ವಿಜಯನಗರ ಜಿಲ್ಲೆಯಲ್ಲಿ ಭಾರಿ ಮಳೆಗೆ ಸಂಪರ್ಕ್ ಕಟ್, ಮನೆಗಳು ಜಲಾವೃತ: ಶಾಲೆಗಳಿಗೆ ರಜೆ ಘೋಷಣೆ

author img

By

Published : Aug 30, 2022, 11:44 AM IST

Updated : Aug 30, 2022, 12:23 PM IST

ವಿಜಯನಗರ ಜಿಲ್ಲೆಯಲ್ಲಿ ಭಾರಿ ಮಳೆ

ವಿಜಯನಗರ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದ ಹಿನ್ನೆಲೆ ಜನಜೀವನ ಅಸ್ತವ್ಯಸ್ತವಾಗಿದ್ದು, ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ವಿಜಯನಗರ: ಜಿಲ್ಲಾದ್ಯಂತ ಸತತ ನಾಲ್ಕನೇ ದಿನವೂ ಮಳೆ ಮುಂದುವರೆದಿದ್ದು, ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಮಳೆಯಿಂದ ಕೆರೆಗೆ ಕೋಡಿ ಬಿದ್ದರೆ, ಕೆಲವೆಡೆ ರಸ್ತೆ‌ ಸಂಪರ್ಕ ಕಡಿತಗೊಂಡು ಜನಜೀವನ ಅಸ್ತವ್ಯಸ್ತವಾಗಿದೆ. ಈ ಹಿನ್ನೆಲೆ ಜಿಲ್ಲಾಡಳಿತವು ಶಾಲೆಗಳಿಗೆ ರಜೆ ಘೋಷಿಸಿದೆ.

ಇಂದು ಸಹ ನಸುಕಿನ ಜಾವ 5 ಗಂಟೆಗೆ ಆರಂಭಗೊಂಡ ಮಳೆ ಬೆಳಗ್ಗೆ 9 ಗಂಟೆಯವರೆಗೆ ಎಡೆಬಿಡದೇ ಸುರಿಯಿತು. ಭಾರಿ ಮಳೆಗೆ ತಾಲೂಕಿನ ನಾಗಲಾಪುರ ಗ್ರಾಮಕ್ಕೆ ಭಾರಿ ಹಳ್ಳ ಬಂದಿದೆ. ಬ್ಯಾಲಕುಂದಿ - ಗರಗ ಗ್ರಾಮಗಳ ನಡುವಿನ ಸಂಪರ್ಕ ಕಡಿತಗೊಂಡಿದೆ. ಮರಿಯಮ್ಮನ ಹಳ್ಳಿ, ಗುಂಡಾ ತಾಂಡಾ ಭಾಗದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದೆ. ವಿಶ್ವವಿಖ್ಯಾತ ಹಂಪಿಯ ಹಜಾರಾಮರ ದೇವಾಲಯ ಜಲಾವೃತವಾಗಿದೆ.

ವಿಜಯನಗರ ಜಿಲ್ಲೆಯಲ್ಲಿ ಭಾರಿ ಮಳೆ

ಮಳೆಗೆ ರಸ್ತೆ ಸಂಪರ್ಕ ಬಂದ್: ಹರಪನಹಳ್ಳಿ ತಾಲೂಕಿನ ಸಿಂಗ್ರಿಹಳ್ಳಿ ಗ್ರಾಮದ ಕೆರೆಗೆ ಕೋಡಿ ಬಿದ್ದು, ಅಪಾರ ಪ್ರಮಾಣದ ನೀರು ಗ್ರಾಮದ 20ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದೆ. ಸರ್ಕಾರಿ ಶಾಲೆ ಜಲಾವೃತಗೊಂಡಿದೆ. ನಾಗತಿಕಟ್ಟೆ - ಗೌಳೇರಹಟ್ಟಿ, ಬೇವಿನಹಳ್ಳಿ - ಉಚ್ಚಂಗಿದುರ್ಗ, ಉಚ್ಚಂಗಿದುರ್ಗ-ಅರಸೀಕೆರೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಕೂಡ್ಲಿಗಿ ತಾಲೂಕಿನ ಶ್ರೀಕಂಠಾಪುರ ತಾಂಡಾದ ಹಿಂಭಾಗದಲ್ಲಿ ಹಳ್ಳದಲ್ಲಿ ಮೇವುಕೊಚ್ಚಿ ಹೋಗಿದೆ. ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನಹಡಗಲಿಯಲ್ಲೂ ಭಾರಿ ಮಳೆಯಾಗಿದೆ. ಹರಪನಹಳ್ಳಿ ತಾಲೂಕಿನಲ್ಲಿ ಕೆಲ ಮನೆಗಳಿಗೆ ಹಾನಿಯಾಗಿದೆ. ಇನ್ನು ಹಳ್ಳದ ದಂಡೆಗೆ ಇರುವ ಜಮೀನುಗಳು ಜಲಾವೃತವಾಗಿ ಬೆಳೆಗಳು ನಾಶವಾಗುತ್ತವೆ. ಇದರಿಂದ ರೈತರು ಹೆಚ್ಚಿನ ಆರ್ಥಿಕ ಸಂಕಷ್ಟಕ್ಕೆ ಒಳಾಗಿದ್ದಾರೆ.

ಶಾಲೆಗಳಿಗೆ ರಜೆ ಘೋಷಣೆ: ಮಳೆಯಾಗುತ್ತಿರುವ ಕಾರಣ ಜಿಲ್ಲೆಯ ಎಲ್ಲ ಶಾಲೆಗಳಿಗೆ ಮಂಗಳವಾರ ರಜೆ ಘೋಷಿಸಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪಿ. ಆದೇಶ ಹೊರಡಿಸಿದ್ದಾರೆ. ಇಂದಿನ ರಜಾ ದಿನವನ್ನು ಬರುವ ಭಾನುವಾರ ತರಗತಿಗಳನ್ನು‌ ನಡೆಸಿ ಸರಿದೂಗಿಸಲಾಗುವುದು ಎಂದು ತಿಳಿಸಿದ್ದಾರೆ.

(ಇದನ್ನೂ ಓದಿ: ಮನೆ ಗೋಡೆ ಕುಸಿದು ಮಹಿಳೆ ಸಾವು)

Last Updated :Aug 30, 2022, 12:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.