ETV Bharat / state

ಹಿರೇಹಡಗಲಿ ಅಭಿನವ ಹಾಲ ಶ್ರೀಗಳಿಗೆ ಕೊಲೆ ಬೆದರಿಕೆ ಕರೆ.. ದೂರು ದಾಖಲಿಸಿದ ಸ್ವಾಮೀಜಿ..

author img

By

Published : Oct 10, 2021, 4:19 PM IST

ಮೂರು ತಿಂಗಳೊಳಗಾಗಿ ನಿಮ್ಮ ಮೇಲೆ ಅತ್ಯಾಚಾರ, ಅಪಹರಣದ ಆರೋಪ ಮಾಡುತ್ತೇವೆ. ಹಿಂದುತ್ವ ವಿಚಾರದಲ್ಲಿ ಭಾಗಿಯಾದರೆ ಮೂರು ತಿಂಗಳ ಒಳಗೆ ತೇಜೋವಧೆ ಮಾಡಲಾಗುತ್ತದೆ. ತೇಜೋವಧೆ ನಂತರ ನೀವು ಇದ್ದು ಸತ್ತಂತೆ ಎಂಬ ಮಾತುಗಳನ್ನು ಆಡಿದ್ದಾರೆ ಎಂದು ಆರೋಪಿಸಿ ಸ್ವಾಮೀಜಿ ದೂರು ಸಲ್ಲಿಸಿದ್ದಾರೆ..

abhinava-hala-shri
ಅಭಿನವ ಹಾಲ ಶ್ರೀ

ಹೊಸಪೇಟೆ (ವಿಜಯನಗರ) : ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಅಭಿನವ ಹಾಲ ಶ್ರೀಗಳಿಗೆ ಕೊಲೆ ಬೆದರಿಕೆ ಬಂದಿದೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನಾಮಧೇಯ ವ್ಯಕ್ತಿಯಿಂದ ಕೊಲೆ ಹಾಗೂ ತೇಜೋವಧೆ ಕರೆ ಬಂದಿದೆ. ಸೆಪ್ಟೆಂಬರ್ 29ರಂದು ಸಂಜೆ ವೇಳೆ ಅನಾಮಿಕರೊಬ್ಬರು ಕರೆ ಮಾಡಿದ್ದಾರೆ. ಹಿಂದುತ್ವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು, ರಾಷ್ಟ್ರೀಯತೆಯ ಬಗ್ಗೆ ಮಾತನಾಡಿದರೆ ಕೊಲೆ ಮಾಡುವುದಾಗಿ ಶ್ರೀಗಳಿಗೆ ಬೆದರಿಕೆ ಹಾಕಲಾಗಿದೆ. ಇದೇ ಸಂದರ್ಭದಲ್ಲಿ ಕಠೋರವಾದ ಪದಗಳಿಂದ ನಿಂದನೆ ಮಾಡಲಾಗಿದೆ.

ತಮಗೆ ಬಂದ ಬೆದರಿಕೆ ಕರೆ ಕುರಿತಂತೆ ಹಿರೇಹಡಗಲಿ ಅಭಿನವ ಹಾಲ ಶ್ರೀ ಮಾತನಾಡಿರುವುದು..

ಮೂರು ತಿಂಗಳೊಳಗಾಗಿ ನಿಮ್ಮ ಮೇಲೆ ಅತ್ಯಾಚಾರ, ಅಪಹರಣದ ಆರೋಪ ಮಾಡುತ್ತೇವೆ. ಹಿಂದುತ್ವ ವಿಚಾರದಲ್ಲಿ ಭಾಗಿಯಾದರೆ ಮೂರು ತಿಂಗಳ ಒಳಗೆ ತೇಜೋವಧೆ ಮಾಡಲಾಗುತ್ತದೆ. ತೇಜೋವಧೆ ನಂತರ ನೀವು ಇದ್ದು ಸತ್ತಂತೆ ಎಂಬ ಮಾತುಗಳನ್ನು ಆಡಿದ್ದಾರೆ ಎಂದು ಸ್ವಾಮೀಜಿ ದೂರು ಸಲ್ಲಿಸಿದ್ದಾರೆ.

ಓದಿ: ಶಿವಮೊಗ್ಗ : ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ 10 ವರ್ಷ ಜೈಲು ಶಿಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.