ETV Bharat / state

ಬಿಸಿ ಗಂಜಿ ಪಾತ್ರೆಗೆ ಬಿದ್ದ ಬಾಲಕಿ: ಪ್ರಾಣಾಪಾಯದಿಂದ ಪಾರು

author img

By

Published : Aug 9, 2019, 11:41 PM IST

ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ಅಂಗವಾಡಿ ಕೇಂದ್ರದಲ್ಲಿ ಬಾಲಕಿಯೊಬ್ಬಳು ಬಿಸಿ ಅಕ್ಕಿ ಗಂಜಿಯೊಳಗೆ ಬಿದ್ದಿದ್ದು. ಶಿಕ್ಷಕಿಯರ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಲಕಿ ದೀಕ್ಷಾ

ಬಳ್ಳಾರಿ: ಅಂಗನವಾಡಿ ಅಡುಗೆ ಕೇಂದ್ರದಲ್ಲಿ ನೀರು ಕುಡಿಯಲು ಹೋಗಿದ್ದ ಬಾಲಕಿ ಆಯ ತಪ್ಪಿ ಬಿಸಿ ಅನ್ನದ ಗಂಜಿಗೆ ಬಿದ್ದಿರುವ ಘಟನೆ ಹೊಸಪೇಟೆಯಲ್ಲಿ ನಡೆದಿದೆ.

Girl seriously injured in Anganwadi center
ಬಾಲಕಿ ದೀಕ್ಷಾ

ಇಲ್ಲಿನ ಹೊಸಪೇಟೆ ನಗರದ ಚಿತ್ತವಾಡಗಿ ಸಂತೆಬೈಲು ಪ್ರದೇಶದ ಅಂಗನವಾಡಿ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಬಿಸಿ ಗಂಜಿಯಾಗಿದ್ದರಿಂದ ದೀಕ್ಷಾ(3) ಎಂಬ ಬಾಲಕಿಗೆ ಬೆನ್ನು ಹಾಗೂ ಎಡಗೈ ಸುಟ್ಟಿದೆ.

ತಕ್ಷಣ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಪ್ರಭಾರಿ ಸಿಡಿಪಿಒ ಸುದೀಪ್​​ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಂಗನವಾಡಿ ಶಿಕ್ಷಕಿ ಅನಿತಾ ಹಾಗೂ ಸಹಾಯಕಿ ಕಮಲಮ್ಮ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದಿವ್ಯಾ ಪೋಷಕರು ಆರೋಪಿಸಿದ್ದಾರೆ.

Intro:ಚಿತ್ತವಾಡ್ಗಿ ಅಂಗನವಾಡಿ ಕೇಂದ್ರದ ಅಡುಗೆ ಕೋಣೆಯಲ್ಲಿದ್ದ ಬಿಸಿ ಗಂಜಿ ಪಾತ್ರೆಯಲ್ಲಿ ಆಯತಪ್ಪಿ ಬಿದ್ದ ಬಾಲಕಿಗೆ ಗಂಭೀರ ಗಾಯ
ಬಳ್ಳಾರಿ: ಜಿಲ್ಲೆಯ ಹೊಸಪೇಟೆ ನಗರದ ಚಿತ್ತವಾಡ್ಗಿ ಸಂತೆಬೈಲು ಪ್ರದೇಶದ ಅಂಗನವಾಡಿ ಕೇಂದ್ರದಲ್ಲಿ ಬಿಸಿ ಅನ್ನದ ಗಂಜಿಯಿದ್ದ ಪಾತ್ರೆಯಲ್ಲಿ ದೀಕ್ಷಾ(3) ಎಂಬುವ ಬಾಲಕಿ ಬಿದ್ದು ಬೆನ್ನುಮೂಳೆ ಹಾಗೂ ಎಡಗೈ ಸುಟ್ಟಿಕೊಂಡಿರುವ ಘಟನೆಯು ಇಂದು ನಡೆದಿದೆ.
ಆ ಮಗು ದೀಕ್ಷಾ, ಅಂಗನವಾಡಿ ಕೇಂದ್ರದ ಅಡುಗೆ ಕೋಣೆಯಲ್ಲಿ ನೀರು ಕುಡಿಯಲು ತೆರಳಿದ್ದಾಗ ಅಲ್ಲೇ ಇದ್ದ ಬಿಸಿ ಅನ್ನದ ಗಂಜಿಯ ಪಾತ್ರೆಯೊಳಗೆ ಆಯತಪ್ಪಿ ಬಿದ್ದ ಪರಿಣಾಮ ಗಂಭೀರ ಸ್ವರೂಪದ ಗಾಯಗಳಾಗಿವೆ. ಈ ವಿಷಯ ಮಗುವಿನ ಪೋಷಕರಿಗೆ ತಿಳಿದ ಕ್ಷಣಾರ್ಧದಲ್ಲೇ ಹೊಸಪೇಟೆ ನಗರದ ಉಪ ವಿಭಾಗಮಟ್ಟದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ. ನಂತರ ಮಗುವಿನ ಬೆನ್ನು ಮತ್ತು ಎಡಗೈಗೆ ಬ್ಯಾಂಡೇಜ್ ಸುತ್ತಿ, ಚಿಕಿತ್ಸೆ ಕೊಡಿಸಲಾಗಿದೆ. ಅದೃಷ್ಟವಶಾತ್ ಮಗು ಪ್ರಾಣಾಪಾಯ ದದಿಂದ ಪಾರಾಗಿದೆ. ಗಾಯ ಮಾಸಲು ಕೆಲದಿನಗಳು ಬೇಕೆಂದು ವೈದ್ಯರು ತಿಳಿಸಿದ್ದಾರೆ.
Body:ಪ್ರಭಾರಿ ಸಿಡಿಪಿಒ ಸುದೀಪ ಅವರು ಮಾತನಾಡಿ, ಶಿಕ್ಷಕಿ ಅನಿತಾ ಹಾಗೂ ಸಹಾಯಕಿ ಕಮಲಮ್ಮ ಅಂಗನವಾಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅನ್ನದ ಬಿಸಿ ಗಂಜಿಯ ಪಾತ್ರೆಯಲ್ಲಿ ಮಗು ಬಿದ್ದಿರುವುದರಿಂದ ಬಾಲಕಿಯು ಗಂಭೀರವಾಗಿ ಗಾಯಗೊಂಡಿದ್ದು,
ಈ ಘಟನೆ ಕುರಿತು ವಿಚಾರಣೆ ಮಾಡಲಾಗುವುದು. ಬಳಿಕ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ದೀಕ್ಷಾ ಮಗುವಿನ ತಂದೆ ಶಿವಮೂರ್ತಿ ಅವರು ಮಾತನಾಡಿ, ಅನ್ನದ ಬಿಸಿ ಗಂಜಿ ಪಾತ್ರೆಯಲ್ಲಿ ಮಗು ಬೀಳಲು ಸಾಧ್ಯವಿಲ್ಲ. ಬಿಸಿ ನೀರಿನಿಂದ ಮಗುವಿಗೆ ಸುಟ್ಟ ಗಾಯಗಳಾಗಿವೆ. ಕರ್ತವ್ಯ ನಿರತರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ. ಹಾಗಾಗಿ ಅಂಗನ ವಾಡಿ ಶಿಕ್ಷಕಿ ಮತ್ತು ಸಹಾಯಕಿ ವಿರುದ್ಧ ಚಿತ್ತವಾಡ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ
ಎಂದು ತಿಳಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_7_BISI_GANJI_PATREYALI_BIDHU_BALAKI_GAYA_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.