ETV Bharat / state

Free Bus : ಶಕ್ತಿ ಯೋಜನೆಗೆ ಚಾಲನೆ ನೀಡಿದ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ

author img

By

Published : Jun 11, 2023, 5:43 PM IST

ಇಂದು ಬಳ್ಳಾರಿ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಗೆ ಸಚಿವ ಬಿ. ನಾಗೇಂದ್ರ ಚಾಲನೆ ನೀಡಿದರು.

Free Bus
ಉಚಿತ ಬಸ್

ಬಳ್ಳಾರಿ : ಶಕ್ತಿ ಯೋಜನೆಯು ನಾನು ಜಿಲ್ಲಾ ಉಸ್ತುವಾರಿ ಸಚಿವ ಆದ ನಂತರದ ನನ್ನ ರಾಜಕೀಯ ಬದುಕಿನ ಅತ್ಯಂತ ಮಹತ್ವದ ಮೊದಲ ಕಾರ್ಯಕ್ರಮ ಎಂದು ಪರಿಶಿಷ್ಟ ಪಂಗಡ ಕಲ್ಯಾಣ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಗಳ ಸಚಿವ ಬಿ. ನಾಗೇಂದ್ರ ಹೇಳಿದರು. ಬಳ್ಳಾರಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಸಾರಿಗೆ ಇಲಾಖೆ ವತಿಯಿಂದ ಏರ್ಪಡಿಸಲಾಗಿತ್ತು. ಈ ವೇಳೆ ಮಹಿಳೆಯರ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವ ಶಕ್ತಿ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು.

ಇಂತಹ ಒಂದು ಮಹತ್ವದ ಕಾರ್ಯಕ್ರಮವನ್ನು ಜಾರಿಗೆ ತಂದ ಸರ್ಕಾರಕ್ಕೆ ಧನ್ಯವಾದ ಹೇಳುವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದಾಗ ಈ ಕಾರ್ಯಕ್ರಮದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು. ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಂತೆ ಸೂಚಿಸಿದರೆಂದು ನಾಗೇಂದ್ರ ತಿಳಿಸಿದರು.

ಇಂದು ಸುದ್ದಿ ಮಾಧ್ಯಮಗಳಲ್ಲಿ ಮಹಿಳೆಯರ ಖುಷಿ ಗಮನಿಸಿದರೆ ನಮ್ಮ ಸರ್ಕಾರ ಹಾಗೂ ಸಿಎಂ ಅವರಿಗೆ ಮಹಿಳೆಯರ ಹಾರೈಕೆ ಸಿಕ್ಕಂತಾಗಿದೆ. ನಾರಿಯರು ಹಲವಾರು ಹಬ್ಬಗಳನ್ನು ಆಚರಿಸುತ್ತಾರೆ. ಆದರೆ ಇಂದು ರಾಜ್ಯದ ಮಹಿಳೆಯರಿಗೆ ನಿಜವಾದ ಹಬ್ಬ ಎಂದು ಹೇಳಿದ ಸಚಿವ ಬಿ. ನಾಗೇಂದ್ರ, ಮಹಿಳೆಯರು ದಿನನಿತ್ಯದ ಕೆಲಸಗಳಿಗೆ ಖರ್ಚು ಮಾಡುವುದೇ ಕಷ್ಟ. ಇಂತಹ ಸಂದರ್ಭದಲ್ಲಿ ಸಾರಿಗೆ ವೆಚ್ಚ ಭರಿಸುವುದು ಕಷ್ಟವಾಗಿತ್ತು. ಈ ಯೋಜನೆ ತುಂಬ ಸಹಕಾರಿಯಾಗಲಿದೆ ಎಂದರು.

