ETV Bharat / state

ಕೇಂದ್ರ, ರಾಜ್ಯದಲ್ಲಿ ಸರ್ವಾಧಿಕಾರಿ ಸರ್ಕಾರಳಿವೆ: ಉಗ್ರಪ್ಪ ವಾಗ್ದಾಳಿ

author img

By

Published : Feb 26, 2021, 8:44 PM IST

ಬಳ್ಳಾರಿಯನ್ನು ವಿಭಜನೆ ಮಾಡುವ ಮೂಲಕ ಎರಡು ಜಿಲ್ಲೆ ರಚಿಸಲಾಗಿದೆ. ಎರಡು ಜಿಲ್ಲೆ ಆದ ಕೂಡಲೇ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂದು ಮಾಜಿ ಸಂಸದ ವಿ‌.ಎಸ್.ಉಗ್ರಪ್ಪ ಹೇಳಿದ್ದಾರೆ.

vs-ugrappa
ವಿ‌.ಎಸ್.ಉಗ್ರಪ್ಪ

ಹೊಸಪೇಟೆ: ರಾಜ್ಯ ಮತ್ತು ಕೇಂದ್ರ ಸರ್ಕಾರ ಸುಳ್ಳಿನ ಸೌಧವನ್ನು‌ ನಿರ್ಮಾಣ ಮಾಡಿವೆ. ಈ ಎರಡು ಸರ್ಕಾರಗಳಲ್ಲಿ‌ ಸರ್ವಾಧಿಕಾರಿ ಪ್ರವೃತ್ತಿ ‌ಕಾಣುತ್ತಿದೆ ಎಂದು ಮಾಜಿ ಸಂಸದ ವಿ‌.ಎಸ್.ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.

ವಿ‌.ಎಸ್.ಉಗ್ರಪ್ಪ

ನಗರದ ಕಾಂಗ್ರೆಸ್ ಬ್ಲಾಕ್ ಕಚೇರಿಯಲ್ಲಿ ಮಾತನಾಡಿದ ಅವರು, ಮೋದಿ ಅವರು ಹೋರಾಟಗಾರರನ್ನ ಆಂದೋಲನಾ ಜೀವಿಗಳೆಂದು‌ ಮನ ಬಂದಂತೆ ಮಾತನಾಡುತ್ತಿದ್ದಾರೆ. ಇದೊಂದು ಹೊಸ ಪದವಾಗಿದೆ. ಹಿಟ್ಲರ್ ಕಾಲದಲ್ಲಿ ಗ್ಲೋಬಲ್ ಸ್ಪೀರಿಯಾ ಹೊಂದಿಕೊಳ್ಳಲಾಗಿತ್ತು. ತಾವು ಹೇಳುವುದನ್ನು ಸತ್ಯ ಎಂದು ಬಿಂಬಿಸುವ ಪ್ರವೃತ್ತಿಯನ್ನು‌ ಬೆಳೆಸಲಾಗುತ್ತಿದೆ. ಈ ರೀತಿಯಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎರಡು ಜಿಲ್ಲೆ ಆದ ಕೂಡಲೇ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಸಾಕಷ್ಟು ಬಡತನವಿದೆ. ಕುಡಿಯುವ ನೀರು‌ ಹಾಗೂ ಅನೇಕ ಸಮಸ್ಯೆಗಳಿವೆ. ಹಾಗಾಗಿ ರಾಜ್ಯ ಸರ್ಕಾರ ಮುಂಬರುವ ಬಜೆಟ್​ನಲ್ಲಿ ಎರಡು ಜಿಲ್ಲೆಗಳಿಗೆ 2500 ಕೋಟಿ ರೂ. ಅನುದಾನ ಒದಗಿಸಬೇಕು ಎಂದು ಆಗ್ರಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.