ETV Bharat / state

ಪ್ರತಿಭಟನಕಾರರ ಮೇಲೆ ಹೊಸಪೇಟೆ ತಹಶೀಲ್ದಾರ್ ಗರಂ: ಬಂಧಿಸುವಂತೆ ಪೊಲೀಸರಿಗೆ ಸೂಚನೆ

author img

By

Published : Apr 3, 2021, 6:17 PM IST

ಹೊಸಪೇಟೆ ತಾಲೂಕು ಕಚೇರಿ ಮುಂಭಾಗ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೆಎಸ್ಆರ್​ಟಿಸಿ ನೌಕರರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪ್ರತಿಭಟನಕಾರರು ಎನ್ಇಕೆಎಸ್ಆರ್​ಟಿಸಿ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದಿದ್ದರಿಂದ ತಹಶೀಲ್ದಾರ್ ಎಚ್.ವಿಶ್ವನಾಥ್​ ಗರಂ ಆಗಿದ್ದಾರೆ.

Hospet Tahsildar H.Vishwanath
ಪ್ರತಿಭಟನಕಾರರ ಮೇಲೆ ಹೊಸಪೇಟೆ ತಹಶೀಲ್ದಾರ್ ಗರಂ

ಹೊಸಪೇಟೆ: ತಾಲೂಕು ಕಚೇರಿ ಮುಂಭಾಗ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೆಎಸ್ಆರ್​ಟಿಸಿ ನೌಕರರು ಪ್ರತಿಭನೆ ನಡೆಸುತ್ತಿದ್ದ ವೇಳೆ ತಹಶೀಲ್ದಾರ್ ಎಚ್.ವಿಶ್ವನಾಥ್​ ಗರಂ ಆಗಿದ್ದಾರೆ.

ಪ್ರತಿಭಟನಕಾರರ ಮೇಲೆ ಹೊಸಪೇಟೆ ತಹಶೀಲ್ದಾರ್ ಗರಂ

ರಾಜ್ಯ ಸಾರಿಗೆ ನೌಕರರ ಕೂಟದ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ, ರಾಜ್ಯ ಸರ್ಕಾರ ಬೇಡಿಕೆಗಳನ್ನು ಈಡೇರಿಸದೇ ನೌಕರರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಸರ್ಕಾರ 6ನೇ ವೇತನ ಜಾರಿ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕು. ಹೊಸಪೇಟೆಯ ಎನ್ಇಕೆಎಸ್ಆರ್​ಟಿಸಿ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದರು.

ಇದರಿಂದ ತಹಶೀಲ್ದಾರ್ ಎಚ್. ವಿಶ್ವನಾಥ ಸಿಟ್ಟಾಗಿ ಪ್ರತಿಭಟನಾಕಾರರನ್ನು ಕೂಡಲೇ ಬಂಧಿಸಿ, ಇಲ್ಲಿ ಒಬ್ಬರು ಇರಬಾರದು ಎಂದು ಪೊಲೀಸರಿಗೆ ಸೂಚಿಸಿದರು. ಮಹಿಳೆಯರು ಮಕ್ಕಳನ್ನು ಪ್ರತಿಭಟನೆಗೆ ‌‌ಕರೆದುಕೊಂಡು ಬಂದಿದ್ದನ್ನು ಗಮನಿಸಿದ ತಹಶೀಲ್ದಾರ್, ಅಮ್ಮ ತಾಯಿ ಕೈ ಮುಗಿದು ಹೇಳುತ್ತೇನೆ. ಇಲ್ಲಿಂದ ಮಕ್ಕಳನ್ನು ಕರೆದುಕೊಂಡು ಹೋಗಿ ಎಂದು ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.