ETV Bharat / state

ಸಿಎಂ ಬದಲಾವಣೆ ವಿಚಾರ ಯತ್ನಾಳ್​ ಹುಚ್ಚಾಟ ಬಿಟ್ರೆ ಬೇರೇನೂ ಇಲ್ಲ: ಸಚಿವ ಈಶ್ವರಪ್ಪ

author img

By

Published : Oct 22, 2020, 8:07 AM IST

ಮುಖ್ಯಮಂತ್ರಿ ಬದಲಾವಣೆ ವಿಚಾರವನ್ನು ಬೆಂಗಳೂರಿನಲ್ಲಿ ನಡೆದ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಸ್ತಾಪಿಸಿದೆ. ಈ ರೀತಿ ಶಾಸಕ ಯತ್ನಾಳ್​ ಹುಚ್ಚಾಟದ ಮಾತುಗಳನ್ನಾಡೋದು ಸರಿಯಾದ ಕ್ರಮವಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.‌

Minister K.S.Eshwarappa
ಸಚಿವ ಈಶ್ವರಪ್ಪ

ಬಳ್ಳಾರಿ: ಮುಖ್ಯಮಂತ್ರಿ ಬದಲಾವಣೆ ವಿಚಾರ ಪ್ರಸ್ತಾಪಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆ ಹುಚ್ಚಾಟ ಬಿಟ್ರೆ ಬೇರೇನೂ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಮುಖ್ಯಮಂತ್ರಿ ಬದಲಾವಣೆ ವಿಚಾರ ಯತ್ನಾಳ್​ ಹುಚ್ಚಾಟ ಬಿಟ್ರೆ ಬೇರೇನೂ ಇಲ್ಲ: ಸಚಿವ ಈಶ್ವರಪ್ಪ

ಬಳ್ಳಾರಿ ನಗರದ ತಾಳೂರು ರಸ್ತೆಯಲ್ಲಿರುವ ಗೋವಿಂದ ಕಲ್ಯಾಣ ಮಂಟಪದಲ್ಲಿ ನಡೆದ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಜಿಲ್ಲಾ ಪ್ರಮುಖರ ಚುನಾವಣಾ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಮುಖ್ಯಮಂತ್ರಿ ಬದಲಾವಣೆ ವಿಚಾರವನ್ನು ಬೆಂಗಳೂರಿನಲ್ಲಿ ನಡೆದ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಸ್ತಾಪಿಸಿದೆ. ಈ ರೀತಿಯ ಹುಚ್ಚಾಟದ ಮಾತುಗಳನ್ನಾಡೋದು ಸರಿಯಾದ ಕ್ರಮವಲ್ಲ.‌

ಪ್ರಧಾನಿ ಮೋದಿ ಅವರೂ ಕೂಡ ಮುಖ್ಯಮಂತ್ರಿ ಬದಲಾವಣೆಗೆ ಚಿಂತನೆ ನಡೆಸಿದ್ದಾರೆಂಬ ಊಹಾಪೋಹದ ಮಾತುಗಳನ್ನಾಡೋದು ಶುದ್ಧ ತಪ್ಪು. ಶಾಸಕರು ಅಶಿಸ್ತಿನಿಂದ ನಡೆದುಕೊಂಡಿದ್ದಾರೆ. ಅವರ ವಿರುದ್ಧ ಪಕ್ಷ ಶಿಸ್ತುಕ್ರಮ ಕೈಗೊಳ್ಳಲಿದೆ.‌ ಏಕೆಂದರೆ ಬಿಜೆಪಿ ಮೊದಲೇ ಶಿಸ್ತಿನ ಪಕ್ಷ. ಇದನ್ನ ಇಲ್ಲಿಗೇ ಕೈಬಿಡೋದಿಲ್ಲ ಎಂದರು.

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳೇ ಗೆಲ್ಲುತ್ತಾರೆ‌. ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ಈಗಾಗಲೇ ತಿಳಿದಿದೆ ನಾವೇ ಠೇವಣಿನೂ ಕಳೆದುಕೊಳ್ಳುತ್ತೇವೆ ಎಂದು. ಹೀಗಾಗಿ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.