ETV Bharat / state

ಸ್ವಹಿತಾಸಕ್ತಿಗಾಗಿ ಕೆಲ ರಾಜಕಾರಣಿಗಳು ದೇಶ ಲೂಟಿ ಮಾಡ್ತಿದ್ದಾರೆ: ಸಂತೋಷ್​ ಹೆಗ್ಡೆ

author img

By

Published : Oct 26, 2019, 1:36 PM IST

Updated : Oct 26, 2019, 3:33 PM IST

ರಾಜಕಾರಣದಲ್ಲಿ ಸ್ವ ಅಭಿವೃದ್ಧಿಯ ಭೂತ ಸೇರಿಕೊಂಡು ಈ ದೇಶದ ಆರ್ಥಿಕ ಸಂಪನ್ಮೂಲವನ್ನು ಲೂಟಿ ಮಾಡುತ್ತಿದೆ ಎಂದು ಸಂತೋಷ್​​ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.

ರಾಜಕಾರಣಿಗಳು ದೇಶವನ್ನು ಲೂಟಿ ಮಾಡುತ್ತಿದ್ದಾರೆ: ಸಂತೋಷ್​ ಹೆಗ್ಡೆ

ಬಳ್ಳಾರಿ: ಇಂದಿನ ರಾಜಕಾರಣಿಗಳಲ್ಲಿ ಸ್ವ ಅಭಿವೃದ್ಧಿಯ ದುರಾಸೆ ಹೆಚ್ಚಾಗಿದ್ದು, ಅದನ್ನು ಹೋಗಲಾಡಿಸುವ ಶಕ್ತಿ ಯುವ ಜನರಲ್ಲಿದೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್​ ಹೆಗ್ಡೆ ಹೇಳಿದ್ದಾರೆ.

ಸ್ವಹಿತಾಸಕ್ತಿಗಾಗಿ ಕೆಲ ರಾಜಕಾರಣಿಗಳು ದೇಶ ಲೂಟಿ ಮಾಡ್ತಿದ್ದಾರೆ: ಸಂತೋಷ್​ ಹೆಗ್ಡೆ

ನಗರದಲ್ಲಿ ನಡೆದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಹೆಸರಿನಡಿ ಸಾವಿರಾರು ಕೋಟಿ ರೂ.ಗಳ ಹಗರಣ ನಡೆಯುತ್ತಿದೆ. ಕೇವಲ ಪೇಪರ್​ಗಳಲ್ಲೇ ಅಭಿವೃದ್ಧಿಯಾಗಿಬಿಟ್ಟಿದೆ. ಆದರೆ, ಮೀಸಲಿಟ್ಟ ಅನುದಾನವನ್ನ ಕೊಳ್ಳೆ ಹೊಡೆಯಲಾಗುತ್ತೆ. ಅಂತಹ ಜನಪ್ರತಿನಿಧಿಗಳನ್ನ ಸೋಲಿಸುವಂತಹ ಕೆಲಸ ಆಗಬೇಕಿದೆ. 2017ರ ರಾಜ್ಯ ಬಜೆಟ್​​ನಲ್ಲಿ ಅಭಿವೃದ್ಧಿಗೋಸ್ಕರ ಸಾವಿರಾರು ಕೋಟಿ ರೂ. ಮೀಸಲಿರಿಸಲಾಗಿದೆ. ಆದರೊಳಗೆ ಕೇವಲ 18ರಷ್ಟು ಸೋರಿಕೆಯಾದ್ರೆ ಎಷ್ಟೊಂದು ಕೋಟಿಗಳು ಸ್ವ ಅಭಿವೃದ್ಧಿಯ ರಾಜಕಾರಣಿಗಳ ಬೊಕ್ಕಸಕ್ಕೆ ಸೇರುತ್ತೆ ಎಂಬುದನ್ನು ಊಹೆ ಮಾಡಿಕೊಳ್ಳಿ ಎಂದರು.


