ETV Bharat / state

ಇಒ ಸೇರಿ 8 ಸಿಬ್ಬಂದಿಗೆ ಕೊರೊನಾ: ಹೊಸಪೇಟೆ ತಾಪಂ ಕಚೇರಿ ಸೀಲ್​ ಡೌನ್​​​​

author img

By

Published : Aug 18, 2020, 5:43 PM IST

ಹೊಸಪೇಟೆ ತಾಲೂಕು ಪಂಚಾಯತ್​​ ಇಒ ಸೇರಿದಂತೆ ಎಂಟು ಜನ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಕಚೇರಿಯನ್ನು ಸೀಲ್ ‌ಡೌನ್ ಮಾಡಲಾಗಿದೆ.

Hospet
ಹೊಸಪೇಟೆ ತಾಲೂಕು ಪಂಚಾಯಿತಿ ಕಚೇರಿ ಸೀಲ್​ಡೌನ್

ಹೊಸಪೇಟೆ: ತಾಲೂಕಿನಲ್ಲಿ ಇಲ್ಲಿಯವರೆಗೆ 3,421 ಕೊರೊನಾ ಪ್ರಕರಣಗಳು ಕಂಡು ಬಂದಿವೆ. ಈಗ ಹೊಸಪೇಟೆ ತಾಲೂಕು ಪಂಚಾಯತ್​ನಲ್ಲಿ ಕೊರೊನಾ ವಕ್ಕರಿಸಿದ್ದು, ಒಂದು ವಾರ ಕಾಲ ಕಚೇರಿಯನ್ನು ಸೀಲ್ ​ಡೌನ್ ಮಾಡಲಾಗಿದೆ.

ತಾಲೂಕು ಪಂಚಾಯತ್​ನ ಇಒ ಸೇರಿದಂತೆ ಎಂಟು ಜನ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಕಚೇರಿ ಸೀಲ್‌ ಡೌನ್ ಮಾಡಲಾಗಿದೆ. ಒಂದು ವಾರದವರೆಗೆ ತಾಲೂಕು ಪಂಚಾಯತ್​ ಕಚೇರಿ ತೆರಯುವುದಿಲ್ಲ. ಬಳಿಕ ಕೆಲ ಸಿಬ್ಬಂದಿಯೊಂದಿಗೆ ಕಚೇರಿಯನ್ನು ಪ್ರಾರಂಭಿಸಲಾಗುವುದು. ಜನರು ಅವಶ್ಯಕತೆ ಇದ್ದಲ್ಲಿ ಮಾತ್ರ ಬರಬೇಕು ಎಂದು ತಾಲೂಕು ಪಂಚಾಯತ್​ ಸಹಾಯಕ ನಿರ್ದೇಶಕ ಎಂ.ಉಮೇಶ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.