ETV Bharat / state

ಭಾರತ್ ಸ್ಕೌಟ್ಸ್-ಗೈಡ್ಸ್​​​ನಿಂದ ಕೋವಿಡ್​ ಜಾಗೃತಿ: ನಿತ್ಯ 100 ಬಡ ಜನರಿಗೆ ಉಚಿತ ಊಟ ವಿತರಣೆ

author img

By

Published : May 22, 2021, 11:00 AM IST

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಬಳ್ಳಾರಿ ಸಂಸ್ಥೆಯವರಿಂದ ಕೋವಿಡ್-19 ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗುತ್ತಿದೆ. ಕಳೆದ 20 ದಿನಗಳಿಂದ ಬಡ ಜನರಿಗೆ ಉಚಿತ ಊಟ ಮತ್ತು ನೀರನ್ನು ವಿತರಿಸುವ ಕೆಲಸವನ್ನು ಸಹ ಮಾಡುತ್ತಿದ್ದಾರೆ.

Free meals distribution
ಭಾರತ್ ಸ್ಕೌಟ್ಸ್-ಗೈಡ್ಸ್​​​ನಿಂದ ಉಚಿತ ಊಟ, ನೀರು ವಿತರಣೆ

ಬಳ್ಳಾರಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಬಳ್ಳಾರಿ ಸಂಸ್ಥೆಯವರಿಂದ ನಾಲ್ಕು ಹಳ್ಳಿಗಳಿಗಳಲ್ಲಿ ಕೊರೊನಾ ಜಾಗೃತಿ ಮೂಡಿಸಿ ಮಾಸ್ಕ್​​ಗಳನ್ನು ವಿತರಿಸಿದರು. ಜತೆಗೆ ಉಚಿತ ಆಹಾರವನ್ನು ಸಹ ನೀಡಿದರು.

ಭಾರತ್ ಸ್ಕೌಟ್ಸ್-ಗೈಡ್ಸ್​​​ನಿಂದ ಕೋವಿಡ್​ ಜಾಗೃತಿ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತೆ ಪಿ.ಜಿ.ಆರ್. ಸಿಂಧ್ಯಾ ಮತ್ತು ಡಿಡಿಪಿಐ ಸಿ. ರಾಮಪ್ಪ ಬಳ್ಳಾರಿ ಅವರ ಮಾರ್ಗದರ್ಶನದಲ್ಲಿ ಕೋವಿಡ್-19 ರೋಗದ ಸಾಂಕ್ರಾಮಿಕ ಜಾಗೃತಿ ಮೂಡಿಸುವ ಮತ್ತು ಮಾಸ್ಕ್ ನೀಡುವ ಕಾರ್ಯಕ್ರಮವನ್ನು ಹಳ್ಳಿಗಳಲ್ಲಿ ನಡೆಸಿದರು.‌

ಹಳ್ಳಿಗಳಿಗೆ ಹೋಗಿ ಜಾಗೃತಿ:

ಬಳ್ಳಾರಿ ತಾಲೂಕಿನ ಕೊಳಗಲ್ಲು ಗ್ರಾಮ, ಕೃಷ್ಣ ನಗರ ಕ್ಯಾಂಪ್, ಯರಂಗಳಿ ಗ್ರಾಮಗಳಿಗೆ ಹೋಗಿ ಧ್ವನಿ ವರ್ಧಕಗಳ ಮೂಲಕ ಕೋವಿಡ್-19 ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಬಡ ಜನರಿಗೆ ನಿತ್ಯ 100 ಪ್ಯಾಕೆಟ್ ಊಟ, ನೀರು ವಿತರಣೆ:

ಕಳೆದ 20 ದಿನಗಳಿಂದ ನಗರದ ರಾಯಲ್, ಸಂಗಮ್ ಸರ್ಕಲ್, ಇನ್ನಿತರೆ ಪ್ರದೇಶದಲ್ಲಿ ಇರುವ ಬಡ ಜನರಿಗೆ ಉಚಿತ ಊಟ ಮತ್ತು ನೀರನ್ನು ವಿತರಿಸುತ್ತಿದ್ದಾರೆ.

ಇದನ್ನೂ ಓದಿ: ಕೋಲಾರದಲ್ಲಿ ಬೆಳ್ಳಂಬೆಳಗ್ಗೆ ಫೀಲ್ಡಿಗಿಳಿದ ಪೊಲೀಸರಿಂದ ವಾಹನ ಜಪ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.