ETV Bharat / state

ಚಾಮರಾಜನಗರದಲ್ಲಿ ಮಹಾಮಾರಿಗೆ 9 ಬಲಿ.. 420 ಸೋಂಕು ಪ್ರಕರಣಗಳು ಪತ್ತೆ

author img

By

Published : May 1, 2021, 6:40 AM IST

ಶುಕ್ರವಾರ ಚಾಮರಾಜನಗರದಲ್ಲೂ ಕೊರೊನಾ ಆರ್ಭಟಿಸಿದೆ. ಜಿಲ್ಲೆಯಲ್ಲಿ ಬರೋಬ್ಬರಿ 420 ಕೋವಿಡ್​ ಪ್ರಕರಣಗಳು ಪತ್ತೆಯಾಗಿದ್ದರೆ, 9 ಮಂದಿ ಮೃತಪಟ್ಟಿದ್ದಾರೆ.

chamrajnagara covid cases
ಚಾಮರಾಜನಗರ ಕೋವಿಡ್​ ಪ್ರಕರಣಗಳು

ಚಾಮರಾಜನಗರ: ಜಿಲ್ಲೆಯಲ್ಲೂ ಕೋವಿಡ್​​ ಎರಡನೇ ಅಲೆಯ ಅಬ್ಬರ ಜೋರಾಗಿದೆ. ಶುಕ್ರವಾರ ಜಿಲ್ಲೆಯಲ್ಲಿ ಬರೋಬ್ಬರಿ 420 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ‌ ಸಂಖ್ಯೆ 2,312ಕ್ಕೆ ಏರಿಕೆಯಾಗಿದೆ.

238 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 53 ಮಂದಿ ಐಸಿಯುನಲ್ಲಿದ್ದು, 1,643 ಮಂದಿ ಹೋಂ ಐಸೋಲೇಷನ್​​ನಲ್ಲಿದ್ದಾರೆ. 5,040 ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.

9 ಮಂದಿ ಸಾವು:

ಕೊರೊನಾ ಸೋಂಕಿತರ ಸಾವಿನ ಪ್ರಕರಣ ಏರುತ್ತಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ. 9 ಮಂದಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 147ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: ತಾವರೆಕೆರೆ ಬಳಿ ಸ್ಮಶಾನ ನಿರ್ಮಾಣ: ಮೊದಲ ದಿನ 40 ಶವಗಳ ದಹನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.