ETV Bharat / state

ವಿಜಯನಗರದಲ್ಲಿ ಮಳೆ ಆರ್ಭಟ: ಮರ ಬಿದ್ದು ಇಬ್ಬರು ಗಂಭೀರ, ಪಪ್ಪಾಯಿ ಬೆಳೆ ನಾಶ

author img

By

Published : May 11, 2022, 7:44 AM IST

Updated : May 11, 2022, 9:06 AM IST

ವಿಜಯನಗರ ಜಿಲ್ಲೆಯ ಹಲವೆಡೆ ಗಾಳಿ ಸಹಿತ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.

papaya crop destroyed due to heavy rain
ಭಾರಿ ಮಳೆಗೆ ಪಪ್ಪಾಯಿ ಬೆಳೆ ನಾಶವಾಗಿರುವುದು..

ವಿಜಯನಗರ: ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ನಿನ್ನೆ(ಮಂಗಳವಾರ) ಸಂಜೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ರಾಮೇಶ್ವರ ಬಂಡೆ ಗ್ರಾಮದಲ್ಲಿ ಮರ ಬಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ತೊಂಡಿಹಾಳೆಪ್ಪ ಹಾಗೂ ಸುದೀಪ್ ಎಂಬುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಹಾಗೂ ಬೈಕ್ ಮೇಲೆ ಮರ ಬಿದ್ದು ಅಂಬಿಗೇರ್ ಹಣಮಂತ ಎಂಬುವವರಿಗೆ ಸೇರಿದ ಟ್ರ್ಯಾಕ್ಟರ್ ಜಖಂಗೊಂಡಿದೆ.


ಬಳ್ಳಾರಿಯ ಗ್ರಾಮೀಣ ಪ್ರದೇಶದಲ್ಲೂ ಸಹ ಭಾರಿ ಮಳೆಯಾಗಿದೆ. ಕೆಲ ಗ್ರಾಮಗಳ ಮನೆಗಳಿಗೆ ನೀರು ನುಗ್ಗಿದ್ದು ಜನ ಪರದಾಡುತ್ತಿದ್ದಾರೆ. ಭತ್ತ, ಮಾವು ಹಾಗೂ ಪಪ್ಪಾಯ ಬೆಳೆ ನಾಶವಾಗಿದೆ. ಜೋರು ಮಳೆಯಿಂದ ತಾಲೂಕಿ‌ನ ಕಪ್ಪಗಲ್ ಗ್ರಾಮದ ಶ್ರೀ ಬಸವೇಶ್ವರ ಕ್ಯಾಂಪ್​​ನಲ್ಲಿ‌ ಸುಮಾರು 14 ಎಕರೆ ಪ್ರದೇಶದಲ್ಲಿ ಬೆಳೆದ ಪಪ್ಪಾಯಿ ಬೆಳೆ‌ ಸಂಪೂರ್ಣ ನೆಲಕಚ್ಚಿದೆ. ರೈತ ಸಿ.ಹೆಚ್.ಸುಬ್ರಮಣ್ಯೇಶ್ವರ ರಾವ್ ಅವರಿಗೆ ಸೇರಿದ ಜಮೀನಿನಲ್ಲಿ ಪಪ್ಪಾಯಿ ಬೆಳೆ ನೆಲಕ್ಕುರುಳಿ ಅಪಾರ ನಷ್ಟ ಉಂಟಾಗಿದೆ.

ಇದನ್ನೂ ಓದಿ: ಮುಂದಿನ 4 ದಿನ ಮುಂದುವರೆಯಲಿರುವ ವರ್ಷಧಾರೆ ; ಬೆಂಗಳೂರಿಗೆ ಯೆಲ್ಲೋ ಅಲರ್ಟ್!

Last Updated :May 11, 2022, 9:06 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.