ETV Bharat / state

ಬಳ್ಳಾರಿಯ ಸರ್ವಾಂಗೀಣ ಅಭಿವೃದ್ಧಿಗೋಸ್ಕರವೇ ವಿಜಯನಗರ ಜಿಲ್ಲೆ ರಚನೆಯಾಗಿದೆ: ಶ್ರೀರಾಮುಲು

author img

By

Published : Feb 9, 2021, 9:50 AM IST

ಬಳ್ಳಾರಿ ಜಿಲ್ಲೆಯ ಶಾಸಕರ, ಸಚಿವರ ಪರ-ವಿರೋಧದ ನಡುವೆಯೇ ವಿಜಯನಗರ ಜಿಲ್ಲೆಯು ಅಧಿಕೃತ ಘೋಷಣೆಯಾಗಿದೆ. ಹೀಗಾಗಿ ಅದನ್ನು ನಾವೆಲ್ಲರೂ ಸ್ವಾಗತಿಸೋಣ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು.

Minister B. Sriramulu
ಸಚಿವ ಬಿ.ಶ್ರೀರಾಮುಲು

ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಕೋನ ಇಟ್ಟುಕೊಂಡೇ ನೂತನ ವಿಜಯನಗರ ಜಿಲ್ಲೆಯ ಅಧಿಕೃತ ಘೋಷಣೆಯನ್ನು ರಾಜ್ಯ ಸರ್ಕಾರ ಮಾಡಿದೆ.‌ ಹೀಗಾಗಿ ಈ ನಿರ್ಧಾರವನ್ನು ವಿರೋಧಿಸದೇ ಸಹಕರಿಸಬೇಕೆಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಜಿಲ್ಲೆಯ ಜನತೆಗೆ ಮನವಿ ಮಾಡಿದ್ದಾರೆ.

ಸಚಿವ ಬಿ.ಶ್ರೀರಾಮುಲು ವಿಜಯನಗರ ಜಿಲ್ಲೆಯ ಅಧಿಕೃತ ಘೋಷಣೆ ಬಗ್ಗೆ ಮಾತನಾಡಿದರು.

ಅಖಂಡ ಬಳ್ಳಾರಿ ಜಿಲ್ಲೆಯು ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿದೆ. ಅದರ ಸರ್ವಾಂಗೀಣ ಅಭಿವೃದ್ಧಿಗೋಸ್ಕರವೇ ಈ ವಿಜಯನಗರ ಜಿಲ್ಲೆ ರಚನೆಯಾಗಿದೆ.‌ ಜಿಲ್ಲೆಯ ಶಾಸಕರ, ಸಚಿವರ ಪರ- ವಿರೋಧದ ನಡುವೆಯೇ ವಿಜಯನಗರ ಜಿಲ್ಲೆಯು ಅಧಿಕೃತ ಘೋಷಣೆಯಾಗಿದೆ. ಹೀಗಾಗಿ ಅದನ್ನು ನಾವೆಲ್ಲರೂ ಸ್ವಾಗತಿಸೋಣ. ವಿರೋಧಿಸುವುದರಿಂದ ಏನೂ ಪ್ರಯೋಜನ ಅಗಲ್ಲ ಎಂದು ಸಚಿವ ಬಿ. ಶ್ರೀರಾಮುಲು ಅವರು ಮಾಧ್ಯಮಗಳ ಮೂಲಕ ಜಿಲ್ಲೆಯ ಜನರಿಗೆ ಕೋರಿದ್ದಾರೆ.

ಇದನ್ನೂ ಓದಿ:ವಿಜಯನಗರ ಜಿಲ್ಲೆ ರಚಿಸಿ ಅಧಿಸೂಚನೆ ಹೊರಡಿಸಿದ ಸರ್ಕಾರ : ಆನಂದ ಸಿಂಗ್​ ಮುನಿಸಿಗೆ ಮುಲಾಮು

ನೂತನ ವಿಜಯನಗರ ಜಿಲ್ಲೆಯ ಅಧಿಕೃತ ಘೋಷಣೆ ಕುರಿತು ಕಾನೂನಾತ್ಮಕ ಹೋರಾಟ ನಡೆಸುವವರಿಗೂ ಕೂಡ ನನ್ನದೊಂದು ಮನವಿ ಇದೆ. ಆಡಳಿತಾತ್ಮಕ ದೃಷ್ಟಿಯಿಂದ ಈ ಅಖಂಡ ಬಳ್ಳಾರಿ ಜಿಲ್ಲೆಯ ವಿಭಜನೆ ಅನಿವಾರ್ಯ ಆಗಿದೆ. ತೆಲುಗು ಭಾಷಿಕರ ದಬ್ಬಾಳಿಕೆ ಹೆಚ್ಚಾಗಲಿದೆಯೆಂಬ ಊಹಾಪೋಹದ ಸುದ್ದಿಗೆ ಕಿವಿಗೊಡಬಾರದು. ಅಖಂಡ ಬಳ್ಳಾರಿ ಜಿಲ್ಲೆಯು ಕನ್ನಡ, ನೆಲ, ಜಲದ ನೆಲದಲ್ಲಿದೆ. ಅದನ್ನು ಯಾರೊಬ್ಬರೂ ಕೂಡ ಮರೆಯಬಾರದೆಂದು ಸಚಿವ ಶ್ರೀರಾಮುಲು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.