ETV Bharat / state

ಪ್ರೀತಿಸಿ ವಿರೋಧದ ನಡುವೆಯೂ ಮದುವೆಯಾದ... ವರ್ಷದೊಳಗೆ ಆಕೆಯನ್ನೇ ಮುಗಿಸಿದ!

author img

By

Published : Dec 19, 2020, 10:44 PM IST

Updated : Dec 20, 2020, 9:00 AM IST

ಕುಟುಂಬಸ್ಥರ ವಿರೋಧದ ನಡುವೆಯೂ ಪ್ರೀತಿಸಿ ಹುಡುಗಿಯನ್ನು ಮನೆಯಿಂದ ಓಡಿಸಿಕೊಂಡು ಹೋಗಿ ಮದುವೆಯಾಗಿ ವರ್ಷದೊಳಗೆ ಹೆಂಡ್ತಿಯನ್ನು ಕೊಲೆ ಮಾಡಿರುವ ಘಟನೆ ಬೀದರ್​ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ನಡೆದಿದೆ.

Husband killed to wife, Husband killed to wife in Basavakalyan, Basavakalyan crime, Basavakalyan crime news, ಪತ್ನಿ ಕೊಲೆ ಮಾಡಿದ ಪತಿ, ಬಸವಕಲ್ಯಾಣದಲ್ಲಿ ಪತ್ನಿ ಕೊಲೆ ಮಾಡಿದ ಪತಿ, ಬಸವಕಲ್ಯಾಣ ಅಪರಾಧ, ಬಸವಕಲ್ಯಾಣ ಅಪರಾಧ ಸುದ್ದಿ,
ಮೃತ ನಾಗಮ್ಮನ ಮುಂದೆ ರೋದಿಸುತ್ತಿರುವ ಕುಟುಂಬಸ್ಥರು

ಬಸವಕಲ್ಯಾಣ: ಪ್ರೀತಿಸಿ ಮದುವೆಯಾದ ವರ್ಷ ಕಳೆಯುವುದರಲ್ಲಿಯೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ಬೇಡರವಾಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಾಗಮ್ಮ ಬಾಜೀರಾವ್​ ಪಾಟೀಲ್ (22) ಕೊಲೆಯಾದ ಯುವತಿ. 10 ತಿಂಗಳ ಹಿಂದೆ ಅಂದ್ರೆ ಫೆಬ್ರುವರಿ ತಿಂಗಳಲ್ಲಿ ಅದೇ ಗ್ರಾಮದಲ್ಲಿರುವ ತಮ್ಮ ಸಂಬಂಧಿಕಳಾದ ನಾಗಮ್ಮಳನ್ನು ಪ್ರೀತಿಸಿದ ಬಾಜೀರಾವ್​, ಆಕೆಯನ್ನು ಮನೆಯಿಂದ ಓಡಿಸಿಕೊಂಡು ಹೋಗಿ ಕೋರ್ಟ್​ನಲ್ಲಿ ಮದುವೆಯಾಗಿದ್ದನಂತೆ.

ಮೃತದೇಹದ ಮುಂದೆ ರೋದಿಸುತ್ತಿರುವ ಕುಟುಂಬಸ್ಥರು

ಆರಂಭದಲ್ಲಿ ಅನ್ಯೋನ್ಯವಾಗಿದ್ದ ಈ ಜೋಡಿ ನಂತರದ ದಿನಗಳಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಆಗಾಗ ಜಗಳವಾಡುತಿದ್ದರು. ಶನಿವಾರ ಬೆಳಗ್ಗೆ ಮನೆಯಲ್ಲಿ ನಡೆದ ಜಗಳದಲ್ಲಿ ಕಟ್ಟಿಗೆಯಿಂದ ನಾಗಮ್ಮಳಿಗೆ ಪತಿ ಮನಬಂದಂತೆ ಥಳಿಸಿದ್ದಾನೆ. ಥಳಿತಕ್ಕೊಳಗಾದ ನಾಗಮ್ಮ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಆಕೆ ಸಾವನ್ನಪ್ಪಿದ್ದಾಳೆ.

ಈ ಕುರಿತು ಯುವತಿ ತಂದೆ ನೀಡಿದ ದೂರಿನ ಮೇರೆಗೆ ಇಲ್ಲಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಬಾಜೀರಾವ್​ ಸೇರಿದಂತೆ ಆತನ ತಂದೆ ಮತ್ತು ತಾಯಿಯ ವಿರುದ್ಧ ಪ್ರಕರಣ ದಾಖಲಾಗಿದೆ.

Husband killed to wife, Husband killed to wife in Basavakalyan, Basavakalyan crime, Basavakalyan crime news, ಪತ್ನಿ ಕೊಲೆ ಮಾಡಿದ ಪತಿ, ಬಸವಕಲ್ಯಾಣದಲ್ಲಿ ಪತ್ನಿ ಕೊಲೆ ಮಾಡಿದ ಪತಿ, ಬಸವಕಲ್ಯಾಣ ಅಪರಾಧ, ಬಸವಕಲ್ಯಾಣ ಅಪರಾಧ ಸುದ್ದಿ,
ಬಾಜೀರಾವ್​ ಪಾಟೀಲ್ ಮತ್ತು ನಾಗಮ್ಮ ಬಾಜೀರಾವ್​ ಪಾಟೀಲ್ ದಂಪತಿ ಚಿತ್ರ

ಸುದ್ದಿ ತಿಳಿದ ಎಎಸ್ಪಿ ಗೋಪಾಲ್ ಬ್ಯಾಕೋಡ, ಡಿವೈಎಸ್ಪಿ ಸೋಮಲಿಂಗ ಕುಂಬಾರ, ತಹಶೀಲ್ದಾರ ಸಾವಿತ್ರಿ ಸಲಗರ್, ಸಿಪಿಐ ಮಹೇಶಗೌಡ ಪಾಟೀಲ್, ಪಿಎಸ್‌ಐ ವಸೀಮ್ ಪಟೇಲ್ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Last Updated : Dec 20, 2020, 9:00 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.