ETV Bharat / state

ಬೀದರ್​​​ ಜಿಲ್ಲೆಯಲ್ಲಿ ಬಿರುಗಾಳಿ ಮಿಶ್ರಿತ ಭಾರಿ ಮಳೆ: ಧರಾಶಾಹಿಯಾದ ಮರ, ವಿದ್ಯುತ್ ಕಂಬಗಳು

author img

By

Published : Jun 1, 2021, 6:59 AM IST

ಬೀದರ್ ಜಿಲ್ಲೆಯಲ್ಲಿ ಒಂದು ಗಂಟೆ ನಿರಂತರವಾಗಿ ಸುರಿದ ಮಳೆಗೆ ಜಿಲ್ಲೆಯ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇದ್ರ ಜೊತೆಗೆ ಜೋರಾಗಿ ಗಾಳಿ ಬೀಸಿದ್ದು ಮನೆಗಳ ಮೇಲ್ಛಾವಣಿ ಹಾರಿ ಹೋಗಿದೆ.

Storm mixed rain in Bidar district
ಬಿದರ್​​​ ಜಿಲ್ಲೆಯಲ್ಲಿ ಬಿರುಗಾಳಿ ಮಿಶ್ರಿತ ಭಾರಿ ಮಳೆ

ಬೀದರ್: ಜಿಲ್ಲೆಯ ಬಹುತೇಕ ಭಾಗದಲ್ಲಿ ಬಿರುಗಾಳಿ ಮಿಶ್ರಿತ ಜಡಿ ಮಳೆಯಾಗಿದೆ. ಪರಿಣಾಮ ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು ಅವಾಂತರ ಸೃಷ್ಟಿಸಿದೆ.

ಬೀದರ್​​​ ಜಿಲ್ಲೆಯಲ್ಲಿ ಮಳೆ

ಜಿಲ್ಲೆಯ ಔರಾದ್ ತಾಲೂಕಿನ ಯನಗುಂದಾ ಗ್ರಾಮದಲ್ಲಿ ಸಂಜೆ ಸುರಿದ ಬಿರುಗಾಳಿ ಮಿಶ್ರಿತ ಮಳೆಗೆ, ಗ್ರಾಮದಲ್ಲಿ ಹಲವು ಮರಗಳು ಉರುಳಿವೆ. ಇದೇ ವೇಳೆ, ಗ್ರಾಮದ ಹೊರ ವಲಯದಲ್ಲಿದ್ದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಜೋಡಿ ಕಂಬಗಳು ನೆಲಕ್ಕೆ ಅಪ್ಪಳಿಸಿವೆ.

ಔರಾದ್ ಚಿಂತಾಕಿ ಹೆದ್ದಾರಿಯ ರಸ್ತೆ ಮೇಲೆ ಮರ ಬಿದ್ದಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ಅಂದಾಜು ಒಂದು ಗಂಟೆ ಸುರಿದ ಮಳೆ ಹಾಗು ಗಾಳಿಗೆ ಹಲವು ಮನೆಗಳ ಮೇಲ್ಛಾವಣಿ ಹಾರಿ ಹೋಗಿದೆ.

ಮುಂಗಾರು ಹಂಗಾಮಿನ ಆರಂಭದ ದಿನಗಳಲ್ಲೇ ಸಕಾಲಕ್ಕೆ ಮಳೆಯಾಗಿದ್ದು, ರೈತ ಸಮುದಾಯದಲ್ಲಿ ಹರ್ಷ ಮೂಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.