ದಿನನಿತ್ಯದ ಬದುಕಿನಲ್ಲಿ ಯಾರಿಗೋ ಅನಾರೋಗ್ಯ ಇದ್ದರೆ ಭೇಟಿ ಆಗಲು, ತವರು ಮನೆಗೆ ಹೋಗಿ ಬರಲು, ವ್ಯಾಪಾರ ವಹಿವಾಟು ನಡೆಸುವ ಮಹಿಳೆಯರ ಸಬಲೀಕರಣ ಈ ಯೋಜನೆಯಿಂದ ಆಗಲಿದೆ. ಅದರಲ್ಲೂ ವ್ಯಾಪಾರ ವಹಿವಾಟು ನಡೆಸುವ ಗ್ರಾಮೀಣ ಭಾಗದ ಮಹಿಳೆಯರಿಗೆ ಸಾಕಷ್ಟು ಅನುಕೂಲ ಆಗಲಿದೆ. ಗ್ರಾಮೀಣ ಭಾಗದ ಮಹಿಳಾ ವ್ಯಾಪಾರಿಗಳು ಗಳಿಸುವ ಲಾಭದಲ್ಲಿ ದೊಡ್ಡ ಪಾಲು ಸಂಚಾರಕ್ಕೆ ಖರ್ಚಾಗುತ್ತಿತ್ತು. ಆದರೆ ಆ ಖರ್ಚು ತಪ್ಪಲಿದೆ. ರಾಜ್ಯದ ಯಾವುದೇ ಮಹಿಳೆಯರು ರಾಜ್ಯದ ಯಾವುದೇ ಗಡಿಯಿಂದ ಇನ್ನೊಂದು ಗಡಿವರೆಗೆ ಸಂಚರಿಸಬಹುದು ಎಂದು ನಾಗೇಂದ್ರ ಹೇಳಿದರು.

ಈ ಯೋಜನೆ ಇಡೀ ದೇಶದಲ್ಲಿ ಅಪರೂಪದ ಯೋಜನೆವಾಗಿದೆ. ದೇಶದ ಜನ ರಾಜ್ಯದತ್ತ ನೋಡುವಂತಾಗಿದೆ. ಮಹಿಳೆಯರಿಗೆ ಪ್ರಯಾಣ ಉಚಿತ ಆಗಿರುವುದರಿಂದ ಪುರುಷರ ಹಣವೂ ಉಳಿತಾಯ ಆಗಲಿದೆ. ಯೋಜನೆಯನ್ನು ಮಹಿಳೆಯರು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಮಾಧ್ಯಮದವರು ಯೋಜನೆ ಬಗ್ಗೆ ಧನಾತ್ಮಕ ಸುದ್ದಿ ಮಾಡಿ, ಸಹಕರಿಸಬೇಕು. ಬಳ್ಳಾರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನನ್ನ ನಾಯಕರು, ಸಾರ್ವಜನಿಕರು ಸಹಕಾರ ನೀಡಬೇಕು. ಅದರಲ್ಲೂ ಅಧಿಕಾರಿಗಳು ಈ ಹಿಂದೆ ಹೇಗೆ ಕೆಲಸ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಇನ್ಮುಂದೆ ಎಲ್ಲರೂ ನನಗೆ ಸಹಕಾರ ನೀಡಬೇಕು ನಾಗೇಂದ್ರ ಅಧಿಕಾರಿಗಳಿಗೆ ಸೂಚನೆ ಕೊಟ್ಟರು.

ಉದ್ಘಾಟನೆ ವೇಳೆ ಸಾರಿಗೆ ಅಧಿಕಾರಗಳ ಎಡವಟ್ಟು : ಬಸ್‌ನ ನಾಮಫಲಕ ಜಾಗಕ್ಕೆ ಬಿಜೆಪಿ ಚಿಹ್ನೆ ಅಂಟಿಸಿದ್ದ ಸಾರಿಗೆ ಸಿಬ್ಬಂದಿ ಅಧಿಕಾರ್ಳ ವಿರುದ್ಧ ಸಚಿವ ನಾಗೇಂದ್ರ ಗರಂ ಆದ ಘಟನೆ ಬಳ್ಳಾರಿಯ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ನಡೆಯಿತು. ಸಚಿವರು ಗರಂ ಆಗುತ್ತಿದಂತೆ ಎಚ್ಚೆತ್ತ ಅಧಿಕಾರಿಗಳು ನಾಮಫಲಕ್ಕೆ ಹಾಕಿದ್ದ ಕಮಲ ಚಿತ್ರದ ಕಾಗದ ಕಿತ್ತು ಹಾಕಿದರು. ತೆರವಿನ ಬಳಿಕ ನಾಗೇಂದ್ರ ಶಕ್ತಿ ಯೋಜನೆ ಉದ್ಘಾಟನೆ ಮಾಡಿದರು.

