ETV Bharat / state

ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಯುವಕನ ಬರ್ಬರ ಹತ್ಯೆ!

author img

By

Published : Dec 29, 2020, 3:17 PM IST

ಯುವಕನೊಬ್ಬ ತನ್ನ ಸಹೋದರಿ ಮನೆಗೆ ಹೋಗಿ ಹಿಂತಿರುಗಿ ಬರುವಾಗ ಯಾರೋ ದುಷ್ಕರ್ಮಿಗಳು ಆತನಿಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ಘಟನೆ ಬೀದರ್​ನ ಕೋಟಗ್ಯಾಳ ಗ್ರಾಮದಲ್ಲಿ ನಡೆದಿದೆ.

Bidar
ಯುವಕನ ಬರ್ಬರ ಹತ್ಯೆ

ಬೀದರ್: ಯುವಕನೊಬ್ಬನನ್ನು ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಭೀಕರ ಘಟನೆ ಜಿಲ್ಲೆಯ ಕಮಲನಗರ ತಾಲೂಕಿನ ಕೋಟಗ್ಯಾಳ ಗ್ರಾಮದ ವ್ಯಾಪ್ತಿಯ ತೊಗರಿ ಗದ್ದೆಯೊಂದರಲ್ಲಿ ನಡೆದಿದೆ.

ಕೋಟಗ್ಯಾಳ ಗ್ರಾಮದ ಬಳಿ ಯುವಕನ ಹತ್ಯೆ

ಔರಾದ್ ತಾಲೂಕಿನ ನಾಗಮಾರಪಳ್ಳಿ ಗ್ರಾಮದ ಶಿವಕುಮಾರ್ ಹಾವಪ್ಪ(17) ಬರ್ಬರವಾಗಿ ಹತ್ಯೆಯಾದ ಯುವಕ. ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ದೇವಣಿ ಪಟ್ಟಣದಲ್ಲಿದ್ದ ಸಹೋದರಿ ಮನೆಯಿಂದ ಸ್ವಗ್ರಾಮ ನಾಗಮಾರಪಳ್ಳಿಗೆ ಹಿಂದುರುಗಿ ಬೈಕ್ ಮೇಲೆ ವಾಪಸ್​​​ ಆಗುವಾಗ ಕಮಲನಗರ ಸಮೀಪದ ಕೋಟಗ್ಯಾಳ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ತಡರಾತ್ರಿವರೆಗೆ ಮಗ ಮನೆಗೆ ಬಾರದಕ್ಕೆ ಅನುಮಾನಪಟ್ಟ ಕುಟುಂಬಸ್ಥರು ಶಿವಕುಮಾರ ಹುಡುಕಾಟಕ್ಕೆ ಮುಂದಾಗಿದ್ದು, ಈ ವೇಳೆ, ಬೈಕ್ ಪತ್ತೆಯಾಗಿದೆ. ಬಳಿಕ ಪೊಲೀಸರ ಸಹಕಾರ ಪಡೆದು ಹುಡುಕಿದಾಗ ಮೃತದೇಹ ಪತ್ತೆಯಾಗಿದೆ.

ಇದನ್ನೂ ಓದಿ: ವಿಜಯನಗರದಲ್ಲಿ ಸ್ನೇಹಿತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ

ನಮಗೆ ಇರೋನು ಒಬ್ಬನೆ ಮಗ. ನಮಗೆ ಯಾರೊಂದಿಗೆ ಜಗಳ ಇರಲಿಲ್ಲ. ಮಗ ಹೇಗೆ ಹೆಣವಾದ ಎಂದು ನಮಗೆ ತಿಳಿಯುತ್ತಿಲ್ಲ ಎಂದು ಮೃತನ ತಾಯಿ ಅರುಣಾಬಾಯಿ ಆಕ್ರಂದನ ಹೊರ ಹಾಕಿದ್ದಾರೆ. ಇನ್ನು ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ್, ಡಿವೈಎಸ್​ಪಿ ಡಾ. ದೇವರಾಜ್ ಬಿ ಅವರು ಭೇಟಿ ನೀಡಿದ್ದು, ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.