ಚುನಾಯಿತ ಪ್ರತಿನಿಧಿಗಳಿಗೆ ಸ್ಥಳೀಯ ಸಮಸ್ಯೆಗಳ ಕುರಿತು ಅರಿವಿದ್ದರೆ ಸಾಕೆಂಬ ನಿರ್ಧಾರ ಪ್ರಸ್ತಾಪವಾಗುತ್ತೆ. ಆದರೀಗ ಕನಿಷ್ಠ ವಿದ್ಯಾರ್ಹತೆ ಹೊಂದಿರುವ ವಿದ್ಯಾವಂತರಿಂದಲೇ ಈ ದೇಶ ಹಾಳಾಗುತ್ತಿದೆ ಎಂದು ಸಂತೋಷ್​ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Intro:ಜನಪ್ರತಿನಿಧಿಗಳಲ್ಲಿನ ಸ್ವ -ಅಭಿವೃದ್ಧಿಯ ದುರಾಸೆಯನ್ನ ಹೋಗಲಾಡಿಸಿ: ಸಂತೋಷ ಹೆಗ್ಡೆ
ಬಳ್ಳಾರಿ: ಇಂದಿನ ರಾಜಕಾರಣಿಗಳಲ್ಲಿ ಸ್ವ- ಅಭಿವೃದ್ಧಿಯ ದುರಾಸೆ ಹೆಚ್ಚಾಗಿದೆ. ಅದನ್ನು ಹೋಗಲಾಡಿಸುವ ಶಕ್ತಿ ಯುವ ಜನರಲ್ಲಿದೆ. ಇದ್ದರಲ್ಲೇ ತೃಪ್ತಿಕರ ಜೀವನ ಸಾಗಿಸುವಂತಹ ಸಮಾಜವನ್ನ ನಿರ್ಮಿಸಬೇಕಿದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾ.ಸಂತೋಷ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
ಬಳ್ಳಾರಿಯ ವಿದ್ಯಾನಗರದ ದಂಡು ಪ್ರದೇಶದ ಕ್ಯಾಥೋಲಿಕ್ ಚರ್ಚ್ ನ ಆರೋಗ್ಯ ಮಾತೆ ಪುಣ್ಯಕ್ಷೇತ್ರದ ಆವರಣದಲ್ಲಿಂದು ಯುವಜನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಅಭಿವೃದ್ಧಿ ಹೆಸರಿನಡಿ ಸಾವಿರಾರು ಕೋಟಿ ರೂ.ಗಳ ಹಗರಣ ನಡೆಯುತ್ತಿದೆ. ಕೇವಲ ಪೇಪರ್ ಗಳಲ್ಲೇ ಅಭಿವೃದ್ಧಿಯಾಗಿಬಿಟ್ಟಿದೆ. ಆದರೆ, ಮೀಸಲಿಟ್ಟ ಅನುದಾನವನ್ನ ಕೊಳ್ಳೆ ಹೊಡೆಯಲಾಗುತ್ತೆ. ಅಂತಹ ಜನ ಪ್ರತಿನಿಧಿಗಳನ್ನ ಸೋಲಿಸುವಂತಹ ಕೆಲ್ಸ ಆಗಬೇಕಿದೆ.
2017 ರ ರಾಜ್ಯ ಬಜೆಟ್ ನಲ್ಲಿ ಅಭಿವೃದ್ಧಿಗೋಸ್ಕರ ಸಾವಿರಾರು ಕೋಟಿ ರೂ.ಗಳ ಮೀಸಲಿರಿಸಿದೆ. ಆದರೊಳಗೆ ಕೇವಲ 18 ರಷ್ಟು ಸೋರಿಕೆಯಾದ್ರೆ ಎಷ್ಟೊಂದು ಕೋಟಿಗಳು ಸ್ವ - ಅಭಿವೃದ್ಧಿಯ ರಾಜಕಾರಣಿಗಳ ಬೊಕಸಕ್ಕೆ ಸೇರುತ್ತೆ ಎಂಬುದನ್ನು ಊಹೆ ಮಾಡಿಕೊಳ್ಳಿ ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಕನಿಷ್ಠ ವಿದ್ಯಾರ್ಹತೆ ಮೀಸಲಿರಿಸಬೇಕೆಂಬ ಚರ್ಚೆ ಬರುತ್ತೆ. ಮತ್ತೊಬ್ಬರು ಕನಿಷ್ಠ ವಿದ್ಯಾರ್ಹತೆ ಮೀಸಲಿರೋದು ಸರಿಯಿದೆ. ಆದ್ರೆ, ಶೇಕಡ
