ETV Bharat / state

8 ಕಿ.ಮೀ. ನಡೆದು ಸರ್ಕಾರಿ ಶಾಲೆಯಲ್ಲಿ ಓದಿ ಜಿಲ್ಲೆಗೆ 3ನೇ ಸ್ಥಾನ ಪಡೆದ ಬಾಲೆ... ಸಚಿವರಿಂದ ಪ್ರೋತ್ಸಾಹ ಧನ!

author img

By

Published : Aug 14, 2020, 2:38 AM IST

ಅವಳೇನು ಓದಿ ಡಾಕ್ಟರ್​ ಆಗುತ್ತಾಳಾ ಎಂದು ಗೇಲಿ ಮಾಡಿ ನಗುತ್ತಿದ್ದ ಜನರು ಇದೀಗ ಆ ವಿದ್ಯಾರ್ಥಿನಿಯ ಸಾಧನೆ ಕೊಂಡಾಡುತ್ತಿದ್ದಾರೆ.

Bidar Student aruna
Bidar Student aruna

ಬೀದರ್: ಬಡತನದಲ್ಲೇ ಬೆಳೆದ ಬಾಲಕಿ ತಾಂಡಾದಿಂದ 8 ಕಿ.ಮೀಟರ್ ದೂರದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ, ಎಸ್ಎಸ್ಎಲ್​​ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಮೂರನೇ ಸ್ಥಾನ ಶೇ.99.04 ಅಂಕ ಪಡೆದು ಸಾಧನೆ ಮಾಡಿದ್ದಾಳೆ. ಇದೀಗ ಅಲ್ಲಿಗೆ ತೆರಳಿ ಸಚಿವ ಪ್ರಭು ಚವ್ಹಾಣ ಸನ್ಮಾನ ಮಾಡಿದ್ದಾರೆ.

ಇದನ್ನು ಓದಿ: 8 ಕಿ.ಮೀ. ನಡೆದು ಸರ್ಕಾರಿ ಶಾಲೆಯಲ್ಲಿ ಓದಿದ ಬಾಲೆ: ಜಿಲ್ಲೆಗೆ 3ನೇ ಸ್ಥಾನ ಪಡೆದ ವಿದ್ಯಾರ್ಥಿನಿ

ಜಿಲ್ಲೆಯ ಔರಾದ್ ತಾಲೂಕಿನ ಖೀಮಾ ನಾಯಕ್ ತಾಂಡಾದ ಅರುಣಾ ಎಂಬ ವಿದ್ಯಾರ್ಥಿನಿ ಔರಾದ್ ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಎಸ್​ಎಸ್​​​ಎಲ್​ಸಿ​ ಯಲ್ಲಿ ಜಿಲ್ಲೆಗೆ 3ನೇ ಸ್ಥಾನ ಪಡೆಯುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ. 8 ಕಿಲೋ ಮಿಟರ್ ನಡೆದುಕೊಂಡು ಬಂದು ಜಿಲ್ಲೆಗೆ ತೃತೀಯ ಸ್ಥಾನ ಪಡೆದು ಸಾಧನೆ ಮಾಡಿರುವ ವಿಧ್ಯಾರ್ಥಿನಿ ಅರುಣಾ ಸಂಜು ರಾಠೋಡ್​​ಗೆ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಇದೀಗ ಪ್ರೋತ್ಸಾಹಿಸಿದ್ದಾರೆ.

ಸಚಿವರಿಂದ ಪ್ರೋತ್ಸಾಹ ಧನ

ವಿದ್ಯಾರ್ಥಿನಿ ಮನೆ ಬಾಗಿಲಿಗೆ ಹೊಗಿ ಸನ್ಮಾನ ಮಾಡಿರುವ ಸಚಿವರು ಸ್ವಂತ ಶಾಸಕರ ವೇತನದಿಂದ ಸಾಧನೆ ಮಾಡಿದ ವಿಧ್ಯಾರ್ಥಿನಿಗೆ 16,000 ರೂಪಾಯಿ ನಗದು ಪ್ರೋತ್ಸಾಹ ನೀಡಿದ್ದಾರೆ. ಇದರ ಜತೆಗೆ ಮುಂದಿನ ವ್ಯಾಸಂಗಕ್ಕೆ ಅಗತ್ಯ ಸಹಕಾರ ಮಾಡುವುದಾಗಿ ಭರವಸೆ ನೀಡಿದ್ದಾರೆ. ವಿಧ್ಯಾರ್ಥಿನಿ ಸಾಧನೆ ಕುರಿತು 'ಈಟಿವಿ ಭಾರತ' 8 ಕಿ.ಮೀ. ನಡೆದು ಸರ್ಕಾರಿ ಶಾಲೆಯಲ್ಲಿ ಓದಿದ ಬಾಲೆ: ಜಿಲ್ಲೆಗೆ 3ನೇ ಸ್ಥಾನ ಪಡೆದ ವಿದ್ಯಾರ್ಥಿನಿ ಎಂಬ ಹೆಸರಿನಲ್ಲಿ ವಿಸ್ತೃತ ವರದಿ ಪ್ರಸಾರ ಮಾಡಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.