ETV Bharat / state

ಬಳ್ಳಾರಿ: ಮರೆಯಾಗಿದ್ದ ಚಿರತೆ ಡ್ರೋನ್​ನಲ್ಲಿ ಸೆರೆ, ಮುಂದುವರೆದ ಕಾರ್ಯಾಚರಣೆ

author img

By

Published : Aug 8, 2022, 11:00 PM IST

ಜನ ವಾಸಸ್ಥಳದಲ್ಲಿ ಪ್ರತ್ಯಕ್ಷವಾಗಿ ಮರೆಯಾಗಿದ್ದ ಚಿರತೆಯನ್ನು ಡ್ರೋನ್​ ಮೂಲಕ ಅರಣ್ಯಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

bly_01_leopard_drone_vis01.mp4
ಡ್ರೋನ್​ನಲ್ಲಿ ಸೆರೆಯಾದ ಚಿರತೆ

ಬಳ್ಳಾರಿ: ನಗರದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಸೆರೆಗೆ ಅಧಿಕಾರಿಗಳು ಇನ್ನಿಲ್ಲದ ಪ್ರಯತ್ನ ನಡೆಸಿದ್ದು ಇದುವರೆಗೂ ಸೆರೆಯಾಗದ ಚಿರತೆಯನ್ನು ಡ್ರೋನ್ ಹಾಗೂ ಟ್ರ್ಯಾಪ್ ಕ್ಯಾಮರಾ ಮೂಲಕ ಪತ್ತೆ ಹಚ್ಚಲಾಗಿದೆ.

ಡ್ರೋನ್​ನಲ್ಲಿ ಸೆರೆಯಾದ ಚಿರತೆ

ಜಿಲ್ಲೆಯ ಸಂಜಯಗಾಂಧಿ ನಗರದ ನಿವಾಸಿಗಳು ಕಳೆದ ಎರಡು-ಮೂರು ದಿನಗಳಿಂದ ಆತಂಕದಲ್ಲಿಯೇ ಜೀವನ ಸಾಗಿಸುವಂತಾಗಿದ್ದು, ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದರು. ಚಿರತೆ ಯಾವ ಕ್ಷಣದಲ್ಲಾದ್ರೂ ಗುಡ್ಡದ ಕೆಳಗಡೆ ಇಳಿಯುವ ಆತಂಕ ಜನರಲ್ಲಿ ಮನೆ ಮಾಡಿತ್ತು. ಕಳೆದ ಮೂರು ದಿನಗಳಿಂದ ಅರಣ್ಯಾಧಿಕಾರಿಗಳು ಚಿರತೆ ಸೆರೆಗೆ ನಾಲ್ಕು ಕಡೆಗಳಲ್ಲಿ ಬೋನು ಆಳವಡಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಚಿರತೆ ಇದುವರೆಗೆ ಸೆರೆಯಾಗಿಲ್ಲ. ಹೀಗಾಗಿ ಈಗ ಗುಡ್ಡದ ಮೇಲಿರುವ ಚಿರತೆಯನ್ನು ಪತ್ತೆ ಹಚ್ಚಲು ಅರಣ್ಯಾಧಿಕಾರಿಗಳು ಡ್ರೋಣ್ ಕ್ಯಾಮರಾದ ಮೊರೆ ಹೋಗಿದ್ದರು.

ಡ್ರೋನ್ ಕ್ಯಾಮರಾದ ಮೂಲಕ ಚಿರತೆ ಎಲ್ಲಿದೆ ಅನ್ನೋದನ್ನು ಅರಣ್ಯಾಧಿಕಾರಿಗಳು ಪತ್ತೆ ಮಾಡಿದ್ದಾರೆ. ಅದೇ ಸ್ಥಳದಲ್ಲಿ ಬೋನುಗಳನ್ನು ಆಳವಡಿಸಿ ಸೆರೆ ಹಿಡಿಯಲು ಮುಂದಾಗಿದ್ದಾರೆ. ಡ್ರೋಣ್ ಜೊತೆಗೆ ಟ್ರ್ಯಾಪ್ ಕ್ಯಾಮರಾವನ್ನೂ ಎಂಟು ಕಡೆ ಆಳವಡಿಸಲಾಗಿದೆ. ಈ ಟ್ರ್ಯಾಪ್ ಕ್ಯಾಮರಾದಲ್ಲಿ ಯಾವುದೇ ಪ್ರಾಣಿ ಆ ಭಾಗದಲ್ಲಿ ಸಂಚರ ಮಾಡಿದ್ರೆ ಪೋಟೋ ಜೊತೆಗೆ ವಿಡಿಯೋ ರೆಕಾರ್ಡ್ ಆಗುತ್ತದೆ. ಈ ಮೂಲಕ ಚಿರತೆ ಗುಡ್ಡದಲ್ಲಿ ಯಾವ ಭಾಗದಲ್ಲಿ ಇದೆ ಅನ್ನೋದನ್ನು ಪತ್ತೆ ಹಚ್ಚಬಹುದಾಗಿದೆ. ಹುಲಿ ಸೇರಿದಂತೆ ವಿವಿಧ ಪ್ರಾಣಿಗಳ ಸೆರೆಗಾಗಿ ಈ ಟ್ರ್ಯಾಪ್ ಕ್ಯಾಮರಾ ಬಳಕೆ ಮಾಡಲಾಗುತ್ತಿದೆ.

ಇದನ್ನೂ ಓದಿ: ರಾತ್ರಿ ಗ್ರಾಮಕ್ಕೆ ನುಗ್ಗಿದ ಜಾಂಬವ.. ಕರಡಿ ಕಂಡು ಬೆಚ್ಚಿಬಿದ್ದ ಜನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.