80 ರಷ್ಟು ಅನಕ್ಷತೆ ಈ ದೇಶದಲ್ಲಿದೆ. ಅಂಥಹದ್ದರಲ್ಲೇ ವಿದ್ಯಾರ್ಹತೆ ಅಗತ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಹಾಗೊಂದು ನಿರ್ಧಾರಕ್ಕೆ ಬರಲಾಗುತ್ತೆ. ಚುನಾಯಿತ ಪ್ರತಿನಿಧಿಗಳಿಗೆ ಸ್ಥಳೀಯ ಸಮಸ್ಯೆಗಳ ಕುರಿತು ಅರಿವಿದ್ದರೆ ಸಾಕೆಂಬ ನಿರ್ಧಾರವನ್ನು
ಪ್ರಸ್ತಾಪ ಆಗುತ್ತೆ. ಅದಕ್ಕೆ ಅಲ್ಲಿ ನೆರೆದ ಪ್ರಮುಖರೆಲ್ಲರೂ ಸಮ್ಮತಿ ಸೂಚಿಸುತ್ತಾರೆ. ಆದರೀಗ ಕನಿಷ್ಠ ವಿದ್ಯಾರ್ಹತೆ ಹೊಂದಿರುವ ವಿದ್ಯಾವಂತರಿಂದಲೇ ಈ ದೇಶ ಹಾಳಾಗುತ್ತಿದೆ. ರಾಜಕಾರಣದಲ್ಲಿ ಸ್ವ ಅಭಿವೃದ್ಧಿಯ ಪೆಂಡಭೂತ ಸೇರಿಕೊಂಡೇ ಈ ದೇಶದ ಆರ್ಥಿಕ ಸಂಪನ್ಮೂಲವನ್ನು ಲೂಟಿ ಮಾಡಲಾಗುತ್ತೆ. Body:ಯಾವುದೇ ಜಾತಿ, ಮತ ಹಾಗೂ ಪಂಥಗಳನ್ನ ನೋಡದೇ ಉತ್ತಮ ವ್ಯಕ್ತಿಗಳನ್ನು ಚುನಾವಣೆಯಲಿ ಹಾರಿಸಿ ಕಳಿಸಬೇಕಿದೆ. ಅದಕ್ಕಾಗಿ ಈ ಸಮಾಜ ವನ್ನ ಬದಲಾವಣೆ ಮಾಡಬೇಕಿದೆ ಎಂದರು.
ಈ ದೇಶದಲ್ಲಿ ಬೂಪರ್ಸ್, ಟು ಜೀ ಸ್ಪೆಕ್ಟ್ರಮ್, ಕರ್ನಾಟಕದ ಅಕ್ರಮ ಗಣಿಗಾರಿಕೆ ಸೇರಿದಂತೆ ಇನ್ನಿತರೆ ಹಗರಣಗಳಲ್ಲಿ ಸಾವಿರಾರು ಕೋಟ್ಯಾಂತರ ರೂ.ಗಳ ಕೊಳ್ಳೆ ಹೊಡೆಯಲಾಗಿದೆ. ನ್ಯಾಯಾಂಗ, ಕಾರ್ಯಾಂಗ ಹಾಗೂ ಶಾಸಕಾಂಗ ಮತ್ತು ನಾಲ್ಕನೇ ರಂಗವೂ ಕೂಡ ಕಲುಷಿತಗೊಂಡಿದೆ ಎಂದು ವಿಷಾದಿಸಿದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:ಪವರ್ ಡೈರೆಕ್ಟರ್ ನಲ್ಲಿ ಈ ವಿಡಿಯೊ ಕಳಿಸಿರುವೆ ಗಮನಿಸಿರಿ. KN_BLY_2_JUSTICE_SANTOSH_HEGDE_SPEECH_VISUALS_7203310
Last Updated : Oct 26, 2019, 3:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.