ಶಕ್ತಿ ಯೋಜನೆಯಿಂದ ಅನುಕೂಲ : ಬಳಿಕ ರಾಜ್ಯಸಭಾ ಸದಸ್ಯ ಡಾ. ಸಯ್ಯದ್ ನಾಸಿರ್ ಹುಸೇನ್ ಮಾತನಾಡಿಮ, ನಾವು ಭರವಸೆಗಳನ್ನು ನೀಡಿದ್ದೆವು. ಜನರು ನಮಗೆ ಬಹುಮತ ನೀಡಿದ್ದೀರಿ. ಜಿಲ್ಲೆಯ 5 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆದ್ದಿದೆ. ನಾವು ನೀಡಿದ ಭರವಸೆಗಳನ್ನು ಜಾರಿಗೆ ತರುವ ಸಮಯ ಇದು. ಕಾಂಗ್ರೆಸ್ ಮೊದಲಿನಿಂದಲೂ ಬಡವರ, ದುರ್ಬಲರ ಪರ ಇರುವ ಪಕ್ಷ.

ಈ ಹಿನ್ನೆಲೆಯಲ್ಲಿ ಇಂದು ಶಕ್ತಿ ಯೋಜನೆಯಂತಹ ಕಾರ್ಯಕ್ರಮ ಜಾರಿಗೆ ತರಲು ಸಾಧ್ಯ ಆಗಿದೆ. ಹಾಗು ಪ್ರತಿನಿತ್ಯ ಕೆಲಸ ಮಾಡುವ ಮಹಿಳೆಯರು, ವ್ಯಾಪಾರಿ ಮಹಿಳೆಯರಿಗೆ ಹಾಗೂ ಸಾಮಾನ್ಯ ಮಹಿಳೆಯರಿಗೂ ಕೂಡ ಶಕ್ತಿ ಯೋಜನೆಯಿಂದ ಅನುಕೂಲ ಆಗಲಿದೆ. ಡಿಎಂಎಫ್ ನಿಧಿಯಿಂದ ಬಳ್ಳಾರಿಗೆ 6 ಹೊಸ ಬಸ್ ತರಲಾಗಿದೆ, ಕೆಕೆಆರ್ ಡಿಬಿ ನಿಧಿಯಿಂದ 60 ನೂತನ ಬಸ್ ಗಳು ಬಳ್ಳಾರಿಗಾಗಿ ಖರೀದಿ ಆಗಲಿವೆ. ನಮ್ಮ ನಾಯಕ ರಾಹುಲ್ ಗಾಂಧಿಯವರು ಭರವಸೆ ನೀಡಿರುವಂತೆ ಬಳ್ಳಾರಿಯನ್ನು ಜೀನ್ಸ್ ರಾಜಧಾನಿ ಆಗಿ ರೂಪಿಸಲಾಗುವುದು ಎಂದರು.

ಮಹಿಳೆಯರ ಆಶೀರ್ವಾದ ಇರಲಿದೆ : ಇನ್ನು ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ನಮ್ಮ ಪಕ್ಷಕ್ಕೆ ಮಹಿಳೆಯರ ಆಶೀರ್ವಾದ ಇರಲಿದೆ. ಇಂದು ಅಧಿಕಾರಕ್ಕೆ ಬಂದಿರುವ ಸರ್ಕಾರ ಕಾಂಗ್ರೆಸ್ ಪಕ್ಷ ಕೊಟ್ಟ ಮಾತು ತಪ್ಪದಂತಹ ಪಕ್ಷ. ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಕೊಟ್ಟ ಮಾತು ತಪ್ಪುವುದಿಲ್ಲ. ಮಹಿಳೆಯರಿಗೆ ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ. ಜನರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಅಗತ್ಯ ಇಲ್ಲ. ವಾರ್ಡ್​ನ ಸದಸ್ಯರು, ಶಾಸಕರು, ಸಚಿವರಿಗೆ ನೇರವಾಗಿ ಅರ್ಜಿ ಕೊಡಬಹುದು ಎಂದು ಹೇಳಿದರು.

ಇದನ್ನೂ ಓದಿ : Congress Guarantee Scheme: ಗ್ಯಾರಂಟಿ ಯೋಜನೆ ಬಗ್ಗೆ ಪ್ರತಿಪಕ್ಷ ಗೇಲಿ ಮಾಡಿಕೊಂಡೇ ಇರಲಿ, ನಾವು ಜನರ ಮಧ್ಯೆ ಇದ್ದು ಕೆಲಸ ಮಾಡುತ್ತೇವೆ: ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.