೆ ಕರೆತನ್ನಿ ಎಂದು ಮಗುವನ್ನು ಕರೆದೊಯ್ದು, ಪೋಷಕರಿಂದ ಮಗುವಿಗೆ ಸಂಬಂಧಿಸಿದ ದಾಖಲಾತಿಗಳನ್ನು ಪಡೆದು ಮಗು ಮೃತಪಟ್ಟಿದೆ ಎಂದಿದ್ದಾರೆ ಎಂದು ಶಿಶುವಿನ ಅಜ್ಜ ತಿಬ್ಬೇಗೌಡ ಆರೋಪಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಶಿಶುವಿನ ಶವದೊಟ್ಟಿಗೆ ರಸ್ತೆ ತಡೆದು ಪ್ರತಿಭಟನೆ ನಡೆಸಿ ಜಿಲ್ಲಾಸ್ಪತ್ರೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಕಾರು ತೊಳೆಯಲೆಂದು ಕಾಲುವೆಗೆ ಹೋಗಿದ್ದ ಇಬ್ಬರು ಯುವಕರು ನಾಪತ್ತೆ.. ನೀರು ಪಾಲಾಗಿರುವ ಶಂಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.